ಬೆಂಗಳೂರಿನಲ್ಲಿ ನಾಳೆ ಮೋದಿ ಮೆಗಾ ರೋಡ್ ಶೋ – 5 ಕಿ.ಮೀ ವ್ಯಾಪ್ತಿಯ ಮನೆಗಳಿಗೆ ನೋಟಿಸ್!

ಬೆಂಗಳೂರಿನಲ್ಲಿ ನಾಳೆ ಮೋದಿ ಮೆಗಾ ರೋಡ್ ಶೋ – 5 ಕಿ.ಮೀ ವ್ಯಾಪ್ತಿಯ ಮನೆಗಳಿಗೆ ನೋಟಿಸ್!

ಬೆಂಗಳೂರು: ಮೇ 10 ರಂದು ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಬಿಜೆಪಿ ಭರ್ಜರಿ ಪ್ರಚಾರ ನಡೆಸುತ್ತಿದೆ. ಪ್ರಧಾನಿ ಮೋದಿ ಶನಿವಾರ ಮತ್ತೆ ರಾಜ್ಯಕ್ಕೆ ಬರುತ್ತಿದ್ದು, ಬೆಂಗಳೂರಿನಲ್ಲಿ ನಡೆಯಲಿರುವ ರೋಡ್ ಶೋ ನಲ್ಲಿ ಭಾಗಿಯಾಗಲಿದ್ದಾರೆ.

ಪ್ರಧಾನಿಯವರು ಏಪ್ರಿಲ್ 29 ಮತ್ತು 30ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ.  ಶನಿವಾರ ಬೆಂಗಳೂರಿನಲ್ಲಿ ಮೆಗಾ ರೋಡ್‌ ಶೋ ನಡೆಸಲಿದ್ದಾರೆ. ಹೀಗಾಗಿ ರೋಡ್​ ಶೋ ನಡೆಯುವ ಸ್ಥಳಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಹೆಜ್ಜೆ ಹೆಜ್ಜೆಗೂ ಪೊಲೀಸ್ ತಪಾಸಣೆ ನಡೆಸಿದ್ದಾರೆ.

ಇದನ್ನೂ ಓದಿ: ಬಿಜೆಪಿ, ಜೆಡಿಎಸ್  ಸಮ್ಮಿಶ್ರ ಸರ್ಕಾರ ರಚನೆಯಾಗುತ್ತಾ? : ದೇವೇಗೌಡ್ರು, ಮೋದಿ ಸಾಹೇಬ್ರು ಮಾತಾಡ್ಕೊಂಡವ್ರೆ – ಪ್ರೀತಂ ಗೌಡ

ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ಸುಮಾರು 5. 5 ಕೀ.ಮೀ ರೋಡ್ ಶೋ ನಡೆಸಲಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯ ನೈಸ್ ರೋಡ್ ಜಂಕ್ಷನ್‌ನಿಂದ ಸುಮನಹಳ್ಳಿ ಜಂಕ್ಷನ್‌ವರೆಗೆ ರೋಡ್‌ಶೋ ನಡೆಯಲಿದೆ. ಹೀಗಾಗಿ ಮೋದಿ ರೋಡ್ ಶೋ ನಡೆಸುವ ರಸ್ತೆಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. 5 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಪ್ರತಿ ಮನೆ ಮನೆಗೂ, ಅಂಗಡಿ ಮಾಲೀಕರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ರಸ್ತೆ ಅಕ್ಕ‌‌ ಪಕ್ಕ ಇರುವ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಹೆಸರು, ವಿಳಾಸ, ಮೊಬೈಲ್ ನಂಬರ್ ಒದಗಿಸುವಂತೆ ಸೂಚಿಸಿದ್ದಾರೆ. ಹಾಗೇ ಕಟ್ಟಡಗಳಲ್ಲಿ ಕೆಲಸ ನಿರ್ವಹಿಸುವ ಸೆಕ್ಯೂರಿಟಿ ಗಾರ್ಡ್ ಅಲರ್ಟ್ ಆಗಿರಬೇಕು. ಕೆಲಸದ ವೇಳೆ ಏನಾದರು ಅನುಮಾನಸ್ಪದವಾಗಿ ಕಂಡರೆ ತಕ್ಷಣ ಮಾಹಿತಿ ನೀಡಬೇಕು ಎಂದು ಸೂಚಿಸಿದ್ದಾರೆ.

ರೋಡ್ ಶೋ ನಡೆಯುವ ದಿನದಂದು ಯಾವುದೇ ಕಟ್ಟಡಗಳ ಮೇಲೆ ಜನರನ್ನು ನಿಲ್ಲಲು ಬಿಡಬಾರದು, ಎಲ್ಲಾ ಕಟ್ಟಡಗಳ ಮೇಲೂ ಓರ್ವ ಪೊಲೀಸ್ ನಿಯೋಜನೆಗೆ ಸಿದ್ಧತೆ ಮಾಡಬೇಕು. ಕಟ್ಟಡದ ಮೇಲೆ ಯಾವುದೇ ರೀತಿ ವಸ್ತುಗಳಿದರೂ ಅದನ್ನ ತೆರವು ಗೊಳಿಸಬೇಕು ಅಂತಾ ಅಧಿಕಾರಿಗಳು ಸೂಚಿಸಿದ್ದಾರೆ.

suddiyaana