ಹೈದ್ರಾಬಾದ್ ಪರ ಪಾಕೆಟ್ ಡೈನಮೋ ಪವರ್ ಶೋ – ಇಶಾನ್ ಕಿಶನ್ ಅದೃಷ್ಟ ಬದಲಾಗಿದ್ದೇಗೆ?

2026ರ ಐಪಿಎಲ್ ನಲ್ಲಿ ಆರೆಂಜ್ ಕ್ಯಾಪ್ ರೇಸ್ ಜೋರಾಗಿದೆ. ದಿನಕ್ಕೊಬ್ಬರ ತಲೆ ಮೇಲೆ ಆರೆಂಜ್ ಕ್ಯಾಪ್ ಹೋಗ್ತಿದೆ. ಅದ್ರಲ್ಲೂ ಹೈದ್ರಾಬಾದ್ ತಂಡದ ಆಟಗಾರರು ಈ ಲಿಸ್ಟ್ ನಲ್ಲಿ ಟಾಪ್ ನಲ್ಲಿದ್ದಾರೆ. ಐಪಿಎಲ್ನಲ್ಲಿ ಆರೆಂಜ್ ಕ್ಯಾಪ್ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ನೀಡುವ ಗೌರವ. 2026ರ ಐಪಿಎಲ್ ಆವೃತ್ತಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ನ ಹೆನ್ರಿಚ್ ಕ್ಲಾಸೆನ್ ಮೇ 9ರ ವೇಳೆಗೆ 11 ಪಂದ್ಯಗಳಲ್ಲಿ 494 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಹಾಗೇ ಈ ರೇಸ್ ನಲ್ಲಿರೋ ಇಶಾನ್ ಕಿಶನ್ ಆಟ ಎಲ್ಲರ ಮೆಚ್ಚುಗೆ ಗಳಿಸುತ್ತಿದೆ. ಈ ವರ್ಷ ಇಶಾನ್ ಕಿಶನ್ ಬೇರೆಯದ್ದೇ ರೀತಿಯಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. 11 ಪಂದ್ಯಗಳಿಂದ 409 ರನ್ ಗಳಿಸಿರೋ ಕಿಶನ್ ಆರೆಂಜ್ ಕ್ಯಾಪ್ ರೇಸ್ ನಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಅಷ್ಟಕ್ಕೂ ಇಶಾನ್ ಕಿಶನ್ ಗೆ ಈ ವರ್ಷ ತುಂಬಾನೇ ಸ್ಪೆಷಲ್ ಆಗಿದೆ.
ಇದನ್ನೂ ಓದಿ : RCBಗಿಲ್ಲ ಜೋಶ್.. DCಗಿಲ್ಲ ಸ್ಟಾರ್ಕ್ – ಪ್ಲೇ ಆಫ್ಸ್ ಟೈಮಲ್ಲೇ ಕೈಕೊಡ್ತಾರಾ?
ಜನವರಿ ತಿಂಗಳ ಕೊನೆಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ-20ಐ ಸರಣಿಗೆ ಇಶಾನ್ ಕಿಶನ್ ಅಚ್ಚರಿ ಎನ್ನುವಂತೆ ಆಯ್ಕೆಯಾಗಿದ್ರು. ಯಾಕಂದ್ರೆ ಅದಕ್ಕೂ ಮುನ್ನ 2 ವರ್ಷಗಳಿಂದ ಅವ್ರು ಭಾರತದ ಪರ ಪಂದ್ಯಗಳನ್ನೇ ಆಡಿರಲಿಲ್ಲ. ಹೀಗಿದ್ರೂ ಬಿಸಿಸಿಐ ಮ್ಯಾನೇಜ್ಮೆಂಟ್ ಇಶಾನ್ ಕಿಶನ್ಗೆ ಚಾನ್ಸ್ ನೀಡಿತ್ತು. ಇದೇ ವೇಳೆ ಇಂಜುರಿಯಿಂದಾಗಿ ತಿಲಕ್ ವರ್ಮಾರನ್ನ ಕೈಬಿಡಬೇಕಿತ್ತು. ಹೀಗಾಗಿ ತಿಲಕ್ ಪ್ಲೇಸ್ಗೆ ಕಿಶನ್ನ ಪಿಕ್ ಮಾಡ್ತಾರೆ. ಈ ಅವಕಾಶವನ್ನ ಎರಡೂ ಕೈಗಳಿಂದ ಬಾಚಿಕೊಂಡ ಕಿಶನ್ ಹಿಂತಿರುಗಿ ನೊಡ್ಲೇ ಇಲ್ಲ. ಐದು ಪಂದ್ಯಗಳ ಸರಣಿಯಲ್ಲಿ 4 ಇನ್ನಿಂಗ್ಸ್ಗಳಲ್ಲಿ ಒಂದು ಶತಕವೂ ಸೇರಿದಂತೆ 215 ರನ್ಸ್ ಕಲೆ ಹಾಕಿದ್ರು. ಈ ಮೂಲಕ ಟಿ-20 ವಿಶ್ವಕಪ್ನ ಪ್ಲೇಯಿಂಗ್ 11ನಲ್ಲಿ ಚಾನ್ಸ್ ನೀಡ್ಲೇಬೇಕು ಅನ್ನೋ ಥರದಲ್ಲಿ ಪರ್ಫಾಮ್ ಮಾಡಿದ್ರು. ಕೊನೆಗೆ ಓಪನರ್ ಆಗಿದ್ದ ಸಂಜು ಸ್ಯಾಮ್ಸನ್ರನ್ನೇ ಕೂರಿಸಿ ಇಶಾನ್ ಕಿಶನ್ಗೆ ಓಪನರ್ ಆಗಿ ಟಿ-20 ವಿಶ್ವಕಪ್ನಲ್ಲಿ ಮ್ಯಾನೇಜ್ಮೆಂಟ್ ಚಾನ್ಸ್ ಕೊಡುತ್ತೆ. ಈ ವೇಳೆ ಮತ್ತೆ ಪಾಕೆಟ್ ಡೈನಮೋ ಒಳ್ಳೆ ಪರ್ಫಾಮೆನ್ಸ್ ನೀಡ್ತಾರೆ. ಅದ್ರಲ್ಲೂ ಪಾಕಿಸ್ತಾನ ವಿರುದ್ಧ ಅಭಿಷೇಕ್ ಶರ್ಮಾ ಡಕ್ ಔಟ್ ಆದಾಗ ಕ್ರೂಶಿಯಲ್ ಟೈಮಲ್ಲೂ 77 ರನ್ಗಳ ಇನ್ನಿಂಗ್ಸ್ ಆಡಿದ್ರು. ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 38 ರನ್ ಮತ್ತು ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ 54 ರನ್ ಗಳಿಸಿದ ಕಿಶನ್ ಬ್ಯಾಟಿಂಗ್ ಆರ್ಡರ್ನಲ್ಲಿ ಬೆನ್ನೆಲುಬಾದ್ರು. 9 ಪಂದ್ಯಗಳಿಂದ 3 ಅರ್ಧಶತಕ ಸೇರಿದಂತೆ 317 ರನ್ಗಳನ್ನ ಕಲೆ ಹಾಕಿದ್ರು. ಅದೂ ಕೂಡ 193+ ಸ್ಟ್ರೈಕ್ರೇಟ್ನಲ್ಲಿ. ಌಂಡ್ ಫೀಲ್ಡಿಂಗ್ನಲ್ಲೂ ಕಿಶನ್ ಆಟ ಅತ್ಯದ್ಭುತವಾಗಿತ್ತು.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯೇ ಟರ್ನಿಂಗ್ ಪಾಯಿಂಟ್!
ಇಶಾನ್ ಕಿಶನ್ ಟೀಂ ಇಂಡಿಯಾಗೆ ಕಂ ಬ್ಯಾಕ್ ಮಾಡೋಕೆ ಮುಖ್ಯ ಕಾರಣವೇ ದೇಶೀ ಟೂರ್ನಿಯಲ್ಲಿನ ಅದ್ಭುತ ಪ್ರದರ್ಶನ. ಬುಚಿಬಾಬು ಟೂರ್ನಮೆಂಟ್, ಐಪಿಎಲ್, ರಣಜಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡೋಕೆ ಸ್ಟಾರ್ಟ್ ಮಾಡಿದ್ರು. 2025ರಲ್ಲಿ ಜಾರ್ಖಂಡ್ ಪರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ನಾಯಕನಾಗಿ ತಂಡವನ್ನ ಅದ್ಭುತವಾಗಿ ಮುನ್ನಡೆಸಿದ್ರು. 10 ಪಂದ್ಯಗಳಲ್ಲಿ 197.44 ರ ಸ್ಟ್ರೈಕ್ ರೇಟ್ನಲ್ಲಿ 517 ರನ್ಗಳೊಂದಿಗೆ ಟೂರ್ನಮೆಂಟ್ನ ಹೈಯೆಸ್ಟ್ ಸ್ಕೋರರ್ ಆದ್ರು. ಌಂಡ್ ಫೈನಲ್ ಪಂದ್ಯದಲ್ಲಿ 49 ಎಸೆತಗಳಲ್ಲಿ ಭರ್ಜರಿ ಶತಕ ಗಳಿಸುವ ಮೂಲಕ ಜಾರ್ಖಂಡ್ ತಂಡವನ್ನು ತಮ್ಮ ಮೊದಲ SMAT ಪ್ರಶಸ್ತಿಗೆ ಕೊಂಡೊಯ್ದರು. ಌಕ್ಚುಲಿ ಈ ಫೈನಲ್ ಪಂದ್ಯವನ್ನ ಬಿಸಿಸಿಐ ಮ್ಯಾನೇಜ್ಮೆಂಟ್ನ ಅಧಿಕಾರಿಗಳೂ ವೀಕ್ಷಿಸುತ್ತಿದ್ರು. ಈ ಮ್ಯಾಚಲ್ಲಿ ಕಿಶನ್ ಬ್ಯಾಟಿಂಗ್ ನೋಡಿದ ಅಧಿಕಾರಿಗಳು ಮತ್ತೆ ಟೀಂ ಇಂಡಿಯಾಗೆ ಕಂ ಬ್ಯಾಕ್ ಮಾಡಲು ಬಾಗಿಲು ತೆರೆದಿದ್ರು. ಈ ಚಾನ್ಸ್ ಸಿಕ್ಕ ಕೂಡಲೇ ಇಶಾನ್ ಕಿಶನ್ ಹಿಂದೆಂದಿಗಿಂತರೂ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ.

ನೋಡಿರಿ

