ಮೋದಿ ತಂಗಿದ್ದ ಹೋಟೆಲ್ ಬಿಲ್ 80 ಲಕ್ಷ ಬಾಕಿ! – ಕಾನೂನು ಕ್ರಮದ ಎಚ್ಚರಿಕೆ ನೀಡಿದ ಹೋಟೆಲ್ ವ್ಯವಸ್ಥಾಪಕರು
ಪ್ರಧಾನಿ ಮೋದಿ ಅವರು ಅವರು ತಂಗಿದ್ದ ಹೋಟೆಲ್ ಬಿಲ್ ಪಾವತಿಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಮೋದಿ ಅವರು ಮೈಸೂರಿಗೆ ಬಂದಿದ್ದ ಸಂದರ್ಭದಲ್ಲಿ ತಂಗಿದ್ದ ಹೋಟೆಲ್ ನ ಬಿಲ್ ಅನ್ನು ಅರಣ್ಯ ಇಲಾಖೆ ಪಾವತಿಸದೇ ಬಾಕಿ ಉಳಿಸಿಕೊಂಡಿದೆ ಎಂದು ಹೋಟೆಲ್ ವ್ಯವಸ್ಥಾಪಕರು ಆರೋಪಿಸಿದ್ದಾರೆ.
ಇದನ್ನೂ ಓದಿ: ಪಾಂಡ್ಯ ದಾಂಪತ್ಯದಲ್ಲಿ ಬಿರುಕು – ಹಾರ್ದಿಕ್ನ ಶೇ.70 ರಷ್ಟು ಆಸ್ತಿ ನತಾಶಾ ಪಾಲು..?
ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ 50ನೇ ವರ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮೈಸೂರಿಗೆ ಆಗಮಿಸಿದ್ದರು. ಈ ವೇಳೆ ಮೈಸೂರಿನ ಪಂಚತಾರ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ ಮೋದಿ ತಂಗಿದ್ದ ಹೋಟೆಲ್ ಬಿಲ್ ಇರುವರೆಗೂ ಪಾವತಿಯಾಗಿಲ್ಲ. ಜೂನ್ 1ರ ಒಳಗೆ 80 ಲಕ್ಷ ಬಿಲ್ ಕಟ್ಟದಿದ್ದರೆ ಕಾನೂನಾತ್ಮಕ ಕ್ರಮದ ಎಚ್ಚರಿಕೆಯನ್ನು ಹೋಟೆಲ್ ವ್ಯವಸ್ಥಾಪಕರು ನೀಡಿದ್ದಾರೆ. ಮೆ.21 ರಂದು ಅರಣ್ಯ ಇಲಾಖೆ ಅಧಿಕಾರಿಗೆ ಹೋಟೆಲ್ ವ್ಯವಸ್ಥಾಪಕರು ಪತ್ರ ಬರೆದಿರುವ ಅವರು, 18% ಬಡ್ಡಿ ಸಮೇತ 80 ಲಕ್ಷ ಪಾವತಿಸಿ ಎಂದು ತಿಳಿಸಿದ್ದಾರೆ. ಅಲ್ಲದೇ ಜೂನ್ 1ರ ಒಳಗೆ ಬಿಲ್ ಕಟ್ಟದಿದ್ದರೆ ಕಾನೂನಾತ್ಮಕ ಕ್ರಮದ ಎಚ್ಚರಿಕೆಯನ್ನೂ ನೀಡಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ 50ನೇ ವರ್ಷದ ಕಾರ್ಯಕ್ರಮದ ಒಟ್ಟು ವೆಚ್ಚ 6 ಕೋಟಿ ರೂ. ಆಗಿತ್ತು. ಆದರೆ ಇದುವರೆಗೆ 3 ಕೋಟಿ ರೂಪಾಯಿ ಮಾತ್ರ ಬಿಡುಗಡೆ ಆಗಿದೆ. ರಾಜ್ಯ ಅರಣ್ಯ ಇಲಾಖೆಗೆ ಕೇಂದ್ರ ಅರಣ್ಯ ಇಲಾಖೆಯಿಂದ ಬಾಕಿ ಹಣ ಬರಬೇಕಿದೆ. ಹಣ ತುರ್ತಾಗಿ ಬಿಡುಗಡೆ ಮಾಡಿ ಎಂದು ರಾಜ್ಯ ಅರಣ್ಯ ಇಲಾಖೆಯಿಂದ ಕೇಂದ್ರ ಅರಣ್ಯ ಇಲಾಖೆಗೆ ಪತ್ರ ರವಾನೆಯಾಗಿದೆ. ಆದರೆ ವರ್ಷ ಕಳೆದರೂ ಹೋಟೆಲ್ ಬಿಲ್ ಪಾವತಿಸಿಲ್ಲ.