ಸಾವು ಗೆದ್ದು ಬಂದ  41 ಕಾರ್ಮಿಕರು – ಉತ್ತರಕಾಶಿ ಸುರಂಗದಿಂದ ರಕ್ಷಿಸಲ್ಪಟ್ಟ ಕಾರ್ಮಿಕರ ಜೊತೆ ಮೋದಿ ಮಾತುಕತೆ

ಸಾವು ಗೆದ್ದು ಬಂದ  41 ಕಾರ್ಮಿಕರು – ಉತ್ತರಕಾಶಿ ಸುರಂಗದಿಂದ ರಕ್ಷಿಸಲ್ಪಟ್ಟ ಕಾರ್ಮಿಕರ ಜೊತೆ ಮೋದಿ ಮಾತುಕತೆ

ಸುಮಾರು 17 ದಿನಗಳಿಂದ ಸುರಂಗದ ಒಳಗಡೆ ಸಿಲುಕಿದ್ದ ಕಾರ್ಮಿಕರು ಸುರಕ್ಷಿತವಾಗಿ ಹೊರಬರಲಿ ಎಂಬ ದೇಶದ ಜನರ ಪ್ರಾರ್ಥನೆ ಫಲ ನೀಡಿದೆ. 400 ಗಂಟೆಗಳ ಆಪರೇಷನ್‌ ಯಶಸ್ವಿಯಾಗಿದ್ದು,ಉತ್ತರಾಖಂಡದ ಉತ್ತರಕಾಶಿ ಸುರಂಗದಲ್ಲಿ ಕಾರ್ಮಿಕರನ್ನು  ರಕ್ಷಣೆ ಮಾಡಿ ಸುರಕ್ಷಿತವಾಗಿ ಕರೆತರಲಾಗಿದೆ.

ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ 41 ಸಿಲುಕಿಕೊಂಡಿದ್ದರು. ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ರ‍್ಯಾಟ್​ ಹೋಲ್ ಮೈನಿಂಗ್ ಕಾರ್ಯಾಚರಣೆ ನಡೆಸಿ ಹೊರ ತರಲಾಗಿದೆ. ಕಾರ್ಮಿಕರ ರಕ್ಷಣೆ ನಡೆಸಿದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಯಶಸ್ವಿ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ. ಇದು ದೇಶದ ಪ್ರತಿಯೊಬ್ಬರಿಗೂ ಭಾವನಾತ್ಮಕ ಕ್ಷಣವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಇನ್ನುಮುಂದೆ ವಾಹನಗಳಲ್ಲಿ ಪ್ಯಾನಿಕ್‌ ಬಟನ್‌ ಕಡ್ಡಾಯ – ಯಾವ್ಯಾವ ವಾಹನಗಳಿಗೆ ನಿಯಮ ಅನ್ವಯ?

ಬುಧವಾರ ರಕ್ಷಣೆಗೊಂಡ ಕಾರ್ಮಿಕರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ. ದೂರವಾಣಿ ಮೂಲಕ ಕಾರ್ಮಿಕರ ಜೊತೆಗೆ ಮಾತನಾಡಿರುವ ಪ್ರಧಾನಿ, ನೀವು ಸುರಕ್ಷಿತವಾಗಿ ಹೊರ ಬಂದಿರುವುದು ಖುಷಿಯ ಸಂಗತಿ. ಅದನ್ನು ಶಬ್ದದಲ್ಲಿ ವರ್ಣನೆ ಮಾಡಲು ಸಾಧ್ಯವಿಲ್ಲ. ಕೇದಾರನಾಥ ಬದರಿನಾಥ ಆರ್ಶಿವಾದ ಎಂದಿದ್ದಾರೆ.

ಎಲ್ಲರ ಧೈರ್ಯ ಮೆಚ್ಚುವಂತದ್ದು, ಒಬ್ಬರಿಗೊಬ್ಬರು ಆತ್ಮ ವಿಶ್ವಾಸ ತುಂಬಿದ್ದೀರಿ ಅದು ದೊಡ್ಡ ವಿಚಾರವಾಗಿದೆ. ನಾನು ಸಿಎಂ ಸೇರಿ ಎಲ್ಲರಿಂದ ಮಾಹಿತಿ ಪಡೆಯುತ್ತಿದ್ದೆ. ಮಾಹಿತಿ ಪಡೆದರೂ ನಿಮ್ಮ ಬಗೆಗಿನ ಚಿಂತೆ ಕಡಿಮೆಯಾಗುತ್ತಿರಲಿಲ್ಲ. ನಿಮ್ಮ ಕುಟುಂಬಸ್ಥರ ಪುಣ್ಯವೂ ಕಾರಣವಾಗಿರುತ್ತದೆ. ಎಲ್ಲರೂ ಸುರಕ್ಷಿತವಾಗಿ ಹೊರ ಬಂದದ್ದೀರಿ ಎಂದು ಹೇಳಿದ್ದಾರೆ.

ಸದ್ಯ ಕಾರ್ಮಿಕರಿಗೆ ಚಿನ್ಯಾಲಿಸೌರ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಮುಂದುವರಿದಿದೆ. ಹಲವು ರೀತಿಯ ವೈದ್ಯಕೀಯ ತಪಾಸಣೆ ನಡೆದಿದೆ. ಇನ್ನು ಪ್ರಧಾನಿ ಮೋದಿ, ಸಿಎಂ ಪುಷ್ಕರ್ ಸಿಂಗ್ ಧಾಮಿ, ಸಚಿವ ವಿ.ಕೆ ಸಿಂಗ್ ಸೇರಿ ಎಲ್ಲರಿಗೂ ಕಾರ್ಮಿಕರು ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೇ ಅಗತ್ಯ ನೆರವು ನೀಡಿ, ಹೊರ ಕರೆತಂದಿದ್ದಕ್ಕೆ ಕೂಡ ಕಾರ್ಮಿಕರು ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

Shwetha M