ಚುರುಮುರಿ ಅಂಗಡಿ ಮಾಲೀಕನಿಗೆ ಖುಲಾಯಿಸಿದ ಅದೃಷ್ಟ ಲಕ್ಷ್ಮೀ! – ಮೋದಿ ಕೊಟ್ಟ 10ರೂ. ನೋಟಿಗೆ ಫುಲ್ ಡಿಮ್ಯಾಂಡ್!

ಚುರುಮುರಿ ಅಂಗಡಿ ಮಾಲೀಕನಿಗೆ ಖುಲಾಯಿಸಿದ ಅದೃಷ್ಟ ಲಕ್ಷ್ಮೀ! – ಮೋದಿ ಕೊಟ್ಟ 10ರೂ. ನೋಟಿಗೆ ಫುಲ್ ಡಿಮ್ಯಾಂಡ್!

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ನಡೆದ ಒಂದು ಸಣ್ಣ ಘಟನೆ ಇಂದು ದೇಶದಾದ್ಯಂತ ಚರ್ಚೆಯಾಗುತ್ತಿದೆ. ಜಾರ್ಗ್ರಾಮ್‌ನಲ್ಲಿ ಝಲ್ಮುರಿ (ಚುರುಮುರಿ) ಅಂಗಡಿ ನಡೆಸುತ್ತಿರುವ ವಿಕ್ರಮ್ ಶಾ ಎಂಬ ಸರಳ ವ್ಯಾಪಾರಿಯ ಜೀವನದಲ್ಲಿ ಈ ಘಟನೆ ಒಂದು ಮರೆಯಲಾಗದ ನೆನಪಾಗಿ ಉಳಿದಿದೆ. ಚುನಾವಣಾ ಪ್ರಚಾರಕ್ಕಾಗಿ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ, ಅಚಾನಕ್ ವಿಕ್ರಮ್ ಶಾ ಅವರ ಸಣ್ಣ ಜಲಮುರಿ ಅಂಗಡಿಗೆ ಬಂದು ಚುರುಮುರಿ ತಿಂದಿದ್ದರು. ಬಳಿಕ ಪ್ರಧಾನಿ ಮೋದಿ ವಿಕ್ರಮ್‌ಗೆ 10 ರೂಪಾಯಿ ನೀಡಿದ್ರು. ಇದೀಗ ಈ 10 ರೂಪಾಯಿಯಿಂದ ವಿಕ್ರಮ್‌ಗೆ ಅದೃಷ್ಟ ಲಕ್ಷ್ಮೀ ಒಲಿದಿದ್ದಾಳೆ. ಆ 10 ರೂಪಾಯಿಗಾಗಿ ಫುಲ್‌ ಡಿಮ್ಯಾಂಡ್‌ ಶುರುವಾಗಿದೆ.

ಇದನ್ನೂ ಓದಿ: ಬೀದಿಗೆ ಬಿದ್ದ ಶಕುಂತಲಾಗೆ ಗೌತಮ್‌ ಆಸರೆ! – ಮನೆಗೆ ಚಿಕ್ಕಮ್ಮನ ಕರ್ಕೊಂಡು ಬರ್ತಾನಾ?

ಭಾನುವಾರ ಪಶ್ಚಿಮ ಬಂಗಾಳಕ್ಕೆ ತೆರಳಿದ್ದ ಮೋದಿ ಕಳೆದ ಶನಿವಾರ ಒಂದಾದ ಮೇಲೊಂದರಂತೆ 4 ರ್‍ಯಾಲಿಗಳಲ್ಲಿ ಭಾಗವಹಿಸಿದ್ದರು.ಬಳಿಕ ಝಾರ್‌ಗ್ರಾಂ ಎಂಬಲ್ಲಿರುವ ಪುಟ್ಟ ಅಂಗಡಿಯೊಂದಕ್ಕೆ ತೆರಳಿ, ಒಳ್ಳೆ ಗುಣಮಟ್ಟದ ಝಾಲ್ಮುರಿ (ಚುರುಮುರಿ) ತಯಾರಿಸುವಂತೆ ಕೇಳಿದರು. ಅದಕ್ಕೆ ಪ್ರತಿಯಾಗಿ ಸ್ವಂತ ಜೇಬಿನಿಂದ 10 ರು.ನ ಗರಿಗರಿ ನೋಟನ್ನು ತೆಗೆದು, ಅಂಗಡಿಯಾತ ನಿರಾಕರಿಸಿದರೂ ಕೇಳದೆ ಆತನ ಕೈಗಿಟ್ಟರು. ಇದೀಗ ಮೋದಿ ನೀಡಿದ 10 ರೂಪಾಯಿಯ ನೋಟಿಗೆ ಈಗ ಭಾರಿ ಬೇಡಿಕೆ ಬಂದಿದೆ. ಈ ಹತ್ತು ರೂಪಾಯಿಯನ್ನು ತನಗೆ ನೀಡಿದರೆ ಅದರ ಬದಲಾಗಿ 1,11,000 ರೂಪಾಯಿ ನೀಡುವುದಾಗಿ ವ್ಯಕ್ತಿಯೊಬ್ಬರು ಆ ಚುರುಮುರಿ ಮಾಲೀಕನಿಗೆ ಆಫರ್ ನೀಡಿದ್ದಾರೆ ಎಂದು ವರದಿಯಾಗಿದೆ.

ಹರ್ಯಾಣ ಮೂಲದ ವ್ಯಕ್ತಿಯೊಬ್ಬರು 1,11,000 ರೂ ನೀಡೋದಾಗಿ ಅವರು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈ ವರದಿಯ ಬಗ್ಗೆ ಯಾವುದೇ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿಲ್ಲ, ಆದರೆ ಹೀಗೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಪ್ರಧಾನಿ ಮೋದಿಯವರು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಪ್ರಚಾರಕ್ಕೆ ಹೋದಾಗ ಅಲ್ಲಿ ಜನ ಸಾಮಾನ್ಯರು ರೈತರು ಮಕ್ಕಳೊಂದಿಗೆ ಎಂದಿನಂತೆ ಬೆರೆತಿದ್ದರು.

Shwetha M