ಲಂಡನ್ಗೆ ಭೇಟಿ ಕೊಟ್ಟ ಮೋದಿ- ಇಂದು ಜಾರಿಯಾಗಲಿದೆ ಭಾರತ – UK ಮುಕ್ತ ವ್ಯಾಪಾರ ಒಪ್ಪಂದ

ಪ್ರಧಾನಿ ಮೋದಿ ಮಹತ್ವದ ವ್ಯಾಪಾರ ಒಪ್ಪಂದಕ್ಕಾಗಿ ಇಂಗ್ಲೆಂಡ್ಗೆ ಪ್ರವಾಸ ಕೈಗೊಂಡಿದ್ದಾರೆ. ಇಂಗ್ಲೆಂಡ್ಗೆ ಹೋಗುತ್ತಿದ್ದಂತೆ ಮೋದಿಗೆ ಅದ್ಧೂರಿ ಸ್ವಾಗತ ಸಿಕ್ತು. ಭಾರತ ಮತ್ತು ಯುಕೆ ನಡುವಿನ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ ಇಂದು(ಜುಲೈ 24) ಜಾರಿಯಾಗಲಿದೆ. ಕೇಂದ್ರ ವಾಣಿಜ್ಯ ಪಿಯೂಷ್ ಗೋಯಲ್ ಕೂಡ ಪ್ರಧಾನಿ ಅವರೊಂದಿಗೆ ಲಂಡನ್ಗೆ ಪ್ರಯಾಣ ಬೆಳೆಸಿದ್ದು, ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗಿನ ಮಾತುಕತೆ ವೇಳೆ, ಮುಕ್ತ ವ್ಯಾಪಾರ ಒಪ್ಪಂದ ಅಧಿಕೃತವಾಗಿ ಬರಲಿದೆ. ಈ ಒಪ್ಪಂದಿಂದ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಸಂಬಂಧ ಮತ್ತಷ್ಟು ಗಟ್ಟಿ ಮಾಡಲಿದೆ.
ಇದನ್ನೂ ಓದಿ: ರಿಷಭ್ ಪಂತ್ ಕಾಲಲ್ಲಿ ಹರಿಯಿತು ರಕ್ತ – ಕಣ್ಣೀರಿಡುತ್ತಲೇ ಹೊರ ನಡೆದ ಪಂತ್ ಮತ್ತೆ ಆಡ್ತಾರಾ?
ಮೋದಿ ರಾಜ ಚಾರ್ಲ್ಸ್ 3 ಅವರನ್ನು ಭೇಟಿ ಮಾಡಲಿದ್ದಾರೆ. ಈ ಭೇಟಿಯ ಕೇಂದ್ರಬಿಂದು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವುದು ಮತ್ತು ಭಾರತ-ಯುಕೆ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವನ್ನು ಹೆಚ್ಚಿಸುವ ಹೊಸ ಪ್ರಯತ್ನವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. 2014ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಲ್ಕನೇ ಬಾರಿಗೆ ಯುಕೆಗೆ ಭೇಟಿ ನೀಡಿದ್ದು, ಭಾರತದ ಪ್ರಧಾನಿಗೆ ರಾಜಧಾನಿ ಲಂಡನ್ನಲ್ಲಿ ಅನಿವಾಸಿ ಭಾರತೀಯರಿಂದ ಅದ್ದೂರಿ ಸ್ವಾಗತ ದೊರೆತಿದೆ. ಲಂಡನ್ನ ಪ್ರಮುಖ ಬೀದಿಗಳಲ್ಲಿ ಅನಿವಾಸಿ ಭಾರತೀಯರು, ಪ್ರಧಾನಿ ಮೋದಿ ಅವರಿಗೆ ಜೈಕಾರ ಕೂಗಿ ಸಂತಸ ವ್ಯಕ್ತಪಡಿಸಿದ್ದಾರೆ.

ವ್ಯಾಪಾರ, ಆರೋಗ್ಯ, ಇಂಧನ, ಶಿಕ್ಷಣ ಮತ್ತು ಭದ್ರತೆಯಂತಹ ವಿಷಯಗಳ ಕುರಿತು ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ, ಪ್ರಧಾನಿ ಮೋದಿ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಭಾರತ ಮತ್ತು ಯುಕೆ ನಡುವಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗುವುದು. ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಪ್ರಧಾನಿಯೊಂದಿಗೆ ಲಂಡನ್ಗೆ ಪ್ರಯಾಣ ಬೆಳೆಸಿದ್ದಾರೆ. ಲಂಡನ್ನಲ್ಲಿರುವ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರ ಪ್ರಕಾರ, ಒಪ್ಪಂದವು ಅಂತಿಮ ಕಾನೂನು ಹಂತದಲ್ಲಿದೆ, ಮೇ 6 ರಂದು ಭಾರತ-ಬ್ರಿಟಿಷ್ ಅಧಿಕಾರಿಗಳ ನಡುವೆ ನಡೆದ ಮಾತುಕತೆಯ ಆಧಾರದ ಮೇಲೆ ಅದು ಜಾರಿಗೆ ಬಂದಿದೆ ಎಂದಿದ್ದಾರೆ.

ಮುಕ್ತ ವ್ಯಾಪಾರ ಒಪ್ಪಂದದ ಮೂಲಕ, ಭಾರತ- ಯುಕೆ 2030 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 120 ಶತಕೋಟಿ ಅಮೆರಿಕನ್ ಡಾಲರ್ಗಳಿಗೆ ಕೊಂಡೊಯ್ಯಲು ಪ್ರಯತ್ನಿಸುತ್ತಿವೆ. 2030ರ ವೇಳೆಗೆ ಭಾರತ ಮತ್ತು ಯುಕೆ ಆರ್ಥಿಕತೆಗಳ ನಡುವಿನ ವ್ಯಾಪಾರವನ್ನು ದ್ವಿಗುಣಗೊಳಿಸುವ ಪ್ರಯತ್ನದಲ್ಲಿ, ಚರ್ಮ, ಪಾದರಕ್ಷೆ ಮತ್ತು ಬಟ್ಟೆಗಳಂತಹ ಉತ್ಪನ್ನಗಳ ರಫ್ತಿನ ಮೇಲಿನ ತೆರಿಗೆಯನ್ನು ತೆಗೆದುಹಾಕಲು ಮತ್ತು ಬ್ರಿಟನ್ನಿಂದ ವಿಸ್ಕಿ ಮತ್ತು ಕಾರುಗಳ ಆಮದನ್ನು ಅಗ್ಗವಾಗಿಸಲು ಈ ಮುಕ್ತ ವ್ಯಾಪಾರ ಒಪ್ಪಂದ ನೆರವಾಗಲಿದೆ. ಬ್ರಿಟನ್ ಜೊತೆಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವುದರಿಂದ ಭಾರತದ ಸರಕುಗಳು ಆಮದು ಸುಂಕವಿಲ್ಲದೇ ಬ್ರಿಟನ್ ಮಾರುಕಟ್ಟೆಯನ್ನು ತಲುಪುತ್ತದೆ. ಹಾಗೂ ದೇಶಗಳ ಸ್ಪರ್ಧೆಯಿಂದ ತಪ್ಪಿಸಿಕೊಂಡು ಹೆಚ್ಚು ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ.

ನೋಡಿರಿ

