ಕೆಎಸ್ ಈಶ್ವರಪ್ಪ ಮಾತು ಕೇಳಿ ವಿಜಯೇಂದ್ರ ಶಾಕ್ – ಹೆಚ್ಡಿಕೆ ಫೋನ್ ಟ್ಯಾಪಿಂಗ್ ಮಾಡಿರೋದು ನಿಜ ಎಂದ ಡಿಕೆಶಿ
ಕೆಎಸ್ ಈಶ್ವಪ್ಪ ಬಿಜೆಪಿ ವಿರುದ್ಧ ಬಂಡಾಯವೆದ್ದಿದ್ದಾರೆ. ಬಿಎಸ್ ವೈ ಕುಟುಂಬದ ವಿರುದ್ಧ ಕಿಡಿಕಾರುತ್ತಲೇ ಇದ್ದಾರೆ. ತಾಕತ್ತಿದ್ದರೆ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಬಳಸದೆ ಪ್ರಚಾರ ಮಾಡಲಿ ಮತ್ತು ಧಮ್ಮಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತನ್ನನ್ನು ಪಕ್ಷದಿಂದ ಉಚ್ಚಾಟಿಸಲಿ ಎಂದು ಕೆಎಸ್ ಈಶ್ವರಪ್ಪ ಸವಾಲು ಹಾಕಿದ್ರು.. ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ, ಅವರ ಮಾತುಗಳಿಂದ ಗಾಬರಿಯಾಗುತ್ತದೆ. ಪ್ರಧಾನಿ ಮೋದಿ ಅವರು ಭಾರತ ಮತ್ತು ಬಿಜೆಪಿಯ ಹೆಮ್ಮೆ.. ಅವರ ಫೋಟೋವನ್ನು ಬಿಜೆಪಿಯವರಾದ ನಾವು ಬಳಸದೆ ಬೇರೆಯವರು ಬಳಸದೇ ಇರೋಕೆ ಸಾಧ್ಯವೇ ಅಂತಾ ಹೇಳಿದ್ದಾರೆ.
ಇದನ್ನೂ ಓದಿ: ಈಶ್ವರಪ್ಪ ಬೆನ್ನಿಗೆ ನಿಂತ ಯತ್ನಾಳ್.. – ಬಿಎಸ್ವೈ ಫ್ಯಾಮಿಲಿಗೆ ಬಿಗ್ ಶಾಕ್
ಮೃಣಾಲ್ ದೇಹದಲ್ಲಿ ಹರಿಯುತ್ತಿರುವುದು ಪಂಚಮಸಾಲಿ ರಕ್ತ ಅಲ್ಲ– ನಿರಾಣಿ
ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ ಮಾತಿನ ಭರಾಟೆ ಜೋರಾಗಿಯೇ ಇದೆ. ಇದೀಗ ಮಾಜಿ ಸಚಿವ ಮುರುಗೇಶ್ ನಿರಾಣಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ವಿರುದ್ಧ ವಾಗ್ದಾಳಿ ನಡೆಸೋ ವೇಳೆ ನಾಲಗೆ ಹರಿಬಿಟ್ಟಿದ್ದಾರೆ. ಮೃಣಾಲ್ ದೇಹದಲ್ಲಿ ಹರಿಯುತ್ತಿರುವುದು ಪಂಚಮಸಾಲಿ ರಕ್ತ ಅಲ್ಲ ಅಂತ ಹೇಳಿದ್ದಾರೆ. ಮುರುಗೇಶ್ ನಿರಾಣಿ ಸ್ವಾಮೀಜಿ ವಿರುದ್ಧ ತೀವ್ರ ಸ್ವರೂಪ ವಾಕ್ಪ್ರಹಾರ ನಡೆಸಿದ್ದಲ್ಲದೆ ಮೃಣಾಲ್ ನ ಉಪಜಾತಿಯ ಬಗ್ಗೆಯೂ ಪ್ರಶ್ನೆ ಮಾಡಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅವರ ಸಹೋದರ ನಿಸ್ಸಂದೇಹವಾಗಿ ವೀರಶೈವ ಪಂಚಮಸಾಲಿ ಸಮಾಜದವರೇ, ಆದರೆ ಲಕ್ಷ್ಮಿ ಅವರ ಪತಿ ರವೀಂದ್ರ ಹೆಬ್ಬಾಳ್ಕರ್ ವೀರಶೈವ ಲಿಂಗಾಯುತ ಬಣಜಿಗ ಸಮಾಜದವರು. ಮಗನಿಗೆ ಅಪ್ಪನ ಹೆಸರು, ಮನೆತನದ ಹೆಸರು ಮತ್ತು ಜಾತಿ ಅನ್ವಯಿಸುತ್ತವೆ. ಹಾಗಾದ್ರೆ ಮೃಣಾಲ್ ಪಂಚಮಸಾಲಿ ಸಮಾಜಕ್ಕೆ ಸೇರಿದವ ಹೇಗಾಗುತ್ತಾನೆ? ಅವನು ಬಣಜಿಗ ಸಮಾಜಕ್ಕೆ ಸೇರುತ್ತಾನೆ ಎಂದು ನಿರಾಣಿ ಹೇಳಿದ್ದಾರೆ
ಹೆಚ್ಡಿಕೆ ಫೋನ್ ಟ್ಯಾಪಿಂಗ್ ಮಾಡಿರೋದು ನಿಜ – ದಾಖಲೆಗಳು ಇವೆ ಎಂದ ಡಿಕೆಶಿ
ಹೆಚ್ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಿರ್ಮಲಾನಂದನಾಥ ಸ್ವಾಮೀಜಿಯವರ ಫೋನ್ ಟ್ಯಾಪಿಂಗ್ ಆಗಿತ್ತು. ಖುದ್ದು ಕುಮಾರಸ್ವಾಮಿ ನೇತೃತ್ವದಲ್ಲಿ ಎಲ್ಲವೂ ನಡೆದಿತ್ತು ಅಂತ ಸಚಿವ ಚೆಲುವರಾಯಸ್ವಾಮಿ ಆರೋಪಿಸಿದ್ರು.. ಇದೀಗ ಈ ವಿಚಾರ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ಡಿಸಿಎಂ ಡಿಕೆಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಸ್ವಾಮೀಜಿಗಳ ಫೋನ್ ಟ್ಯಾಪಿಂಗ್ ಗೊತ್ತಿರುವ ವಿಚಾರ.. ಈ ಬಗ್ಗೆ ಮಾತನಾಡಲು ನೋವಾಗುತ್ತದೆ. ಈ ವಿಚಾರವಾಗಿ ಎಲ್ಲಾ ದಾಖಲೆಗಳು ಇವೆ. ಆದರೂ ಈ ವಿಚಾರವನ್ನು ಈಗ ಮಾತನಾಡುವುದು ಸೂಕ್ತವಲ್ಲ, ಮುಂದೆ ಮಾತನಾಡುತ್ತೇನೆ ಎಂದು ಡಿಸಿಎಂ ಉತ್ತರಿಸಿದರು.