ಅಭಿಮಾನಿಗಳನ್ನು ಕಂಡು ಕಾರಿಂದಿಳಿದ ‘ನಮೋ’ – ಬೆಂಗಳೂರಿನಲ್ಲಿ ಮೋದಿ ಬೆಂಬಲಿಗರು ಫುಲ್ ಖುಷ್!
ಉದ್ಯಾನ ನಗರಿಯಲ್ಲಿ ಹೇಗಿತ್ತು ಗೊತ್ತಾ ಮೋದಿ ಹವಾ?

ಅಭಿಮಾನಿಗಳನ್ನು ಕಂಡು ಕಾರಿಂದಿಳಿದ ‘ನಮೋ’ –  ಬೆಂಗಳೂರಿನಲ್ಲಿ ಮೋದಿ ಬೆಂಬಲಿಗರು ಫುಲ್ ಖುಷ್!ಉದ್ಯಾನ ನಗರಿಯಲ್ಲಿ ಹೇಗಿತ್ತು ಗೊತ್ತಾ ಮೋದಿ ಹವಾ?
ಕಾರ್ಯಕರ್ತರಿಗೆ ನಮೋ!

ಇದೇ ಮೊದಲ ಬಾರಿಗೆ ನಡುರಸ್ತೆಯಲ್ಲಿ ನಿಂತು ಪ್ರಧಾನಮಂತ್ರಿ ನರೇಂದ್ರ ಮೋದಿ  ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಕಡೆಗೆ ಕೈ ಬೀಸುತ್ತಾ ಹುರಿದುಂಬಿಸಿದ್ದಾರೆ. ಕಾರ್ಯಕರ್ತರ ಉತ್ಸಾಹ ಕಂಡು ಕಾರಿನಲ್ಲಿ ಕುಳಿತು ಸುಮ್ಮನೆ ಮುಂದೆ ಸಾಗಲು ಮನಸ್ಸಾಗದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕಾರಿನಿಂದಿಳಿದು ಕಾರ್ಯಕರ್ತರ ಕಡೆಗೆ ಹೆಜ್ಜೆ ಹಾಕಿದರು. ಮೊದಲು ಕಾರಿನ ಡೋರ್‌ ತೆಗೆದು ಕಾರ್ಯಕರ್ತರತ್ತ ಕೈ ಬೀಸಿ ನಮಸ್ಕರಿಸಿದ ನಮೋ, ಬೆಂಬಲಿಗರ ಘೋಷಣೆ ಮುಗಿಲು ಮುಟ್ಟಿದ್ದನ್ನು ಕಂಡು, ರಸ್ತೆಗಿಳಿದರು.

ಶಾಸಕರ ಭವನದ ಆವರಣದಲ್ಲಿರುವ ಮಹರ್ಷಿ ವಾಲ್ಮೀಕಿ ಮತ್ತು ಕನಕದಾಸರ ಪ್ರತಿಮೆಗಳಿಗೆ ಇಂದು ಬೆಳಗ್ಗೆ ಮಾಲಾರ್ಪಣೆ ಮಾಡಿದ ನಂತರ ಪ್ರಧಾನಿ ನರೇಂದ್ರ ಮೋದಿ ಹೊರಬರುತ್ತಿದ್ದಾಗ ವಿಧಾನಸೌಧದ ಹಿಂಭಾಗದ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇವರನ್ನು ಕಂಡ ಪ್ರಧಾನಿ ಮೋದಿ, ಕಾರಿನ ಡೋರ್‌ನಲ್ಲಿ ನಿಂತು ಕೈ ಮುಗಿದರು. ಇದರಿಂದಾಗಿ ಮೋದಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

ಇದಾದ ನಂತರ ವಂದೇ ಭಾರತ್‌ ರೈಲು ಹಾಗೂ ಕಾಶಿ ದರ್ಶನ್‌ ರೈಲಿಗೆ ಚಾಲನೆ ನೀಡಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಮೋದಿ ಆಗಮಿಸುವ ವೇಳೆಗೆ ಮೆಜೆಸ್ಟಿಕ್‌ ಸಮೀಪದ ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ಮತ್ತೆ ಮೋದಿ ಅಭಿಮಾನಿಗಳ ಘೋಷಣೆ ಮುಗಿಲುಮುಟ್ಟಿತ್ತು. ಬೆಂಬಲಿಗರ ಉತ್ಸಾಹ ಕಂಡು ಕಾರಿನಲ್ಲಿ ಸುಮ್ಮನೆ ಹೋಗಲು ಮನಸ್ಸಾಗದೆ ಪ್ರಧಾನಿ ಮೋದಿ, ಕಾರಿನಿಂದ ಇಳಿದು ಕೈ ಬೀಸಿದರು. ರಸ್ತೆಯಲ್ಲಿ ಇಳಿದು ತಮ್ಮ ನೆಚ್ಚಿನ ನಾಯಕ ತಮ್ಮತ್ತ ಕೈಬೀಸಿದ್ದನ್ನು ಕಂಡು ಮೋದಿ ಅಭಿಮಾನಿಗಳು ಪುಳಕಿತರಾಗಿದ್ದರು.

ಮುಂದಿನ ವರ್ಷ ಕರ್ನಾಟಕದಲ್ಲಿ ಚುನಾವಣೆ ಇರುವುದರಿಂದಲೂ ಪ್ರಧಾನಿ ಮೋದಿ ಹೀಗೆ ಅಭಿಮಾನಿಗಳನ್ನು ಖುಷಿ ಪಡಿಸಲು ಕಾರಿನಿಂದ ಇಳಿದಿರುವುದು ಮಹತ್ವ ಪಡೆದುಕೊಂಡಿದೆ.

ಇಂದೇ ಪ್ರಧಾನಮಂತ್ರಿ ಮಂತ್ರಿ ನರೇಂದ್ರ ಮೋದಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂಭಾಗದಲ್ಲಿರುವ 108 ಅಡಿ ಎತ್ತರದ  ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಅಲ್ಲದೆ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್‌-2ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು.

suddiyaana