ಪ್ರಧಾನಿ ಮೋದಿಗೆ ‘ಮಿತ್ರ ವಿಭೂಷಣ’ ಪ್ರಶಸ್ತಿ ಪ್ರದಾನ – ನಿಮ್ಮ ವಿರುದ್ಧ ಶತ್ರುಗಳಿಗೆ ಜಾಗ ಕೊಡಲ್ಲವೆಂದ ಶ್ರೀಲಂಕಾ

ಪ್ರಧಾನಿ ನರೇಂದ್ರ ಮೋದಿ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದಾರೆ. ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆಯನ್ನ ಕೊಲಂಬೋದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ರು. ಈ ವೇಳೆ ಶ್ರೀಲಂಕಾದ ಅಧ್ಯಕ್ಷರು ತಮ್ಮ ದೇಶದ ಪ್ರದೇಶವನ್ನು ಭಾರತದ ವಿರುದ್ಧ ಬಳಸಲು ಬಿಡುವುದಿಲ್ಲ ಎಂಬ ಶ್ರೀಲಂಕಾದ ನಿಲುವನ್ನು ಪುನರುಚ್ಚರಿಸಿದ್ದಾರೆ. ಇದಕ್ಕೂ ಮೊದಲು, ಭಾರತ ಮತ್ತು ಶ್ರೀಲಂಕಾ ನವದೆಹಲಿ-ಕೊಲಂಬೊ ಸಂಬಂಧಗಳನ್ನು ಬಲಪಡಿಸಲು ಪ್ರಮುಖ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ.
ಹಾಗೇ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಪಾತ್ರ ವಹಿಸಿದ್ದಾರೆ ಎಂದು ಗುರುತಿಸಿ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಅವರು ಇಂದು ‘ಮಿತ್ರ ವಿಭೂಷಣ’ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದ್ದಾರೆ.
ದ್ವೀಪ ರಾಷ್ಟ್ರದ ಅತ್ಯುನ್ನತ ನಾಗರಿಕ ಗೌರವವಾದ ಈ ಪ್ರಶಸ್ತಿಯನ್ನು ಫೆಬ್ರವರಿ 2008 ರಲ್ಲಿ ಅಂದಿನ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರು ಆರಂಭಿಸಿದ್ದರು. ಈ ಹಿಂದೆ ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮೌಮೂನ್ ಅಬ್ದುಲ್ ಗಯೂಮ್ ಮತ್ತು ಪ್ಯಾಲೆಸ್ತೀನ್ ಮಾಜಿ ನಾಯಕ ಯಾಸರ್ ಅರಾಫತ್ ಅವರಿಗೆ ನೀಡಿ ಗೌರವಿಸಲಾಗಿತ್ತು.
ಅಧ್ಯಕ್ಷ ದಿಸಾನಾಯಕ ಅವರಿಂದ ಶ್ರೀಲಂಕಾ ಮಿತ್ರ ವಿಭೂಷಣ ಪ್ರಶಸ್ತಿಯನ್ನು ಪಡೆದಿರುವುದು ನನಗೆ ಗೌರವವಾಗಿದೆ. ಇದು 1.4 ಬಿಲಿಯನ್ ಭಾರತೀಯರಿಗೆ ಗೌರವದ ವಿಷಯವಾಗಿದೆ” ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.