ರೈತರಿಗೆ ಗುಡ್ ನ್ಯೂಸ್ – ಪಿಎಂ ಕಿಸಾನ್ ಮೊತ್ತ 8,000 ರೂಪಾಯಿಗೆ ಏರಿಕೆ?

ರೈತರಿಗೆ ಗುಡ್ ನ್ಯೂಸ್ – ಪಿಎಂ ಕಿಸಾನ್ ಮೊತ್ತ 8,000 ರೂಪಾಯಿಗೆ ಏರಿಕೆ?

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ದೇಶದ ರೈತರಿಗೊಂದು ಗುಡ್‌ನ್ಯೂಸ್‌ ಇದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆ ಅಡಿಯಲ್ಲಿ ಪ್ರತಿ ರೈತರಿಗೆ ನೀಡಲಾಗುವ ಮೊತ್ತವನ್ನು ಸರ್ಕಾರವು ಪರಿಷ್ಕರಣೆ ಮಾಡಲು ಮುಂದಾಗಿದೆ.

ಹೌದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಪ್ರತಿ ರೈತನಿಗೆ ವಾರ್ಷಿಕವಾಗಿ ನೀಡಲಾಗುವ ಆರು ಸಾವಿರ ರೂಪಾಯಿ ಮೊತ್ತವನ್ನು ಎಂಟು ಸಾವಿರ ರೂಪಾಯಿಗೆ ಏರಿಕೆ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೇ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿಯಲ್ಲಿ ನಿಬಂಧನೆಗಳನ್ನು ಹೆಚ್ಚಿಸಲು ಸರ್ಕಾರವು ಚಿಂತನೆ ನಡೆಸಿದೆ. ಇವುಗಳ ಬಗ್ಗೆ ಅಂತಿಮ ನಿರ್ಧಾರವನ್ನು ಶೀಘ್ರದಲ್ಲೇ ತೆಗೆದುಕೊಳ್ಳಲಾಗುವುದು ಎಂದು ವರದಿ ಹೇಳಿದೆ. ಲೋಕಸಭೆಗೆ ಮುನ್ನ ಸರ್ಕಾರದಿಂದ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಭಾರತದ ವಿರುದ್ಧ ಅಪಮಾನಕರ ಹೇಳಿಕೆ ನೀಡಿದ್ದ ಮಾಲ್ಡೀವ್ಸ್‌ ಸಚಿವರ ಅಮಾನತು!

ಪಿಎಂ ಕಿಸಾನ್ ಯೋಜನೆಯಲ್ಲಿ ಪ್ರತೀ ನಾಲ್ಕು ತಿಂಗಳಿಗೊಮ್ಮೆ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ 2,000 ರೂ ಹಣವನ್ನು ಸರ್ಕಾರ ವರ್ಗಾಯಿಸುತ್ತದೆ. ಈಗ ಕಂತುಗಳ ಸಂಖ್ಯೆಯನ್ನು 3ರಿಂದ 4ಕ್ಕೆ ಏರಿಸಲಾಗಬಹುದು. ಅಂದರೆ, ಪ್ರತೀ ಮೂರು ತಿಂಗಳಿಗೊಮ್ಮೆ ರೈತರಿಗೆ 2,000 ರೂ ಸಿಗಬಹುದು.

2019ರಲ್ಲಿ ಆರಂಭವಾದ ಪಿಎಂ ಕಿಸಾನ್ ಯೋಜನೆಯಲ್ಲಿ ಇದೂವರೆಗೂ 15 ಕಂತುಗಳನ್ನು ಸರ್ಕಾರ ನೀಡಿದೆ. ಒಟ್ಟಾರೆ 2.75 ಲಕ್ಷ ಕೋಟಿ ರೂ ಹಣವನ್ನು ರೈತರ ಖಾತೆಗಳಿಗೆ ಹಾಕಲಾಗಿದೆ. 15ನೇ ಕಂತಿನ ಹಣವನ್ನು ನವೆಂಬರ್ 15ರಂದು ಹಾಕಲಾಗಿತ್ತು. ಅದಕ್ಕೂ ಹಿಂದಿನ 14ನೇ ಕಂತಿನ ಹಣವನ್ನು ಜುಲೈ ಕೊನೆಯ ವಾರದಲ್ಲಿ ನೀಡಲಾಗಿತ್ತು. ಫೆಬ್ರುವರಿ 27ರಂದು ಬೆಳಗಾವಿಯ ಸಮಾವೇಶವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 13ನೇ ಕಂತಿನ ಹಣ ಬಿಡುಗಡೆಯನ್ನು ಘೋಷಿಸಿದ್ದರು.

Shwetha M