ಕ್ರಿಕೆಟ್ ಆಡುತ್ತಿರುವ ವೇಳೆ ಹೃದಯಾಘಾತ – ಕ್ಷಣದಲ್ಲೇ ಹಾರಿಹೋಯ್ತು ಯುವಕನ ಪ್ರಾಣ
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಬದುಕಿ ಬಾಳಬೇಕಾದ ಯುವಕರೇ ಇಂದು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಸಂಪೂರ್ಣ ಫಿಟ್ನೆಸ್ ಹೊಂದಿದ್ದರೂ ಕೂಡ ಅನೇಕರು ಹೃದಯಾಘಾತ ಹಾಗೂ ಹೃದಯ ಸ್ತಂಭನದಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ ಯುವಕನೊಬ್ಬ ಕ್ರಿಕೆಟ್ ಆಡುತ್ತಿರುವಾಗದಲೇ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ: ಮಾಡಿದ್ದುಣ್ಣೋ ಮಾಲ್ಡೀವ್ಸ್ – ಭಾರತದ ಮುಂದೆ ಮಂಡಿಯೂರದೇ ವಿಧಿಯೇ ಇಲ್ಲ..!
ಹೌದು, ಈ ಘಟನೆ ನೋಯ್ಡಾದಲ್ಲಿ ನಡೆದಿದೆ. ನೋಯ್ಡಾದ ಥಾನಾ ಎಕ್ಸ್ಪ್ರೇಸ್ವೇ ಸೆಕ್ಟರ್-135 ಪ್ರದೇಶದಲ್ಲಿ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗಿತ್ತು. ಈ ಟೂರ್ನಿಯಲ್ಲಿ ಉತ್ತರಾಖಂಡ ಮೂಲದ ವಿಕಾಸ್ ನೇಗಿ ಕಣಕ್ಕಿಳಿದಿದ್ದರು. ಅದರಂತೆ ಬ್ಯಾಟಿಂಗ್ ಮಾಡುತ್ತಿದ್ದಾಗ ವಿಕಾಸ್ ನೇಗಿ ರನ್ ಓಡಿದ್ದರು. ಆದರೆ ಚೆಂಡು ಬೌಂಡರಿ ಲೈನ್ ದಾಟಿತ್ತು. ಹೀಗಾಗಿ ಕ್ರೀಸ್ನ ಮಧ್ಯ ಭಾಗದಿಂದ ಮತ್ತೆ ನಾನ್ ಸ್ಟ್ರೈಕ್ನತ್ತ ಮರಳಲು ಮುಂದಾಗಿದ್ದರು. ಆದರೆ ದಿಢೀರ್ ಕುಸಿತಕ್ಕೊಳಗಾದ ವಿಕಾಸ ನೇಗಿ ಪಿಚ್ ಮೇಲೆ ಬಿದ್ದಿದ್ದಾರೆ.
ತಕ್ಷಣವೇ ಎದುರಾಳಿ ತಂಡದ ವಿಕೆಟ್ ಕೀಪರ್ ಹಾಗೂ ಸಹ ಆಟಗಾರ ವಿಕಾಸ್ ನೇಗಿ ಬಳಿ ಓಡಿ ಬಂದಿದ್ದಾರೆ. ಆ ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲಾಗಲ್ಲೇ ವಿಕಾಸ್ ನೇಗಿ ಮೃತಪಟ್ಟಿದ್ದಾರೆ ವೈದ್ಯರು ತಿಳಿಸಿದ್ದಾರೆ.
ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಿದ್ದು, ಈ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ ವಿಕಾಸ್ ನೇಗಿ ಕೋವಿಡ್ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿದ್ದರು. ಇದಾಗ್ಯೂ ಅವರು ಸಂಪೂರ್ಣ ಆರೋಗ್ಯವಂತರಾಗಿದ್ದರು ಎಂದು ಅವರ ಆಪ್ತರು ತಿಳಿಸಿದ್ದಾರೆ.