ತುಳಸಿ ಗಿಡದೊಂದಿಗೆ ಈ ಗಿಡಗಳನ್ನ ನೆಡಿ – ಜೀವನದಲ್ಲಿ ಸಿಗಲಿದೆ ಸಂತೋಷ, ಸಮೃದ್ಧಿ & ಯಶಸ್ಸು

ತುಳಸಿ ಗಿಡದ ಜತೆ ವಾಸ್ತು ಪ್ರಕಾರ ಕೆಲ ಗಿಡಗಳನ್ನು ನೆಟ್ಟರೆ ಸಾಕಷ್ಟು ಶುಭಫಲಗಳು ಸಿಗಲಿದ್ದು, ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಎಂದು ನಂಬಲಾಗಿದೆ. ಮಾತ್ರವಲ್ಲ ಹಣದ ಕೊರತೆ ಬರುವುದಿಲ್ಲ ಮತ್ತು ಕುಟುಂಬ ಸದಸ್ಯರ ಆರೋಗ್ಯವು ಸ್ಥಿರವಾಗಿರುತ್ತದೆ ಎನ್ನಲಾಗಿದೆ. ಅಲ್ಲದೆ ಹಿಂದೂ ಸಂಪ್ರದಾಯದಲ್ಲಿ ಕೆಲ ಸಸ್ಯಗಳನ್ನು ಅತ್ಯಂತ ಪಾವಿತ್ರ್ಯವುಳ್ಳವು ಎಂದು ಪರಿಗಣಿಸಲಾಗಿದ್ದು, ಕೆಲವು ಗಿಡಗಳಲ್ಲಿ ದೇವತೆಗಳು ವಾಸ ಮಾಡುತ್ತಾರೆ ಎಂದು ವಿದ್ವಾಂಸರು ಹೇಳುತ್ತಾರೆ. ಈ ಪವಿತ್ರ ಗಿಡಗಳನ್ನು ಮನೆಯಲ್ಲಿ ಸೂಕ್ತ ದಿಕ್ಕಿನಲ್ಲಿ ನೆಟ್ಟು, ನಿಯಮಿತವಾಗಿ ಪೂಜಿಸಿ ಸಂರಕ್ಷಿಸಿದರೆ, ಅದರಿಂದ ದೈವಕೃಪೆ ನಿಮಗೆ ಸಿಗುತ್ತದೆ. ಹಾಗಾದರೆ ಬನ್ನಿ ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಜತೆ ಯಾವ ಗಿಡವನ್ನು ನೆಡಬೇಕು? ಆ ಗಿಡ ಮನೆಯಲ್ಲಿ ಇರುವುದರಿಂದ ಏನು ಪ್ರಯೋಜನ ಎಂಬ ಮಾಹಿತಿ ಇಲ್ಲಿದೆ.
ಚಂಪಾ ಗಿಡ
ಚಂಪಾ ದೇವರ ಆರಾಧನೆಯಲ್ಲಿ ಬಳಸುವ ಅತ್ಯಂತ ಪವಿತ್ರ ಹೂ. ತುಳಸಿ-ಚಂಪಾ ಒಟ್ಟಿಗೆ ಬೆಳೆಯುವದರಿಂದ ಮನೆಗೆ ದೇವರ ಕೃಪೆಯನ್ನು ತರುತ್ತದೆಂದು ಶಾಸ್ತ್ರಗಳು ಹೇಳುತ್ತವೆ. ಈ ಎರಡೂ ಗಿಡಗಳನ್ನು ಜತೆಗೂಡಿ ನೆಟ್ಟರೆ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ.
ಬಾಳೆಗಿಡ
ಬಾಳೆ ಗಿಡವಿರುವ ಮನೆಯ ಮೇಲೆ ವಿಷ್ಣು-ಲಕ್ಷ್ಮೀ ದೇವಿಯ ಆಶೀರ್ವಾದ ಇರುತ್ತದೆ ಎನ್ನುವ ನಂಬಿಕೆ ಇದ್ದು, ತುಳಸಿ ಗಿಡದ ಬಳಿ ಬಾಳೆ ಗಿಡವನ್ನು ನೆಡುವುದರಿಂದ ಮನೆಯ ಸಂಪತ್ತು ಅಭಿವೃದ್ಧಿ ಆಗಲಿದ್ದು, ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವಲ್ಲಿ ಇದು ಸಹಕಾರಿ.
ಶಮಿ ಗಿಡ
ಧಾರ್ಮಿಕ ಗ್ರಂಥಗಳ ಪ್ರಕಾರ, ಶಮಿ ಸಸ್ಯ ಶನಿ ದೇವರಿಗೆ ಸಂಬಂಧಿಸಿದೆ. ಶನಿ ಪ್ರಭಾವಕ್ಕೆ ಒಳಗಾದ ವ್ಯಕ್ತಿಯು ತನ್ನ ಮನೆಯಲ್ಲಿ ಶಮಿ ಮರವನ್ನು ನೆಟ್ಟು ಕಾಲಕಾಲಕ್ಕೆ ಪೂಜಿಸಬೇಕು ಎಂಬ ನಂಬಿಕೆ ಇದೆ. ಆದ್ದರಿಂದ ತುಳಸಿ ಗಿಡದೊಂದಿಗೆ ಶಮಿ ಗಿಡ ನೆಟ್ಟರೆ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಯಶಸ್ಸು ಲಭಿಸುತ್ತದೆ.

ನೋಡಿರಿ

