ರಜೆಯಲ್ಲಿ ಫ್ಯಾಮಿಲಿ ಜೊತೆ ಟ್ರಿಪ್ ಪ್ಲ್ಯಾನ್ ಇದ್ಯಾ – ಶಿವಮೊಗ್ಗದ ಈ ತಾಣಗಳು ಸ್ವರ್ಗಕ್ಕಿಂತಲೂ ಸುಂದರ!

ರಜೆಯಲ್ಲಿ ಎಲ್ಲಾದರೂ ಪ್ರವಾಸ ಹೋಗಬೇಕು, ಪ್ರಕೃತಿಯ ಸೌಂದರ್ಯವನ್ನು ಸವಿಯಬೇಕು, ಜಲಪಾತಗಳ ವೈಭವವನ್ನು ಕಣ್ತುಂಬಿಕೊಳ್ಳಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ಕರ್ನಾಟಕದ ಮಲೆನಾಡಿನ ಹೆಬ್ಬಾಗಿಲು ಎಂದೇ ಪ್ರಸಿದ್ಧವಾಗಿರುವ ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳು ಯಾವೆಲ್ಲಾ ಅನ್ನೋದ್ದನ್ನ ನೋಡೋಣ.
ಜೋಗ ಜಲಪಾತ
ಜೋಗ ಜಲಪಾತ. ಭಾರತದ ಪ್ರಸಿದ್ಧ ಜಲಪಾತಗಳಲ್ಲಿ ಒಂದಾದ ಇಲ್ಲಿ ಶರಾವತಿ ನದಿ ಧುಮ್ಮಿಕ್ಕುವ ದೃಶ್ಯ ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಮಳೆಗಾಲದ ನಂತರ ಭೇಟಿ ನೀಡಿದರೆ ಪ್ರಕೃತಿಯ ಸೌಂದರ್ಯವನ್ನು ಮತ್ತಷ್ಟು ಸವಿಯಬಹುದು.
ಅಗುಂಬೆ
ಎರಡನೆಯದು, ಅಗುಂಬೆ. ಹಸಿರು ಕಾಡುಗಳು, ಮೋಡಗಳಿಂದ ಆವೃತವಾದ ಬೆಟ್ಟಗಳು ಮತ್ತು ಸುಂದರ ಸೂರ್ಯಾಸ್ತದ ದೃಶ್ಯಗಳಿಗೆ ಈ ಪ್ರದೇಶ ಹೆಸರುವಾಸಿ.
ಕೂಡಚಾದ್ರಿ ಬೆಟ್ಟ
ಮೂರನೆಯದು, ಕೂಡಚಾದ್ರಿ ಬೆಟ್ಟ. ಚಾರಣ ಇಷ್ಟಪಡುವವರಿಗೆ ಇದು ಹೇಳಿಮಾಡಿಸಿದ ತಾಣ. ಬೆಟ್ಟದ ಹಾದಿ, ಮಂಜಿನ ವಾತಾವರಣ ಮತ್ತು ಪಶ್ಚಿಮ ಘಟ್ಟಗಳ ವಿಹಂಗಮ ನೋಟ ನಿಮ್ಮ ಪ್ರವಾಸವನ್ನು ಸ್ಮರಣೀಯವಾಗಿಸುತ್ತವೆ.
ಇದಲ್ಲದೆ, ಆನೆಗಳನ್ನು ಹತ್ತಿರದಿಂದ ನೋಡಲು ಸಕ್ರೆಬೈಲು ಆನೆ ಶಿಬಿರ, ಐತಿಹಾಸಿಕ ವಾಸ್ತುಶಿಲ್ಪವನ್ನು ಕಣ್ತುಂಬಿಕೊಳ್ಳಲು ಕೆಳದಿ, ವನ್ಯಜೀವಿಗಳ ಬಗ್ಗೆ ತಿಳಿದುಕೊಳ್ಳಲು ತ್ಯಾವರೆಕೊಪ್ಪ ಸಿಂಹಧಾಮ ಕೂಡ ಉತ್ತಮ ಆಯ್ಕೆಗಳು.
ಪ್ರಕೃತಿ, ಇತಿಹಾಸ, ವನ್ಯಜೀವಿ ಮತ್ತು ಸಾಹಸ—ಎಲ್ಲವನ್ನೂ ಒಂದೇ ಜಿಲ್ಲೆಯಲ್ಲೇ ಅನುಭವಿಸಬೇಕೆಂದರೆ ಶಿವಮೊಗ್ಗ ನಿಮ್ಮ ಪ್ರವಾಸದ ಪಟ್ಟಿಯಲ್ಲಿ ಇರಲೇಬೇಕು!

ನೋಡಿರಿ

