ಅಮೆರಿಕದಲ್ಲಿ ವಿಮಾನ ಅಪಘಾತದಲ್ಲಿ ನಾಲ್ವರು ಸಾವು

ಅಮೆರಿಕದಲ್ಲಿ ವಿಮಾನ ಅಪಘಾತದಲ್ಲಿ ನಾಲ್ವರು ಸಾವು

ವಾಷಿಂಗ್ಟನ್‌: ಸಣ್ಣ ವಾಣಿಜ್ಯ ವಿಮಾನವೊಂದು ಅಮೆರಿಕ ನಿರ್ಬಂಧಿತ ವಾಯುಪ್ರದೇಶ ಪ್ರವೇಶಿಸಿದ್ದು, ಈ ವೇಳೆ ಪತನಗೊಂಡಿದೆ. ವಿಮಾನದಲ್ಲಿದ್ದ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಬಿಹಾರದ ಸೇತುವೆಯನ್ನು ಉದ್ದೇಶಪೂರ್ವಕವಾಗಿಯೇ ಕೆಡವಲಾಗಿದೆ! –ಚರ್ಚೆಗೆ ಗ್ರಾಸವಾದ ಬಿಹಾರ ಡಿಸಿಎಂ ಹೇಳಿಕೆ

“ಟೆನ್ನಿಸೀ’ಯ ಎಲಿಜಿಬತ್‌ ಟೌನ್‌ನಿಂದ-ಲಾಂಗ್‌ ಐಲ್ಯಾಂಡ್‌ನ‌ ಮ್ಯಾಕ್‌ಅರ್ಥರ್‌ ವಿಮಾನ ನಿಲ್ದಾಣಕ್ಕೆ 4 ಮಂದಿಯಷ್ಟೇ ಇದ್ದಂತ ಸಣ್ಣ ವಾಣಿಜ್ಯ ವಿಮಾನ ತೆರಳುತ್ತಿತ್ತು. ಈ ವೇಳೆ ಸಂಪರ್ಕ ಕಳೆದುಕೊಂಡಿದ್ದು ವಾಷಿಂಗ್ಟನ್‌ನ ನಿಷೇಧಿತ ವಾಯುನೆಲೆಯನ್ನು ಪ್ರವೇಶಿಸಿದೆ. ಕೂಡಲೇ ವಾಯುಪಡೆ ವಿಮಾನದೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಿದ್ದು ವಿಫಲವಾಗಿದೆ.

ಬಳಿಕ ಸೇನಾ ಅಧಿಕಾರಿಗಳು ಯುದ್ಧವಿಮಾನ ಎಫ್-16 ಖುದ್ದು ಹಾರಾಟ ನಡೆಸಿ ಎಚ್ಚರಿಸಲು ತೆರಳಿದ್ದಾರೆ. ಆದರೆ ಆಗಲೂ ಪ್ರಯತ್ನ ವಿಫ‌ಲವಾಗಿದ್ದು, ಅನಂತರದ ಕೆಲವೇ ನಿಮಿಷಗಳಲ್ಲಿ ವಾಣಿಜ್ಯವಿಮಾನ ವರ್ಜೀನಿಯದ ಮಾಂಟೆಬೆಲ್ಲೋ ಪರ್ವತ ಪ್ರದೇಶದ ಬಳಿ ಪತನಗೊಂಡಿದೆ.

ಸಣ್ಣ ವಾಣಿಜ್ಯ ವಿಮಾನ ದಾರಿ ತಪ್ಪಿ ಬಂದಿತ್ತು. ಈ ವೇಳೆ ಈ ವಿಮಾನವನ್ನು ಎಚ್ಚರಿಸಲು ಅಮೆರಿಕ ಯುದ್ದ ವಿಮಾನ ಹರಸಾಹಸ ಪಟ್ಟಿತ್ತು. ಆದರೆ ಈ ಪ್ರಯತ್ನ ವಿಫಲವಾಗಿದೆ. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

suddiyaana