ಜಿಂಬಾಬ್ವೆಯಲ್ಲಿ ವಿಮಾನ ಪತನ – ಭಾರತದ ಬಿಲಿಯನೇರ್ ಹರ್ಪಾಲ್ ರಾಂಧವಾ, ಅವರ ಪುತ್ರ ಸೇರಿ 6 ಮಂದಿ ಸಾವು

ಜಿಂಬಾಬ್ವೆಯಲ್ಲಿ ವಿಮಾನ ಪತನ – ಭಾರತದ ಬಿಲಿಯನೇರ್ ಹರ್ಪಾಲ್ ರಾಂಧವಾ, ಅವರ ಪುತ್ರ ಸೇರಿ 6 ಮಂದಿ ಸಾವು

ಖಾಸಗಿ ವಿಮಾನವೊಂದರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಪತನವಾಗಿದ್ದು, ಭಾರತೀಯ ಗಣಿ ಉದ್ಯಮಿ ಹರ್ಪಾಲ್ ರಾಂಧವಾ ಮತ್ತು ಅವರ ಮಗ ಸೇರಿದಂತೆ ಆರು ಜನರು ಸಾವನ್ನಪ್ಪಿರುವ ಘಟನೆ ನೈಋತ್ಯ ಜಿಂಬಾಬ್ವೆಯಲ್ಲಿ ನಡೆದಿದೆ.

ಉದ್ಯಮಿ ಹರ್ಪಾಲ್ ರಾಂಧವಾ ‘ರಿಯೋಜಿಮ್’ ಎಂಬ ಕಂಪನಿ ಮಾಲೀಕರಾಗಿದ್ದಾರೆ. ‘ರಿಯೋಜಿಮ್’ ಚಿನ್ನ ಮತ್ತು ಕಲ್ಲಿದ್ದಲು ಉತ್ಪಾದಿಸುವ ಜೊತೆಗೆ ತಾಮ್ರವನ್ನು ಸಂಸ್ಕರಿಸುವ ಪ್ರಮುಖ ಗಣಿಗಾರಿಕೆ ಕಂಪನಿಯಾಗಿದೆ. ‘ರಿಯೋಜಿಮ್’ ಒಡೆತನದ ಸೆಸ್ನಾ 206 ವಿಮಾನವು ಹರಾರೆಯಿಂದ ಮುರೋವಾ ವಜ್ರದ ಗಣಿಗೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮಶಾವಾದ ಜವಾಮಹಂಡೆ ಪ್ರದೇಶದಲ್ಲಿ ವಿಮಾನ ಪತನವಾಗಿದ್ದು, ಹರ್ಪಾಲ್ ರಾಂಧವಾ, ಅವರ ಮಗ 22 ವರ್ಷದ ಅಮೆರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಎಂದು ವರದಿಯಾಗಿದೆ.

ಇದನ್ನೂ ಓದಿ: ಮಗುವಿಗೆ ಹೆಸರಿಡುವ ವಿಚಾರದಲ್ಲಿ ದಂಪತಿ ಮಧ್ಯೆ ಕಲಹ! – ಶಿಶುವಿಗೆ ತಾನೇ ಹೆಸರು ಸೂಚಿಸಿದ ಹೈಕೋರ್ಟ್‌!

ಜವಾಮಹಂಡೆಯ ಪೀಟರ್ ಫಾರ್ಮ್‌ನಲ್ಲಿ ಬೀಳುವ ಮೊದಲು, ವಿಮಾನವು ತಾಂತ್ರಿಕ ದೋಷವನ್ನು ಅನುಭವಿಸಿತು. ಈ ಕಾರಣದಿಂದಾಗಿ ಅದು ಬಹುಶಃ ಗಾಳಿಯಲ್ಲಿ ಸ್ಫೋಟಗೊಂಡಿದೆ. ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ನಾಲ್ವರು ವಿದೇಶಿಯರಾಗಿದ್ದರೆ, ಇನ್ನಿಬ್ಬರು ಜಿಂಬಾಬ್ವೆ ಪ್ರಜೆಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತರ ಹೆಸರನ್ನು ಪೊಲೀಸರು ಇನ್ನೂ ಬಿಡುಗಡೆ ಮಾಡಿಲ್ಲ, ಆದರೆ ರಾಂಧವಾ ಅವರ ಸ್ನೇಹಿತ ಮತ್ತು ಪತ್ರಕರ್ತ ಮತ್ತು ಚಲನಚಿತ್ರ ನಿರ್ಮಾಪಕ ಹೋಪ್‌ವೆಲ್ ಚಿನೋನೊ ಅವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದ್ದಾರೆ. ರಾಂಧವಾ ಅವರ ಸ್ನೇಹಿತ, ಚಲನಚಿತ್ರ ನಿರ್ಮಾಪಕ ಹೋಪ್‌ವೆಲ್ ಚಿನೋನೊ ಅವರು ಟ್ವಿಟರ್‌ನಲ್ಲಿ ಅವರ ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ರಿಯೊ ಜಿಮ್ ಮಾಲೀಕ ಹರ್ಪಾಲ್ ರಾಂಧವಾ ಅವರ ನಿಧನದಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಅವರು ಜ್ವೀಶಾವೆನ್‌ನಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದರು. ಅವರು ವಿಮಾನದಲ್ಲಿ ಪ್ರಯಾಣಿಕರಾಗಿದ್ದರೂ ಪೈಲಟ್ ಆಗಿದ್ದ ಅವರ ಮಗ ಸೇರಿದಂತೆ ಇತರ ಐವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಬರೆದುಕೊಂಡಿದ್ದಾರೆ.

Shwetha M