ಗಿಲ್ಲಿಗೆ ಕಳಪೆ ಕೊಡಬೇಕು ಅಂತಾ ಮೊದಲೇ ಪ್ಲ್ಯಾನ್ – ಅಶ್ವಿನಿ, ರಿಷಾ ಬಿಗ್ಬಾಸ್ ನಿಯಮ ಉಲ್ಲಂಘಿಸಿದ್ದು ಸರಿನಾ?

ಗಿಲ್ಲಿಗೆ ಕಳಪೆ ಕೊಡಬೇಕು ಅಂತಾ ಮೊದಲೇ ಪ್ಲ್ಯಾನ್ – ಅಶ್ವಿನಿ, ರಿಷಾ ಬಿಗ್ಬಾಸ್ ನಿಯಮ ಉಲ್ಲಂಘಿಸಿದ್ದು ಸರಿನಾ?

ಬಿಗ್‌ಬಾಸ್ ಮನೆಯಲ್ಲಿ ಉತ್ತಮ ಮತ್ತು ಕಳಪೆ ಬಗ್ಗೆ ಚರ್ಚೆ ಮಾಡುವುದು ಸರಿಯಲ್ಲ. ಇದು ಬಿಗ್‌ಬಾಸ್ ನಿಯಮದ ಉಲ್ಲಂಘನೆಯಾಗಿದೆ. ಇದೀಗ  ‘ಗಿಲ್ಲಿಗೆ ಕಳಪೆ ಕೊಡಬೇಕು’ಎಂದು  ಮೊದಲೇ ಅಶ್ವಿನಿ, ರಿಷಾ ಪ್ಲ್ಯಾನ್ ಮಾಡಿದ್ದಾರೆ. ಜೊತೆಗೆ ಇದೇ ವಿಚಾರದಲ್ಲಿ ಅಶ್ವಿನಿ ಹಾಗೂ ರಿಷಾ ಇತರರ ಮೇಲೆ ಪ್ರಭಾವ ಬೀರಿದ್ದಾರೆ. ಇದು ಬಿಗ್ ಬಾಸ್ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

ಇದನ್ನೂ ಓದಿ:ಕಿಚ್ಚ ಸುದೀಪ್ ಕಿವಿ ಮಾತಿಗೆ ಅಶ್ವಿನಿ ಡೋಂಟ್‌ಕೇರ್ – ಗೌರವ ಅಶ್ವಿನಿಗೆ ಮಾತ್ರ ಬೇಕಾ, ಬೇರೆಯವರಿಗೆ ಕೊಡೋದಕ್ಕಲ್ವಾ?

ಬಿಗ್ ಬಾಸ್ ಮನೆಯಲ್ಲಿ ನಡೆಯೋ ಉತ್ತಮ ಹಾಗೂ ಕಳಪೆ ಆಯ್ಕೆ ವಿಚಾರವನ್ನು ಯಾರೂ ಓಪನ್ ಆಗಿ ಮಾತನಾಡುವಂತಿಲ್ಲ. ಜೊತೆಗೆ  ಬೇರೆಯವರ ಮೇಲೆ ಪ್ರಭಾವ ಬೀರುವಂತೆ ಇಲ್ಲ. ಅದು ಬಿಗ್ ಬಾಸ್ ನಿಯಮದ ಪ್ರಕಾರ ತಪ್ಪು. ಈ ವಿಚಾರದಲ್ಲಿ ವೈಯಕ್ತಿಕ ನಿರ್ಧಾರ ತಿಳಿಸೋ ಅವಕಾಶ ಮಾತ್ರ ಇರುತ್ತದೆ. ಈಗ ಬಿಗ್ ಬಾಸ್ ಮನೆಯಲ್ಲಿ ಈ ಬಗ್ಗೆ ಓಪನ್ ಆಗಿ ಚರ್ಚೆ ಆಗಿದೆ. ಅಶ್ವಿನಿ ಗೌಡ ಹಾಗೂ ರಿಷಾ ಗೌಡ ಎಲ್ಲರ ಎದುರು ಕಳಪೆ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಗಿಲ್ಲಿಗೆ ಅದನ್ನು ನೀಡಬೇಕು ಎಂದು ಚರ್ಚಿಸಲಾಗಿದೆ ‘ಬಿಗ್ ಬಾಸ್’ನಲ್ಲಿ ಈ ಮೊದಲು ಕಳಪೆ ಹಾಗೂ ಉತ್ತಮದ ವಿಚಾರದಲ್ಲಿ ಚರ್ಚೆ ಆಗಿ ಸುದೀಪ್ ಬಳಿಯಿಂದ ಬೈಸಿಕೊಂಡ ಉದಾಹರಣೆ ಸಾಕಷ್ಟಿದೆ. ಈ ವಾರವೂ ಅದು ಮುಂದುವರಿದಿದೆ.

ಗಿಲ್ಲಿ ನಟ ಅವರು ಈ ಬಾರಿ ತಮ್ಮದೇ ತಂಡಕ್ಕೆ ಸಿಗೋ ಅವಕಾಶವನ್ನು ಕಸಿದುಕೊಂಡರು ಎಂಬುದು ಬ್ಲೂ ಟೀಂ ತಂಡದ ಆರೋಪ. ಈ ಕಾರಣದಿಂದ ಎಲ್ಲರೂ ಗಿಲ್ಲಿನ ಅನೇಕರು ದ್ವೇಷ ಮಾಡಿದರು. ಈ ವಿಚಾರವನ್ನೇ ಇಟ್ಟುಕೊಂಡು ಗಿಲ್ಲಿಗೆ ಕಳಪೆ ನೀಡಲು ಅನೇಕರು ರೆಡಿ ಆಗಿದ್ದಾರೆ. ಇದರಲ್ಲಿ ಅಶ್ವಿನಿ ಗೌಡ ಹಾಗೂ ರಿಷಾ ಮುಂದಿದ್ದಾರೆ. ಗುಂಪಿನಲ್ಲಿ ಮಾತನಾಡುವಾಗ ಅಶ್ವಿನಿ ಅವರು, ‘ಗಿಲ್ಲಿ ನಿನಗೆ ಈ ವಾರ ಎಲ್ಲರೂ ಕಳಪೆ ನೀಡಬೇಕು’ ಎಂದು ಹೇಳಿದ್ದಾರೆ. ಈ ಮೂಲಕ ಅಕ್ಕ-ಪಕ್ಕ ಇದ್ದವರ ಮೇಲೆ ಪ್ರಭಾವ ಬೀರಿದ್ದಾರೆ. ರಿಷಾ ಗೌಡ ಕೂಡ ಮಾತನಾಡುವಾಗ ‘ಗಿಲ್ಲಿಗೆ ಕಳಪೆ ಕೊಡಬೇಕು’ ಎಂದು ಹೇಳಿದ್ದಾರೆ. ಅವರು ಕೂಡ ಅನೇಕರ ಮೇಲೆ ಪ್ರಭಾವ ಬೀರಿದ್ದಾರೆ. ಹೀಗಾಗಿ ಗಿಲ್ಲಿಗೆ ಮನೆಯ ಬಹುತೇಕರು ಕಳಪೆ ಕೊಡೋ ಸಾಧ್ಯತೆ ಇದೆ.

ಅಶ್ವಿನಿ ಗೌಡ ಮತ್ತು ರಿಷಾ ಗೌಡ ಪ್ರಭಾವದಿಂದ ಅನೇಕರು ಗಿಲ್ಲಿಗೆ ಕಳಪೆ ಕೊಟ್ಟರೂ ಕೂಡಾ ವೀಕೆಂಡ್ ಶೋನಲ್ಲಿ ತಕ್ಕ ಶಾಸ್ತಿಯಾಗುವುದು ಖಂಡಿತಾ. ಕಿಚ್ಚ ಸುದೀಪ್ ಬಿಗ್ ಬಾಸ್ ನಿಯಮ ಉಲ್ಲಂಘಿಸಿದವರನ್ನು ಪ್ರಶ್ನೆ ಮಾಡಿಯೇ ಮಾಡ್ತಾರೆ. ಇದರ ಪರಿಣಾಮ ಅಶ್ವಿನಿ ಮತ್ತು ರಿಷಾ ಎದುರಿಸಲೇಬೇಕಿದೆ.

Sulekha