ಭಾರತ-ಚೀನಾ ಸಂಘರ್ಷ: ಎಲ್ಎಸಿ ಬಳಿ ಕಣ್ಗಾವಲು ಪೋಸ್ಟ್ ನಿರ್ಮಾಣಕ್ಕೆ ಯೋಜಿಸಿತ್ತೇ ಚೀನಾ?
ನವದೆಹಲಿ: ಭಾರತ-ಚೀನಾ ಸೈನಿಕರ ಘರ್ಷಣೆಗೆ ವೇದಿಕೆಯಾಗಿದ್ದ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ ನ ಎಲ್ಎಸಿ ಗಡಿ ಬಳಿ ಚೀನಾದ ಪಿಎಲ್‌ಎ ಸೇನೆ ತನ್ನ ಕಣ್ಗಾವಲು ಪೋಸ್ಟ್ ನಿರ್ಮಾಣಕ್ಕೆ ಯೋಜಿಸುತ್ತಿತ್ತು ಎಂದು ಭಾರತೀಯ ಸೇನಾಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಸೇನಾಧಿಕಾರಿಯೊಬ್ಬರು, ‘ಗಾಲ್ವಾನ್‌ನಲ್ಲಿರುವಂತೆ, ಅರುಣಾಚಲದ ಪವಿತ್ರ ಜಲಪಾತಗಳ ಬಳಿ ವೀಕ್ಷಣಾ ಪೋಸ್ಟ್ ಅನ್ನು ಸ್ಥಾಪಿಸಲು ಪಿಎಲ್‌ಎ ಯೋಜಿಸುತ್ತಿದೆ. ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿರುವ ಯಾಂಗ್ಟ್ಸೆಯಲ್ಲಿ ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ವೀಕ್ಷಣಾ ಪೋಸ್ಟ್ (ಒಪಿ) ಸ್ಥಾಪಿಸಲು ಯೋಜಿಸುತ್ತಿತ್ತು. ಈ ವೇಳೆ ಭಾರತೀಯ ಸೇನೆಯ ಸಿಬ್ಬಂದಿ ಮಧ್ಯಪ್ರವೇಶಿಸಿದಾಗ ಘರ್ಷಣೆ ಸಂಭವಿಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವೈರಲ್ ಆದ ಭಾರತ, ಚೀನಾ ಸೈನಿಕರ ಹೊಡೆದಾಟ ವಿಡಿಯೋ
ಭಾರತ ಮತ್ತು ಚೀನಾ ಪಡೆಗಳ ಮಧ್ಯೆ ಘರ್ಷಣೆ ನಡೆದ ಬಳಿಕ ಭಾರತ-ಚೀನಾ ಸಾಂಬಾದಲ್ಲಿ ಭಾರತ-ಪಾಕ್ ಇಸ್ತಾನ್ ಅಂತಾರಾಷ್ಟ್ರೀಯ ಗಡಿಯಲ್ಲಿ ಭದ್ರತಾ ಪಡೆಗಳು ಗಸ್ತು ಹೆಚ್ಚಿಸಿವೆ. ಸಾಂಬಾದಲ್ಲಿ ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಗಡಿ ಭದ್ರತಾ ಪಡೆ ತೀವ್ರ ನಿಗಾ ಇರಿಸಿದೆ. ಯಾವುದೇ ಹವಾಮಾನ ಮತ್ತು ಸಮಯದಲ್ಲಿ ಗಡಿಯಾಚೆ ಬರುವ ಶತ್ರುಗಳನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.