Pizza ತಿನ್ನೋ ಮುನ್ನ ಎಚ್ಚರ! – Pizzaದಿಂದಲೇ ಈ ಸಮಸ್ಯೆ ಬರುತ್ತೆ?

ಈಗೇನಿದ್ರೂ ಪಿಜ್ಜಾ, ಬರ್ಗರ್ ತಿನ್ನೋಕಾಲ. ಮನೆಯಲ್ಲಿ ಬಿಸಿ ಬಿಸಿ ರುಚಿಯಾದ ಅಡುಗೆ ಇದ್ರೂ, ಹೊರಗಡೆ ಸಿಗೋ ಫಾಸ್ಟ್ ಫುಡ್ ನಾಲಿಗೆಗೆ ಹಿತ ಅನ್ನಿಸುತ್ತೆ. ಹೀಗಾಗೇ ಅನೇಕರು ಬಜೆಟ್ ಫ್ರೆಂಡ್ಲಿ ಇರೋ ಪಿಜ್ಜಾವನ್ನ ತಿಂತಾರೆ. ನೀವೂ ಜಾಸ್ತಿ ಪಿಜ್ಜಾ ತಿಂತಾ ಇದ್ರೆ ಈ ಸ್ಟೋರಿ ನೋಡ್ಲೇ ಬೇಕು. ಪಿಜ್ಜಾ ಡೈಲಿ ತಿಂದ್ರೆ ನಿಮ್ಮ ಆರೋಗ್ಯ ಹಾಳಾಗುತ್ತೆ. ಪಿಜ್ಜಾವನ್ನ ಡೈಲಿ ತಿನ್ನೋದ್ರಿಂದ ಒಂದೊಂದೇ ಸಮಸ್ಯೆ ನಿಮ್ಮನ್ನ ಕಾಡೋದಿಕ್ಕೆ ಶುರುಮಾಡುತ್ತೆ.
ಇದನ್ನೂ ಓದಿ: ರಾಜ್ಯದ ಗೃಹಲಕ್ಷ್ಮಿಯರಿಗೆ ಗುಡ್‌ನ್ಯೂಸ್! – ಮಹಿಳೆಯರಿಗಾಗಿ ಹೊಸ ಸೇವೆ ಆರಂಭ!
ಪಿಜ್ಜಾ ಸಂಸ್ಕರಿಸಿದ ಮೈದಾದಿಂದ ಮಾಡಲಾಗಿತ್ತೆ. ಇದ್ರ ಜೊತೆ ಕೆಲ ಸಾಸ್, ಕ್ರೀಮ್, ಚೀಸ್, ಸೋಡ ಹಾಕಿ ಪಿಜ್ಜಾ ರೆಡಿ ಮಾಡಿರ್ತಾರೆ. ಹೀಗಾಗಿ ಇದ್ರಲ್ಲಿ ಕ್ಯಾಲೋರಿಗಳು, ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಸೋಡಿಯಂ ತುಂಜಾ ಜಾಸ್ತಿ ಇದೆ, ಇದು ಹೃದಯ, ಜೀರ್ಣಾಂಗ ವ್ಯವಸ್ಥೆ ಮತ್ತು ಮೂತ್ರಪಿಂಡಗಳಂತಹ ಅಂಗಗಳಿಗೆ ಹಾನಿ ಮಾಡುತ್ತದೆ. ಅಷ್ಟೇ ಅಲ್ಲ ಇದನ್ನ ಡೈಲಿ ತಿಂತಾ ಇದ್ರೆ ಮಧುಮೇಹ ಕೂಡ ಕಾಣಿಸಿಕೊಳ್ಬೋದು. ಇನ್ನು ಪಿಜ್ಜಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಡಿಯಂ ಇದೆ, ಸೋಡಿಯಂ ಅಂಶದಿಂದಾಗಿ ಬಿಪಿ ಕೂಡ ಜಾಸ್ತಿಯಾಗುತ್ತೆ.
ಪಿಜ್ಜಾ ತಿನ್ನುವುದು ಒಂಥರ ಹೃದಯದ ಸಂಬಂಧಿ ಕಾಯಿಲೆಗಳನ್ನ ವೈಲ್‌ಕಮ್ ಮಾಡಿದಂತೆ. ಯಾಕಂದ್ರೆ ಇದ್ರಲ್ಲಿರೋ ಸ್ಯಾಚುರೇಟೆಡ್ ಫ್ಯಾಟ್ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತವೆ. ಇದು ಅಪಧಮನಿಗಳನ್ನು ಮುಚ್ಚುತ್ತವೆ. ಪೆಪ್ಪೆರೋನಿ ಮತ್ತು ಸಾಸೇಜ್‌ನಂತಹ ಸಂಸ್ಕರಿಸಿದ ಮಾಂಸವನ್ನು ತಿನ್ನುವುದರಿಂದ ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚಾಗುತ್ತದೆ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಇದರ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಪಿಜ್ಜಾದಲ್ಲಿ ಫೈಬರ್ ಅಂಶ ಕಡಿಮೆ, ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ಜಾಸ್ತಿಯಿದೆ. ಇದು ಜೀರ್ಣಕ್ರಿಯೆಗೆ ತೊಂದರೆ ಉಂಟು ಮಾಡುತ್ತದೆ. ಇದ್ರಿಂದಾಗಿ ಮಲಬದ್ಧತೆ, ಗ್ಯಾಸ್ಟ್ರಿಕ್ ಕೂಡ ಕಾಣಿಸಿಕೊಳುತ್ತೆ.ಕಾಲಕಳೆದಂತೆ ಕರುಳಿನ ಸಮಸ್ಯೆಗಳು ಮತ್ತು ಕೊಲೊನ್ ಕ್ಯಾನ್ಸರ್‌ಗೂ ಕಾರಣವಾಗಬಹುದು. ಇದ್ರಿಂದಾಗಿ ಜೀವಕ್ಕೆ ಅಪಾಯ ಎದುರಾಗ್ಬೋದು. ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಬಾಲಕಿಯೊಬ್ಬಳು ಮೃತಪಟ್ಟಿದ್ಲು. ಆಕೆ ಪ್ರತಿದಿನ ಫಾಸ್ಟ್ ಫುಡ್ ತಿಂದಿದ್ದೇ ಸಾವಿಗೆ ಕಾರಣ ಅಂತ ವೈದ್ಯರು ಹೇಳಿದ್ರು.. ಹೀಗಾಗಿ ಪಿಜ್ಜಾ ತಿನ್ನೋದನ್ನ ಆದಷ್ಟು ಕಡಿಮೆ ಮಾಡಿ. ಮನೆಯಲ್ಲೇ ಆರೋಗ್ಯಕರ ಪಿಜ್ಜಾ ಮಾಡಿಕೊಂಡು ತಿನ್ನಿ.

ನೋಡಿರಿ

