ಪಿತೃಗಳಿಗೆ ಹೀಗೆ ತರ್ಪಣ ನೀಡಿ! ಮನೆಯಲ್ಲಿ ಶ್ರಾದ್ಧ… ತಿಳಿಯಿರಿ ಸಂಪೂರ್ಣ ವಿಧಾನ!

ನಮ್ಮ ಪೂರ್ವಜರನ್ನು ಸ್ಮರಿಸಿ, ಅವರಿಗೆ ಕೃತಜ್ಞತೆ ಸಲ್ಲಿಸುವ ಪ್ರಮುಖ ಆಚರಣೆಗಳಲ್ಲಿ ಶ್ರಾದ್ಧವೂ ಒಂದು. ವಿಶೇಷವಾಗಿ ಪಿತೃಪಕ್ಷದ ಸಂದರ್ಭದಲ್ಲಿ ಮನೆಯಲ್ಲಿ ಸರಳವಾಗಿ ಶ್ರಾದ್ಧ ಆಚರಿಸುವವರು ಹಲವರಿದ್ದಾರೆ. ಹಾಗಾದರೆ ಮನೆಯಲ್ಲಿ ಶ್ರಾದ್ಧವನ್ನು ಹೇಗೆ ಮಾಡಬಹುದು? ಅನ್ನೋದ್ದನ್ನ ನೋಡೋಣ ಬನ್ನಿ.
ಮೊದಲಿಗೆ ಮನೆಯನ್ನು ಸ್ವಚ್ಛಗೊಳಿಸಿ, ಪೂಜೆ ಮಾಡುವ ಸ್ಥಳವನ್ನು ಸಿದ್ಧಪಡಿಸಿಕೊಳ್ಳಬೇಕು. ಪೂರ್ವಜರನ್ನು ಸ್ಮರಿಸುತ್ತಾ ಅವರ ಹೆಸರಿನಲ್ಲಿ ಸಂಕಲ್ಪ ಮಾಡುವುದು ಮುಖ್ಯ. ನಂತರ ಸಂಪ್ರದಾಯದಂತೆ ಎಳ್ಳು, ನೀರು, ಅಕ್ಷತೆ, ಹೂವು ಹಾಗೂ ಅಗತ್ಯ ಪೂಜಾ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಳ್ಳಬಹುದು.
ಪಿತೃಗಳಿಗೆ ತರ್ಪಣ ನೀಡುವುದು ಶ್ರಾದ್ಧದ ಪ್ರಮುಖ ಭಾಗ. ನೀರಿಗೆ ಕಪ್ಪು ಎಳ್ಳು ಸೇರಿಸಿ, ಪೂರ್ವಜರನ್ನು ಸ್ಮರಿಸುತ್ತಾ ತರ್ಪಣ ಅರ್ಪಿಸಲಾಗುತ್ತದೆ. ಕುಟುಂಬದ ಸಂಪ್ರದಾಯದ ಪ್ರಕಾರ ಪಿಂಡಪ್ರದಾನವನ್ನೂ ಮಾಡಬಹುದು.
ನಂತರ ಅನ್ನ, ಬೇಳೆ, ತರಕಾರಿ ಸೇರಿದಂತೆ ಸಾತ್ವಿಕ ಆಹಾರವನ್ನು ಸಿದ್ಧಪಡಿಸಿ, ಅದನ್ನು ನೈವೇದ್ಯವಾಗಿ ಅರ್ಪಿಸುವ ಪದ್ಧತಿಯಿದೆ. ಸಾಧ್ಯವಾದರೆ ಬ್ರಾಹ್ಮಣರು, ಹಿರಿಯರು ಅಥವಾ ಅಗತ್ಯವಿರುವವರಿಗೆ ಅನ್ನದಾನ ಮಾಡುವುದು ಕೂಡ ಸಂಪ್ರದಾಯದಲ್ಲಿ ಮಹತ್ವ ಪಡೆದಿದೆ.
ಇದನ್ನೂ ಓದಿ: ಮನೆ ದೇವರ ಪೂಜೆ ಮಾಡುವ ವೇಳೆ ಈ ಕೆಲಸ ಯಾವುದೇ ಕಾರಣಕ್ಕೂ ಮಾಡಬೇಡಿ – ಯಾಕೆ ಗೊತ್ತಾ?
ಶ್ರಾದ್ಧದ ವಿಧಾನಗಳು ಕುಟುಂಬದ ಆಚರಣೆ, ಜಾತಿ-ಸಂಪ್ರದಾಯ ಮತ್ತು ಪ್ರಾದೇಶಿಕ ಪದ್ಧತಿಗಳ ಪ್ರಕಾರ ಬದಲಾಗಬಹುದು. ಆದ್ದರಿಂದ ನಿಮ್ಮ ಕುಟುಂಬದ ಪುರೋಹಿತರ ಮಾರ್ಗದರ್ಶನದಲ್ಲಿ ಆಚರಿಸುವುದು ಸೂಕ್ತ. ಮುಖ್ಯವಾಗಿ, ಶ್ರಾದ್ಧದ ಉದ್ದೇಶ ಕೇವಲ ವಿಧಿವಿಧಾನವಲ್ಲ. ನಮ್ಮನ್ನು ಬೆಳೆಸಿದ ಪೂರ್ವಜರನ್ನು ನೆನಪಿಸಿಕೊಂಡು, ಅವರಿಗೆ ಗೌರವ ಮತ್ತು ಕೃತಜ್ಞತೆ ಸಲ್ಲಿಸುವುದೇ ಇದರ ಮೂಲ ಆಶಯ.

ನೋಡಿರಿ

