2026ಕ್ಕೆ ಪಿಂಕ್ ಲೈನ್ ಸಿದ್ಧ! – ವಿಮಾನ ನಿಲ್ದಾಣಕ್ಕೆ ರಸ್ತೆ ಜತೆಗೇ ಇರಲಿದೆ ನಮ್ಮ ಮೆಟ್ರೋ ಲೈನ್!

2026ಕ್ಕೆ ಪಿಂಕ್ ಲೈನ್ ಸಿದ್ಧ! – ವಿಮಾನ ನಿಲ್ದಾಣಕ್ಕೆ ರಸ್ತೆ ಜತೆಗೇ ಇರಲಿದೆ ನಮ್ಮ ಮೆಟ್ರೋ ಲೈನ್!

ಬೆಂಗಳೂರು ನಮ್ಮ ಮೆಟ್ರೋ ಕಾಮಗಾರಿಗಳು ಎಲ್ಲಡೆ ಭರದಿಂದ ಸಾಗುತ್ತಿದೆ. ಕಾಳೇನ ಅಗ್ರಹಾರದಿಂದ ನಾಗವಾರವರೆಗೆ ಸಂಪರ್ಕಿಸುವ ನಮ್ಮ ಮೆಟ್ರೋದ  ಗುಲಾಬಿ ಮಾರ್ಗದ ಕಾರ್ಯಗಳು ಕೂಡ ತ್ವರಿತ ಗತಿಯಲ್ಲಿ ಸಾಗುತ್ತಿದೆ. ಇದೀಗ ಕೆಆರ್ ಪುರಂನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವರೆಗಿನ ಮೆಟ್ರೋ  ಕಾಮಗಾರಿಯನ್ನು ಎರಡು ಹಂತಗಳಲ್ಲಿ ಮುಂದುವರಿಸಲಾಗುವುದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ: ಮೋದಿ ಟೀಮ್ 400 ಕ್ರಾಸ್ ಮಾಡುತ್ತಾ? – ಕರ್ನಾಟಕದ ಸಮೀಕ್ಷೆ ಹೇಗಿದೆ?, ಕಮಾಲ್ ಮಾಡುತ್ತಾ ಬಿಜೆಪಿ-ಜೆಡಿಎಸ್ ಕಮಾಲ್?

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಡಿಕೆಶಿ, ಸಂಚಾರದಟ್ಟಣೆ ಗಮನದಲ್ಲಿಟ್ಟುಕೊಂಡು ಎಲ್ಲೆಲ್ಲಿ ಮೆಟ್ರೋ ಪಿಲ್ಲರ್​​ಗಳ ನಿರ್ಮಾಣ ಮಾಡಬೇಕೆಂದು ನಿರ್ಧರಿಸಲಾಗುವುದು. ಕಾಳೇನ ಅಗ್ರಹಾರದಿಂದ ನಾಗವಾರವರೆಗಿನ ಪಿಂಕ್ ಲೈನ್ 2026ರ ವೇಳೆಗೆ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆ ಇದೆ ಎಂದರು. ಆದರೆ ಖಚಿತವಾದ ಡೆಡ್ ಲೈನ್ ನೀಡಿಲ್ಲ.

ವಿಮಾನ ನಿಲ್ದಾಣ ಮೆಟ್ರೋ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದೆ. ಎಲ್ಲೆಲ್ಲಿ ಪಿಲ್ಲರ್​​​ಗಳನ್ನು ಹಾಕಲಾಗಿಲ್ಲವೋ ಅಲ್ಲೆಲ್ಲಾ ಎರಡು ಹಂತಗಳಲ್ಲಿ ಪಿಲ್ಲರ್ ನಿರ್ಮಾಣ ಮಾಡಲು ಸೂಚಿಸಿದ್ದೇವೆ. ಆ ಕಡೆಗಳಲೆಲ್ಲಾ ಒಂದು ಕಡೆ ರಸ್ತೆಯನ್ನು ಬಳಸಿದರೆ ಮತ್ತೊಂದು ಕಡೆ ಪಿಲ್ಲರ್ ಕಾಮಗಾರಿ ನಡೆಯಲಿದೆ. ಇದರಿಂದ ಸಂಚಾರದಟ್ಟಣೆಯನ್ನು ನಿರ್ವಹಣೆ ಮಾಡಬಹುದು. ಫ್ಲೈ ಓವರ್ ವೆಚ್ಚವನ್ನು ಬಿಬಿಎಂಪಿ ಧರಿಸಿದರೆ ಮೆಟ್ರೋ ಸಂಬಂಧಿತ ವೆಚ್ಚವನ್ನು ಬಿಎಂಅರ್​ಸಿಎಲ್ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

ವಿಮಾನ ನಿಲ್ದಾಣ ಮೆಟ್ರೋಕ್ಕೆ 2024ರ ಗಡುವು ವಿಧಿಸಿದ್ದರ ಬಗ್ಗೆ ಪ್ರತಿಕ್ರಿಸಿದ ಅವರು, ಶೇಕಡ 98 ರಷ್ಟು ಭೂಸ್ವಾಧೀನ ಪೂರ್ಣಗೊಂಡಿದೆ. ಶೇಕಡ 53 ರಷ್ಟು ನಿರ್ಮಾಣ ಕಾಮಗಾರಿಯು ಮುಗಿದಿದೆ. 17 ಸ್ಟೇಷನ್​ಗಳ ಕಾಮಗಾರಿಯು ಮುಕ್ತಾಯವಾಗಿದೆ. ಹೊಸ ಮೆಟ್ರೋ ಲೈನ್ ಗಳ ಬಗ್ಗೆ ರಾಜ್ಯ ಬಜೆಟ್ ನಲ್ಲಿ ಘೋಷಣೆ ಮಾಡುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ವೆಂಕಟೇಶಪುರದಿಂದ ಕಾಡುಗೊಂಡನಹಳ್ಳಿ ನಿಲ್ದಾಣದ ವರೆಗಿನ ಸುರಂಗ ಮಾರ್ಗ ಕೊರೆಯಲು ಟಿಬಿಎಂ ಭದ್ರಾ 2023ರ ಫೆಬ್ರವರಿ 16ರಂದು ಕಾಮಗಾರಿ ಆರಂಭಿಸಿತ್ತು. ಒಂದು ವರ್ಷದ ನಂತರ, ಅಂದರೆ ಫೆಬ್ರವರಿ 8ರ ಗುರುವಾರ ಭದ್ರಾ, 1,185 ಮೀಟರ್ ಸುರಂಗ ಕೊರೆದು ಹೊರ ಬಂದಿದೆ. ಈ ಮೂಲಕ 20,992 ಮೀಟರ್ ಸುರಂಗ ಮಾರ್ಗದ ಪೈಕಿ 19,120 ಮೀಟರ್ ಸುರಂಗ ಮಾರ್ಗ ಕಾಮಗಾರಿ ಪೂರ್ಣಗೊಂಡಂತಾಗಿದೆ.

Shwetha M