ಪ್ರಕೃತಿ ಮಡಿಲಲ್ಲಿ ಇದೆಂಥಾ ವಿಸ್ಮಯ! – ಆಗಸದಲ್ಲಿ ನಡೆಯಿತು ಬಣ್ಣದ ಬೆಳಕಿನ ಚಮತ್ಕಾರ!

ಪ್ರಕೃತಿ ಮಡಿಲಲ್ಲಿ ಇದೆಂಥಾ ವಿಸ್ಮಯ! – ಆಗಸದಲ್ಲಿ ನಡೆಯಿತು ಬಣ್ಣದ ಬೆಳಕಿನ ಚಮತ್ಕಾರ!

ಪ್ರಕೃತಿ ಹಲವು ವಿಸ್ಮಯಕಾರಿ ಸಂಗತಿಗಳ ಆಗರ. ಸದಾ ಒಂದಲ್ಲ ಒಂದು ಬೆರಗು ಮೂಡಿಸುತ್ತಲೇ ಇರುತ್ತದೆ. ಪ್ರಕೃತಿಯ ಮಡಿಲಿನಲ್ಲಿ ನಡೆಯುವ ವಿದ್ಯಮಾನಗಳು ಸದಾ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಪ್ರಕೃತಿಯ ಅದ್ಭುತ ದೃಶ್ಯಗಳು ಕ್ಷಣಾರ್ಧದಲ್ಲಿ ನಮ್ಮನ್ನು ಸೆಳೆಯುವ ಜೊತೆಗೆ ಮತ್ತೆ ಮತ್ತೆ ನೋಡುವಂತೆಯೂ ಮಾಡುತ್ತದೆ. ಹೀಗೆ ಪ್ರಕೃತಿ ತನ್ನೊಡಲಿನಲ್ಲಿ ಬಚ್ಚಿಟ್ಟುಕೊಂಡಿರುವ ಅದ್ಭುತ ದೃಶ್ಯಗಳು ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ ವೈರಲ್‌ ಆಗುತ್ತಲೇ ಇರುತ್ತವೆ. ಇದೀಗ ಇಲ್ಲೊಂದು ವಿಡಿಯೋ ಭಾರಿ ವೈರಲ್‌ ಆಗುತ್ತಿದೆ.

ಪ್ರಕೃತಿಯ ರಮಣೀಯ ದೃಶ್ಯಗಳು ಆಗಾಗ ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಇದೀಗ ಆಕಾಶದಲ್ಲೊಂದು ವಿದ್ಯಮಾನ ನಡೆದಿದೆ. ಆಕಾಶದಲ್ಲಿ ಬಣ್ಣದ ಬೆಳಕೊಂದು ಕಂಡಿದ್ದು, ಈ ಅದ್ಬುತ ದೃಶ್ಯವನ್ನು ಪೈಲಟ್ ಒಬ್ಬರು ಸೆರೆ ಹಿಡಿದಿದ್ದಾರೆ. ಈ ದೃಶ್ಯವನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದು, ಭಾರಿ ವೈರಲ್‌ ಆಗುತ್ತಿದೆ. ವಿಮಾನ ಹಾರಾಟದ ಸಮಯದಲ್ಲಿ ಕ್ಯಾಮೆರಾದಲ್ಲಿ ಸೆರೆಯಾದ ಈ ರೋಚಕ ಬೆಳಕಿನ ದೃಶ್ಯ ಎಲ್ಲರನ್ನೂ ರೋಮಾಂಚನಗೊಳ್ಳುವಂತೆ ಮಾಡಿದೆ.

ಇದನ್ನೂ ಓದಿ: ಒಳಚರಂಡಿಗೆ ಇಳಿದ ಜಗತ್ತಿನ 5ನೇ ಅತಿದೊಡ್ಡ ಶ್ರೀಮಂತ – 18ನೇ ಶತಮಾನವನ್ನ ನೆನಪಿಸಿಕೊಂಡ ಬಿಲ್ ಗೇಟ್ಸ್

ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ದೃಶ್ಯವನ್ನು ಹಂಚಿಕೊಳ್ಳಲಾಗಿದೆ. ಥಾಮಸ್ ಎಂಬ ಪೈಲಟ್ ಸೆರೆ ಹಿಡಿದ ದೃಶ್ಯವಿದು. ಥಾಮಸ್ ಅವರು ಅರೋರಾ ಬೊರಿಯಾಲಿಸ್‌ನ (ಆಕಾಶದಲ್ಲಿ ಕಂಡ ದೃಶ್ಯ) ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಸಾಮಾನ್ಯವಾಗಿ ನಾರ್ದರ್ನ್ ಲೈಟ್ಸ್ ಎಂದೂ ಕರೆಯಲಾಗುತ್ತದೆ. `ನಾನು ನೋಡಿದ ಅತ್ಯಂತ ಸುಂದರ ಅರೋರಾ ಬೊರಿಯಾಲಿಸ್‌! ಕಳೆದ ರಾತ್ರಿಯನ್ನು ಅರೋರಾ ಬೋರಿಯಾಲಿಸ್ ಸಂಪೂರ್ಣವಾಗಿ ಬೆರಗುಗೊಳಿಸಿದೆ. ಹಸಿರು ಮತ್ತು ಕೆಂಪು ವಾತಾವರಣದ ರೋಮಾಂಚಕ, ಪ್ರಕಾಶಮಾನವಾದ ಪರದೆಗಳು. ಇದು ನೆದರ್ಲ್ಯಾಂಡ್ಸ್‌ನಿಂದಲೂ ಗೋಚರಿಸುತ್ತದೆ. ಇದು ಬಹಳ ಅಪರೂಪದ ದೃಶ್ಯವಾಗಿದೆ’ ಎಂದು ಇವರು ಬರೆದುಕೊಂಡಿದ್ದಾರೆ.

Shwetha M