ಏರ್‌ ಶೋ ಗಮನ ಸೆಳೆದ ದುಬಾರಿ ಹೆಲ್ಮೆಟ್ – ಅಬ್ಬಬ್ಬಾ.. ಇದ್ರ ಬೆಲೆ ಇಷ್ಟೊಂದಾ?

ಏರ್‌ ಶೋ ಗಮನ ಸೆಳೆದ ದುಬಾರಿ ಹೆಲ್ಮೆಟ್ – ಅಬ್ಬಬ್ಬಾ.. ಇದ್ರ ಬೆಲೆ ಇಷ್ಟೊಂದಾ?

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಏರ್‌ ಶೋ ನಡೆದಿದೆ. ಈ ಬಾರಿಯ ಏರ್‌ ಶೋನಲ್ಲಿ ಸೇನಾ ಹೆಲ್ಮೆಟ್‌ ಭಾರಿ ಗಮನ ಸೆಳೆದಿದೆ. ಇದ್ರ ಬೆಲೆ ಕೇಳಿದ್ರೆ ಶಾಕ್‌ ಆಗುವಂತಿದೆ.

ಇದನ್ನೂ ಓದಿ: ಪಾಕಿಸ್ತಾನದ ಮೈದಾನಗಳಿಗೆ ನುಗ್ಗಿದ ಫ್ಯಾನ್ಸ್ –  ICC ಟೂರ್ನಿಗೆ ಇದೇನಾ ಭದ್ರತೆ?

ಭಾರತೀಯ ಸೇನಾ ವಿಂಗ್ ಕಮಾಂಡರ್‌ಗಳು, ಪೈಲೆಟ್‌ಗಳ ಬಳಕೆಗಾಗಿಯೇ ಕನ್ನಡಿಗರು ತಯಾರು ಮಾಡಿರುವ ಅಡ್ವಾನ್ಸ್ಡ್ ಹೆಲ್ಮೆಟ್ ಗಮನ ಸೆಳೆಯುತ್ತಿದೆ. ವರ್ಚಸ್ ಏರೋ ಸ್ಪೇಸ್ ಸಂಸ್ಥೆ ಸುಮಾರು 8 ರಿಂದ 10 ಕೋಟಿ ವೆಚ್ಚದ, ಒಂದು ಕೆ.ಜಿ. ತೂಕದ ಅಡ್ವಾನ್ಸ್ಡ್‌ ಹೆಲ್ಮೆಟ್ ಇದು.

ಸೆನ್ಸಾರ್ ಮೂಲಕ ಫೈಟರ್ ಜೆಟ್ ಮೇಲಿರುವ ಪೈಲೆಟ್‌ಗೆ ಸುತ್ತಲಿನ ಪ್ರದೇಶದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತದೆ. ಜೊತೆಗೆ, ಕಣ್ಣಂಚಿನಲ್ಲೇ ಎಲ್ಲವು ತಿಳಿಯುವಂತೆ ಅಭಿವೃದ್ಧಿ ಪಡಿಸಲಾಗಿದೆ.

ಸದ್ಯ ಭಾರತದ ವಾಯುಪಡೆಯಲ್ಲಿರುವ ತೇಜಸ್ ವಿಮಾನದ ಅಪ್‌ಗ್ರೇಡ್ ವರ್ಷನ್‌ಗೆ ಮತ್ತು ಬಹುನೀರಿಕ್ಷಿತ ಭಾರತ ವಾಯಸೇನೆಯ ಮುಂಬರುವ ಫೈಟರ್ ಜೆಟ್ ಅಮ್ಕಾಗೆ ಬಳಕೆ ಮಾಡಲು ತಯಾರಿ ಮಾಡಲಾಗಿದೆ.

Shwetha M