ವಿಶ್ವದ ಅತೀ ಉದ್ದದ ಮೂಗು ಹೊಂದಿರುವ ವ್ಯಕ್ತಿ ಇವರೇ – ಫೋಟೋ ವೈರಲ್

ವಿಶ್ವದ ಅತೀ ಉದ್ದದ ಮೂಗು ಹೊಂದಿರುವ ವ್ಯಕ್ತಿ ಇವರೇ – ಫೋಟೋ ವೈರಲ್

ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವಿಚಿತ್ರವಾದ ಸುದ್ದಿಗಳು ವರದಿಯಾಗುತ್ತಲೇ ಇರುತ್ತದೆ. ಕೆಲವೊಂದು ವಿಚಾರಗಳು ನಕ್ಕು ನಗಿಸುವಂತೆ ಮಾಡಿದರೆ, ಇನ್ನೂ ಕೆಲವು ಸಂಗತಿಗಳು ನಮ್ಮನ್ನು ಆಶ್ಚರ್ಯ ಪಡುವಂತೆ ಮಾಡುತ್ತದೆ. ಅಂತಹದ್ದೇ ಒಂದು ಫೋಟೋ ಇದೀಗ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಇ-ಸಿಗರೇಟ್ ನಿಂದಲೂ ಆರೋಗ್ಯಕ್ಕೆ ಕಂಟಕ ತಪ್ಪಿದ್ದಲ್ಲ.. ಎಚ್ಚರ!

ಹಿಸ್ಟಾರಿಕ್ ವಿಡ್ಸ್ ಎಂಬ ಟ್ವಿಟರ್ ಪೇಜ್‍ನಲ್ಲಿ, ಬಿಲೀವ್ ಇಟ್ ಆರ್ ನಾಟ್ ಮ್ಯೂಸಿಯಂನಲ್ಲಿ ಇರಿಸಲಾಗಿರುವ ವ್ಯಕ್ತಿಯೊಬ್ಬನ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಈ ಫೋಟೋದಲ್ಲಿರುವ ವ್ಯಕ್ತಿ ಅತಿ ಉದ್ದದ ಮೂಗನ್ನು ಹೊಂದಿದ್ದಾರೆ. ಇದನ್ನು ಕಂಡ ಜನ ಫೋಟೋ ನೋಡಿ ಶಾಕ್ ಆಗಿದ್ದಾರೆ. ಒಬ್ಬ ವ್ಯಕ್ತಿ ಇಷ್ಟು ಉದ್ದದ ಮೂಗನ್ನು ಹೊಂದಿರಲು ಸಾಧ್ಯವೇ ಎಂದಿದ್ದಾರೆ.

ಹೌದು, ಈ ಫೋಟೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಥಾಮಸ್ ವಾಡ್‍ಹೌಸ್. 18 ನೇ ಶತಮಾನದಲ್ಲಿದ್ದ ಇಂಗ್ಲಿಷ್ ಸರ್ಕಸ್ ಕಲಾವಿದರಾಗಿದ್ದರು7.5 ಇಂಚುಗಳಷ್ಟು (19 ಸೆಂ) ಉದ್ದದ ಮೂಗನ್ನು ಹೊಂದುವ ಮೂಲಕ ವಿಶ್ವದಲ್ಲಿ ಅತೀ ಹೆಚ್ಚು ಜನಪ್ರಿಯರಾಗಿದ್ದರು. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವೆಬ್‍ಸೈಟ್‍ನ ಪೇಜ್‍ನಲ್ಲಿ ಇವರ ಹೆಸರಿದೆ. ಅಲ್ಲದೇ ಈತನೊಬ್ಬ “ಟ್ರಾವೆಲಿಂಗ್ ಫ್ರೀಕ್ ಸರ್ಕಸ್‍ನ ಸದಸ್ಯ ಎಂದು ತಿಳಿಸಲಾಗಿದೆ. ಸದ್ಯ ಈ ಫೋಟೋಗೆ ಸುಮಾರು 1.20 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, 7,200ಕ್ಕೂ ಹೆಚ್ಚು ರೀಟ್ವೀಟ್ ಬಂದಿದೆ.

suddiyaana