UPI ಬಳಕೆದಾರರಿಗೆ ಗುಡ್​ನ್ಯೂಸ್​ – ಇಂದಿನಿಂದ ಫೋನ್​ ಪೇ, ಗೂಗಲ್​ ಪೇ, ಪೇಟಿಎಂ ಮತ್ತಷ್ಟು ಸ್ಪೀಡ್​​!

UPI ಬಳಕೆದಾರರಿಗೆ ಗುಡ್​ನ್ಯೂಸ್​ – ಇಂದಿನಿಂದ ಫೋನ್​ ಪೇ, ಗೂಗಲ್​ ಪೇ, ಪೇಟಿಎಂ ಮತ್ತಷ್ಟು ಸ್ಪೀಡ್​​!

ದೇಶದಲ್ಲಿ ಕೊಟ್ಯಂತರ ಜನರು ಫೋನ್ ಪೇ, ಗೂಗಲ್‌ ಪೇ ಬಳಸ್ತಿದ್ದಾರೆ. ಇದೀಗ ಯುಪಿಐ ಬಳಕೆದಾರರಿಗೆ ಖುಷಿ ಸುದ್ದಿಯೊಂದಿದೆ. ಗೂಗಲ್‌ ಪೇ, ಫೋನ್‌ ಪೇ ಅಪ್ಲಿಕೇಷನ್‌ ನಲ್ಲಿ ವೇಗವಾಗಿ ಹಣವನ್ನು ಸೆಂಡ್‌ ಮಾಡಬಹುದು. ಜೂನ್‌ 16 ರಿಂದ ಬಳಕೆದಾರರು ತಮ್ಮ UPI ವಹಿವಾಟುಗಳನ್ನು ಸುಮಾರು ಅರ್ಧದಷ್ಟು ಸಮಯದಲ್ಲಿ ಪೂರ್ಣಗೊಳಿಸಬಹುದು.

ಇದನ್ನೂ ಓದಿ: IPL ಆಯ್ತು.. ಈಗ ವಿದರ್ಭ ಟ್ರೋಫಿ – ಚಾನ್ಸ್‌ಗಾಗಿ ಜಿದ್ದಿಗೆ ಬಿದ್ರಾ ಜಿತೇಶ್ ?

ಏಪ್ರಿಲ್ 26, 2025 ರ ಸುತ್ತೋಲೆಯ ಪ್ರಕಾರ, ಎಲ್ಲಾ ಸದಸ್ಯ ಬ್ಯಾಂಕ್‌ಗಳು ಮತ್ತು PhonePe, Google Pay ಮತ್ತು Paytm ನಂತಹ ಪಾವತಿ ಪ್ಲಾಟ್‌ಫಾರ್ಮ್‌ಗಳು ತಮ್ಮ ಸಿಸ್ಟಮ್‌ಗಳನ್ನು ಅಪ್‌ಗ್ರೇಡ್ ಮಾಡುವಂತೆ ಸೂಚಿಸಿತ್ತು. ಹಣ ವರ್ಗಾವಣೆ, ಪರಿಶೀಲನೆಗಳು ಮತ್ತು ರಿವರ್ಸಲ್‌ಗಳು ಸೇರಿದಂತೆ ಹಿಂದೆ ಸುಮಾರು 30 ಸೆಕೆಂಡು ತೆಗೆದುಕೊಳ್ಳುತ್ತು. ಇದೀಗ UPI ವಹಿವಾಟುಗಳನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯವನ್ನು ಕಡಿತಗೊಳಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಸಿಸ್ಟಮ್- ಅಪ್‌ಗ್ರೇಡ್ ಮಾಡಲು ಆರಂಭಿಸಿದೆ.  ವಹಿವಾಟುಗಳನ್ನು ಈಗ 10 ರಿಂದ 15 ಸೆಕೆಂಡುಗಳ ಒಳಗೆ ಪೂರ್ಣ ಮಾಡಬಹುದು.

ಇದರ ಜೊತೆ ಮೊಬೈಲ್ ಸಂಖ್ಯೆಗಳು ಅಥವಾ UPI ಐಡಿಗಳಂತಹ UPI ಹ್ಯಾಂಡಲ್‌ಗಳನ್ನು 10 ಸೆಕೆಂಡ್‌ಗಳಲ್ಲಿ ಪರಿಶೀಲಿಸಬಹುದು. ಇದು ಹೇಗೆಂದರೆ ನೀವು ಯಾವುದಾದರೂ ಅಂಗಡಿ ಹೋಗಿ ಪಾವತಿ ಮಾಡಬೇಕಾದರೆ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡುತ್ತೀರಿ. ಈ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಲು 30 ಸೆಕೆಂಡ್‌ ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಇನ್ನು ಮುಂದೆ 10 ಸೆಕೆಂಡ್‌ನಲ್ಲಿ ಸ್ಕ್ಯಾನ್‌ ಮಾಡಬಹುದು.

ಬಹಳ ಮುಖ್ಯವಾಗಿ ಕೆಲವೊಮ್ಮೆ ನೆಟ್‌ವರ್ಕ್‌, ತಾಂತ್ರಿಕ ಕಾರಣಗಳಿಂದ ಕಳುಹಿಸಿದ ಹಣ ಸೆಂಡ್‌ ಆಗಿರುವುದಿಲ್ಲ. ಈ ಸಂದರ್ಭದಲ್ಲಿ ಸ್ಕ್ರೀನ್‌ನಲ್ಲಿ ʼfailedʼ ಅಂತ ತೋರಿಸುತ್ತಿರುತ್ತದೆ. ಈ ಸಿಸ್ಟಮ್ ಓವರ್‌ಲೋಡ್ ಅನ್ನು ತಪ್ಪಿಸಲು, NPCI ಪ್ರತಿ ಪಾವತಿ ಪೂರೈಕೆದಾರ ಅಥವಾ ಬ್ಯಾಂಕ್‌ಗೆ ವಹಿವಾಟಿನ ಸ್ಥಿತಿಯನ್ನು ಮೂರು ಬಾರಿ ಪರಿಶೀಲಿಸಲು ಅವಕಾಶ ನೀಡಿದೆ. ಅಂದರೆ ವಹಿವಾಟು ನಡೆಸಿದ ಎರಡು ಗಂಟೆಗಳ ಒಳಗೆ ಚೆಕ್‌ ಮಾಡಬೇಕಾಗುತ್ತದೆ. ಒಂದು ವೇಳೆ ಸೆಂಡ್‌ ಆಗದೇ ಇದ್ದರೆ ಮತ್ತೆ ಹಣವನ್ನು ಸೆಂಡ್‌ ಮಾಡಬಹುದು.

ಸುಲಭವಾಗಿ ಹಣವನ್ನು ವರ್ಗಾವಣೆ ಮಾಡಲು NPCI ಅಧಿಕೃತವಾಗಿ UPI ಗಾಗಿ ಪೀಕ್ ಸಮಯವನ್ನು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮತ್ತು ಸಂಜೆ 5 ರಿಂದ ರಾತ್ರಿ 9:30 ರವರೆಗೆ ಎಂದು ವ್ಯಾಖ್ಯಾನಿಸಿದೆ. ಈ ಹೊಸ ಬದಲಾವಣೆಯಿಂದ UPI ವ್ಯವಹಾರಗಳು ಬಹಳ ವೇಗವಾಗಿ ನಡೆಯಲಿದೆ ಎಂದು ಎನ್‌ಪಿಸಿಐ ತಿಳಿಸಿದೆ.

Shwetha M

Leave a Reply

Your email address will not be published. Required fields are marked *