RCB ಆನೆ ಬಲ ಫಿಲ್ ಸಾಲ್ಟ್ ಗೇಲ್‌ನಂತೆ ಕ್ರೀಸ್ ಕಚ್ಚಿ ನಿಲ್ತಾರಾ?
ಓಪನಿಂಗ್‌ನಲ್ಲೇ ಸಾಲ್ಟ್ ಸುನಾಮಿ

ಕ್ರಿಸ್ ಗೇಲ್ ನಂತರ ಹೇಳಿಕೊಳ್ಳುವಂತಹ ಓಪನರ್ ಆರ್ಸಿಬಿಗೆ ಸಿಕ್ಕಿರಲಿಲ್ಲ. ಆದ್ರೀಗ ಈ ಬಾಹುಬಲಿ ಓಪನರ್ ಫಿಲ್ ಸಾಲ್ಟ್, ಕ್ರಿಸ್ ಕಚ್ಚಿ ನಿಂತರೆ ಆರ್ಭಟ ಯಾರಿಂದ್ಲೂ ತಡೆಯೋಕೆ ಆಗಲ್ಲ. ಹೀಗಾಗಿ ಫಿಲ್ ಸಾಲ್ಟ್ ಎಂಟ್ರಿಕೊಟ್ಟಿರೋದು ಆರ್‌ಸಿಬಿ ತಂಡದ ಬ್ಯಾಟಿಂಗ್ಗೆ ಆನೆ ಬಲ ಬಂದಾಂತಾಗಿದೆ. ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಜೊತೆಗೆ ಫಿಲ್ ಸಾಲ್ಟ್ ರನ್ ಸುನಾಮಿ ಹರಿಸ್ತಾರೆ ಅಂತ ಫ್ಯಾನ್ಸ್ ಕಾಯುತ್ತಿದ್ದಾರೆ.
ಕಳೆದ ಆವೃತ್ತಿಯಲ್ಲಿ ತಮ್ಮ ಅದ್ಭುತ ಪ್ರದರ್ಶನದಿಂದ ಬ್ಯಾಟಿಂಗ್ ನಲ್ಲಿ ಕೆಕೆಆರ್ ತಂಡಕ್ಕೆ ನೆರವಾಗಿದ್ದ, ಆರಂಭಿಕ ಆಟಗಾರ ಫಿಲ್ ಸಾಲ್ಟ್ ಈಗ ಆರ್‌ಸಿಬಿ ತಂಡದಲ್ಲಿದ್ದಾರೆ. ಇವರು ಪವರ್ ಪ್ಲೇನಲ್ಲಿ ಬಿಗ್ ಹಿಟ್‌ಗಳನ್ನು ಬಾರಿಸುವಲ್ಲಿ ಹೆಸರುವಾಸಿ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಫಿಲ್ ಸಾಲ್ಟ್ ಆಡಿದ 12 ಪಂದ್ಯಗಳಲ್ಲಿ 435 ರನ್ ಸಿಡಿಸಿದ್ದಾರೆ. ಈ ವೇಳೆ ಇವರ ಸ್ಟ್ರೈಕ್ ರೇಟ್ 182 ರನ್ ಗಳಿಸಿದ್ದಾರೆ. ಈ ವೇಳೆಯಲ್ಲಿ 4 ಅರ್ಧಶತಕಗಳನ್ನು ಬಾರಿಸಿದ್ದಾರೆ. ಒಟ್ಟಾರೆ ಐಪಿಎಲ್‌ನಲ್ಲಿ ಇವರು ಆಡಿದ 21 ಪಂದ್ಯಗಳಲ್ಲಿ 653 ರನ್ ಸಿಡಿಸಿದ್ದಾರೆ. ಇವರು ಕೆಕೆಆರ್ ತಂಡಕ್ಕೂ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ಪರ ಸಹ ಆಡಿದ ಅನುಭವ ಹೊಂದಿದ್ದಾರೆ.
Full GFx: 11.50 ಕೋಟಿ ನೀಡಿ ಆರ್‌ಸಿಬಿ ಖರೀದಿ
ಆರ್‌ಸಿಬಿ ಈ ಬಾರಿ ಸೌದಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ಅತಿ ಹೆಚ್ಚು ಹಣದೊಂದಿಗೆ ಕಣಕ್ಕೆ ಇಳಿದಿತ್ತು. ಈ ವೇಳೆ ಆರ್‌ಸಿಬಿ ಮ್ಯಾನೇಜ್ಮೆಂಟ್ ತಾನು ಹಾಕಿಕೊಂಡಿದ್ದ ಪ್ಲ್ಯಾನ್‌ಗೆ ಅನುಸಾರವಾಗಿ ಆಟಗಾರರನ್ನು ಖರೀದಿ ಮಾಡಿದೆ. ಈ ವೇಳೆ ಮ್ಯಾನೇಜ್ಮೆಂಟ್ ಫಾಫ್ ಡುಪ್ಲೇಸಿಸ್ ಅವರಿಂದ ತೆರವಾದ ಆರಂಭಿಕರ ಸ್ಥಾನಕ್ಕೆ ಹರಾಜು ಅಂಗಳದಲ್ಲಿದ್ದ ಫಿಲ್ ಸಾಲ್ಟ್ ಅವರಿಗೆ ಮಣೆ ಹಾಕಿದೆ. ಇವರಿಗೆ ಆರ್‌ಸಿಬಿ ಬರೋಬ್ಬರಿ 11.50 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಇವರು ಚೆನ್ನಾಗಿ ಆಡಿದ್ರೆ, 11.50 ಕೋಟಿದ್ದಕ್ಕೂ ಸಾರ್ಥಕ ಆಗುತ್ತೆ.
ಇನ್ನು ಸಾಲ್ಟ್ ಕಳೆದ ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಒಂದೇ ತಂಡದ ವಿರುದ್ಧ ಮೂರು ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಫಿಲ್ ಸಾಲ್ಟ್ ಶತಕ ಬಾರಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಇನ್ನು ಸಾಲ್ಟ್ ಇಲ್ಲಿ ತನಕ ಯಾವುದೇ ಟೆಸ್ಟ್ ಪಂದ್ಯಗಳನ್ನ ಆಡಿಲ್ಲ. ಆದ್ರೆ 33 ಏಕದಿನ ಪಂದ್ಯಗಳನ್ನ ಆಡಿದ್ದು, 988 ರನ್‌ಗಳಿಸಿದ್ದಾರೆ. ಇದ್ರಲ್ಲಿ ಒಂದು ಶತಕ ಮತ್ತು 5 ಅರ್ಧ ಶತಕ ಹೊಡೆದಿದ್ದಾರೆ. 43 ಟಿ 20 ಪಂದ್ಯಗಳನ್ನ ಆಡಿದ್ದು,1193 ರನ್‌ಗಳಿಸಿದ್ದಾರೆ. ಇದ್ರಲ್ಲಿ3 ಸೆಂಚುರಿ ಮತ್ತು 5 ಆಫ್ ಸೆಂಚರಿ ಹೊಡೆದಿದ್ದಾರೆ..