ಇನ್ಮುಂದೆ ಸಾಕು ನಾಯಿಗಳಿಗೂ ಟ್ಯಾಕ್ಸ್! – ನಗರಸಭೆಯಿಂದ ಬಂತು ಹೊಸ ರೂಲ್ಸ್…

ಇನ್ಮುಂದೆ ಸಾಕು ನಾಯಿಗಳಿಗೂ ಟ್ಯಾಕ್ಸ್! – ನಗರಸಭೆಯಿಂದ ಬಂತು ಹೊಸ ರೂಲ್ಸ್…

ಸಾಗರ್: ಕರೆಂಟ್ ಬಿಲ್, ನೀರಿನ ಬಿಲ್ ಅನ್ನು ನಗರಸಭೆಗೆ ಕಟ್ಟುತ್ತೇವೆ. ಎಂದಾದರೂ ಸಾಕು ಪ್ರಾಣಿಗಳಿಗೆ ಟ್ಯಾಕ್ಸ್ ಕಟ್ಟುವುದನ್ನು ಕೇಳಿದ್ದೀರಾ? ಮಧ್ಯಪ್ರದೇಶದ ಸಾಗರ್ ನಗರಸಭೆ ನಾಯಿಗಳ ಕಾಟಕ್ಕೆ ಬೇಸತ್ತು, ಹೊಸದೊಂದು ನಿರ್ಧಾರ ಕೈಗೊಂಡಿದೆ.

ಇನ್ಮುಂದೆ ಮನೆಯಲ್ಲಿ ನಾಯಿ ಸಾಕಿದರೆ ನಗರಸಭೆಗೆ ಟ್ಯಾಕ್ಸ್ ಕಟ್ಟಬೇಕು. ನಗರದ ಸ್ವಚ್ಛತೆ ಮತ್ತು ಜನರ ಸುರಕ್ಷತೆಗಾಗಿ ಈ ನಿರ್ಧಾರ ಮಾಡಲಾಗಿದೆ.

ಇದನ್ನೂ ಓದಿ:ಇದೇ ಮೊದಲ ಬಾರಿಗೆ ವಿದ್ಯಾರ್ಥಿನಿಯರಿಗೆ ಋತುಚಕ್ರ ರಜೆ!

ಸಾಗರ್ ನಗರ ಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟವಲ್ಲದೇ, ಸಾಕು ನಾಯಿಗಳ ಹಾವಳಿಯೂ ಹೆಚ್ಚಾಗಿದೆ. ಇದರಿಂದ ಬೇಸತ್ತ ಸಾಗರ್ ನ ನಿವಾಸಿಗಳು ನಗರಸಭೆಗೆ ದೂರು ನೀಡಿದ್ದಾರೆ. ಬೀದಿ ನಾಯಿಗಳು ಮಾತ್ರವಲ್ಲದೆ, ಸಾಕು ನಾಯಿಗಳಿಂದಲೂ ನಗರದ ಸ್ವಚ್ಛತೆಗೆ ಹಾನಿಯುಂಟಾಗುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ನಗರ ಸಭೆ ಇಂತಹ  ತೀರ್ಮಾನ ಮಾಡಿದೆ.

ಈ ನಿಯಮವನ್ನು 40 ಮಂದಿ ಸದಸ್ಯರು ಅವಿರೋಧವಾಗಿ ಬೆಂಬಲಿಸಿದ್ದಾರೆ. ಈ ಕಾನೂನು ರೂಪುಗೊಂಡ ನಂತರ, ಈ ವರ್ಷದ ಏಪ್ರಿಲ್ ನಿಂದಲೇ ಜಾರಿಗೆ ತರುವ ಸಾಧ್ಯತೆ ಇದೆ.

ಸಾಕು ನಾಯಿಗಳಿಗೆ ಟ್ಯಾಕ್ ವಿಧಿಸಲು, ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನಾಯಿಗಳ ನೋಂದಣಿ ಕಾರ್ಯ ನಡೆಯಲಿದೆ.  ಅಲ್ಲದೆ ಮಾಲಕರಿಂದ ತೆರಿಗೆ ಸಂಗ್ರಹ ಮಾಡಲಾಗುತ್ತದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

suddiyaana