ಮನೆಯಲ್ಲಿ ಇಟ್ಟಿದ್ದ ಮದ್ಯದ ಬಾಟಲ್‌ ಖಾಲಿ ಮಾಡಿದ ಶ್ವಾನ! – ನಾಯಿಯ ಪಾಡು ಏನಾಯ್ತು ಗೊತ್ತಾ?

ಮನೆಯಲ್ಲಿ ಇಟ್ಟಿದ್ದ ಮದ್ಯದ ಬಾಟಲ್‌ ಖಾಲಿ ಮಾಡಿದ ಶ್ವಾನ! – ನಾಯಿಯ ಪಾಡು ಏನಾಯ್ತು ಗೊತ್ತಾ?

ಸಾಕುಪ್ರಾಣಿಗಳು ಮಾಡುವ ತರಲೆ, ತುಂಟಾಟಗಳು ಕೆಲವೊಮ್ಮೆ ನಗು ತರಿಸಿದರೆ, ಇನ್ನೂ ಕೆಲವೊಮ್ಮೆ ಮಾಲೀಕರನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡುತ್ತವೆ. ಮನೆಯಲ್ಲಿ ಏನಾದರು ಸಿಕ್ಕರೆ ಅದನ್ನು ಛಿತ್ರ ಮಾಡಿ ಹಾಕುತ್ತವೆ. ಇನ್ನೂ ಆಹಾರ ವಸ್ತುಗಳನ್ನು ಸಿಕ್ಕರೆ ಕೇಳಬೇಕೆ? ಒಂದೇ ಕ್ಷಣದಲ್ಲಿ ಅದನ್ನು ತಿಂದು ಹಾಕುತ್ತವೆ. ಇಲ್ಲೊಂದು ನಾಯಿ ಮನೆಯಲ್ಲಿ ಇಟ್ಟಿದ್ದ ಮದ್ಯದ ಬಾಟಲ್‌ ಖಾಲಿ ಮಾಡಿದ್ದು, ಇದೀಗ ನಶೆಯಲ್ಲಿ ತೂರಾಡುತ್ತಿದೆ. ಇದರ ವಿಡಿಯೋ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ಸೀರೆ ಉಟ್ಟು ಕಬಡ್ಡಿ ಆಡಿದ ಖ್ಯಾತ ನಟಿ –  ರೋಜಾ ಟ್ಯಾಲೆಂಟ್‌ ಫುಲ್‌ ವೈರಲ್‌!

ಈ ವಿಡಿಯೋ ಅಮೆರಿಕದ ನ್ಯೂಜೆರ್ಸಿಯದ್ದಾಗಿದೆ. ಹೋಮ್ ಹೋಸ್ಟ್ ಮೇರಿ ಅವರು ಕೆಲಸದ ಮೇಲೆ ಮನೆಯಿಂದ ಹೊರಗೆ ಹೋದಾಗ ಅವರ ಸಾಕು ನಾಯಿ ಜಾಕ್, ಸಂಪೂರ್ಣ ವೋಡ್ಕಾ ಬಾಟಲಿಯನ್ನು ಕುಡಿದುಬಿಟ್ಟಿದೆ. ಇದಾದ ಬಳಿಕ ನಾಯಿಯೂ ಮನೆಯೊಳಗೆ ತೂರಾಡುತ್ತಾ ಓಡಾಡಿದೆ. ಮದ್ಯ ಕುಡಿದ ನಾಯಿಯ ಸ್ಥಿತಿ ಈಗ ಭಾರಿ ವೈರಲ್ ಆಗುತ್ತಿದೆ.

ಮೇರಿ ಮನೆಗೆ ಹಿಂದಿರುಗಿದ ತಕ್ಷಣ, ಜ್ಯಾಕ್ ಮದ್ಯ ಕುಡಿದಂತೆ ನನಗೆ ಭಾಸವಾಯಿತು. ಅದೇ ಸಮಯದಲ್ಲಿ ಕೌಂಟರ್ ಮೇಲೆ ವೋಡ್ಕಾ ಬಾಟಲಿ ಖಾಲಿಯಾಗಿತ್ತು. ಆಗ ಅಲ್ಲಿಯೇ ಖಾಲಿ ಬಾಟಲಿ ನೆಲದ ಮೇಲೆ ಉರುಳಿ ಬಿದ್ದಿರುವುದು ಕಂಡಿತು. ಜೊತೆಗೆ ನಾಯಿ ಉರುಳಾಡುತ್ತಿರುವುದು, ನಾನಾ ರೀತಿಯ ಕಸರತ್ತು ನಡೆಸುತ್ತಿರುವುದು ಕೊನೆಗೆ ಅದರ ಪರಿಸ್ಥಿತಿ ವಿಷಮಗೊಂಡಾಗ ಅದನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಮೇರಿ ಹೇಳಿದ್ದಾರೆ.

ಪ್ರಾಣಿಗಳು ಮದ್ಯ ಸೇವಿಸಿದರೆ ಅದರ ಆರೋಗ್ಯಕ್ಕೆ ಏನಾಗುತ್ತೆ?

ಇದೇ ವಿಚಾರವಾಗಿ ಮಾತನಾಡಿರುವ ರಾಷ್ಟ್ರೀಯ ಪ್ರಾಣಿ ಕೇಂದ್ರದ ಮುಖ್ಯಸ್ಥರು, ನಾಯಿ ಮದ್ಯ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ, ರಕ್ತದೊತ್ತಡ ಹಾಗೂ ದೇಹದ ಉಷ್ಣತೆಯಲ್ಲಿ ಅಪಾಯಕಾರಿ ಕುಸಿತ ಉಂಟಾಗಬಹುದು ಎಂದು ತಿಳಿಸಿರುವುದಾಗಿ ನ್ಯೂಸ್ ವೀಕ್ ಹೇಳಿದೆ. ಅದೇ ಸಮಯದಲ್ಲಿ, ತೀವ್ರವಾಗಿ ಅಮಲೇರಿದ ಪ್ರಾಣಿಗಳು ಉಸಿರಾಟದ ವೈಫಲ್ಯ ಮತ್ತು ಮೂರ್ಛೆಯಿಂದ ಬಳಲುತ್ತವೆ ಎಂದು ಎಚ್ಚರಿಸಿದ್ದಾರೆ.

Shwetha M