ಫುಡ್ ಡೆಲಿವರಿ ಬಾಯ್‌ ಬ್ಯಾಗ್‌ನಲ್ಲಿ 800 ವರ್ಷಗಳ ಹಳೇ ‘ಮಮ್ಮಿ’..!

ಫುಡ್ ಡೆಲಿವರಿ ಬಾಯ್‌ ಬ್ಯಾಗ್‌ನಲ್ಲಿ 800 ವರ್ಷಗಳ ಹಳೇ ‘ಮಮ್ಮಿ’..!

ಪೆರುವಿನಲ್ಲಿ ಫುಡ್ ಡೆಲಿವರಿ ಬಾಯ್​ನ ಬ್ಯಾಗ್​ನಲ್ಲಿ 800 ವರ್ಷಗಳ ಹಳೆಯದಾದ ಮಮ್ಮಿ ಪತ್ತೆಯಾಗಿದೆ. ಸುಮಾರು 30 ವರ್ಷಗಳಿಂದ ಈ ಮಮ್ಮಿ ತಮ್ಮ ಮನೆಯಲ್ಲಿಯೇ ಇದೆ ಎಂದು ಆತ ಹೇಳಿದ್ದಾನೆ. ಈ ಮೊದಲು ಅದೇ ಬ್ಯಾಗ್​ ಅನ್ನು ಜನರಿಗೆ ಆಹಾರ ವಿತರಣೆ ಮಾಡಲು ಬಳಸುತ್ತಿದ್ದ. ಆ ಡೆಲಿವರಿ ಬಾಯ್ ಮಮ್ಮಿಯನ್ನು ತನ್ನ ಗೆಳತಿ ಎಂದು ಕರೆದಿದ್ದಾನೆ. ಈ ಘಟನೆ ಸಂಬಂಧ 26 ವರ್ಷದ ಜೂಲಿಯೋ ಸೀಸರ್​ ಬರ್ಮೆಜೊ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಮ್ಮಿ ಸದಾ ನನ್ನ ಕೋಣೆಯಲ್ಲಿ ಇರುತ್ತದೆ. ಅವಳು ನನ್ನೊಂದಿಗೆ ಸದಾ ಇರುತ್ತಾಳೆ, ಅವಳೊಂದಿಗೆ ನಾನು ಮಲಗುತ್ತೇನೆ ಎಂದು ಜೂಲಿಯೋ ಪೊಲೀಸರ ಬಳಿ ಹೇಳಿದ್ದಾನೆೆ.

ಇದನ್ನೂ ಓದಿ:  ವಿದೇಶಿ ಸಿನಿಮಾ ನೋಡಿದ್ರೆ ಹುಷಾರ್ – ಮಕ್ಕಳಿಗೆ 5 ವರ್ಷ ಜೈಲು.. ಹೆತ್ತವರಿಗೆ 6 ತಿಂಗಳು ಶಿಕ್ಷೆ..!

ಜೂಲಿಯೋ ಸೀಸರ್ ಬರ್ಮೆಜೋ, ಮಮ್ಮಿಯನ್ನು ಸ್ನೇಹಿತರಿಗೆ ತೋರಿಸಲು ಹೋಗುತ್ತಿದ್ದ. ಆ ವೇಳೆ ಆತನ ಹಿಂದಿರುವ ಬೃಹದಾಕಾರದ ಬ್ಯಾಗ್​ ನೋಡಿ ಪೊಲೀಸರಿಗೆ ಅನುಮಾನ ಬಂದಿದೆ. ಪೊಲೀಸರು ಬ್ಯಾಗ್‌ ನ್ನು ಪರಿಶೀಲನೆ ನಡೆಸಿದಾಗ ಅಸ್ತಿಪಂಜರ ಕಂಡುಬಂದಿದೆ. ಆ ಅಸ್ಥಿಪಂಜರಕ್ಕೆ 45 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಪೆರುವಿನ ಸಂಸ್ಕೃತಿ ಸಚಿವಾಲಯವು, ಈ ಅವಶೇಷವನ್ನು ವಶಕ್ಕೆ ಪಡೆದಿದೆ.

ಹಲವಾರು ವರ್ಷಗಳ ಕಾಲ ಕ್ಷಯಿಸದಂತೆ ಸಂರಕ್ಷಿಸಿಡಲ್ಪಟ್ಟ ಮನುಷ್ಯ ಅಥವಾ ಪ್ರಾಣಿಯ ದೇಹಗಳನ್ನು ಮಮ್ಮಿ ಎಂದು ಕರೆಯಲಾಗುತ್ತದೆ. ಯಾವುದೇ ಮನುಷ್ಯ ಅಥವಾ ಪ್ರಾಣಿಯು ಸಾವನ್ನಪ್ಪಿದ ನಂತರ ಅದರ ದೇಹವು ಕೊಳೆಯಲಾರಂಭಿಸುತ್ತದೆ. ಆದರೆ, ಮೃತ ದೇಹಗಳನ್ನು ಈ ರೀತಿಯಾಗಿ ನಶಿಸಿಹೋಗಲು ಬಿಡದೆ, ಹಲವು ವರ್ಷಗಳ ಕಾಲ ಅವು ಕ್ಷಯಿಸಿ ಹೋಗದಂತೆ ಸಂರಕ್ಷಿಸಿಡುವ ವಿಶಿಷ್ಟ ಪದ್ಧತಿಯನ್ನು ಪ್ರಾಚೀನ ಈಜಿಫ್ಟ್ ಹಾಗೂ ಇತರ ಕೆಲವು ದೇಶಗಳ ಜನರು ರೂಢಿಸಿ ಕೊಂಡಿದ್ದರು. ಅದಕ್ಕೆ ಮಮ್ಮಿ ಎಂದು ಕರೆಯಲಾಗುತ್ತದೆ.

 

suddiyaana