ಕಡಿಮೆ ಹಣಕ್ಕೆ ಹೆಚ್ಚ ಲಾಭ ಬೇಕಾ – ಪೋಸ್ಟ್ ಆಫೀಸ್‌ನ ಈ ಯೋಜನೆ ಬೆಸ್ಟ್

ಸಾಕಷ್ಟು ಜನ ಹೊಡಿಕೆ ಮಾಡುವುದ್ದಕ್ಕೆ ಇಷ್ಟ ಪಡ್ತಾರೆ. ಆದ್ರೆ ರಿಸ್ತ್ ತೆಗೆದುಕೊಳ್ಳವುದ್ದಕ್ಕೆ ಹೋಗಲ್ಲ.. ಹೀಗಾಗಿ ಸಾಕಷ್ಟು ಆಯ್ಕೆ ಮಾಡಿಕೊಳ್ಳುವುದು ಅಂಚೆ ಕಚೇರಿ. ಪೋಸ್ಟ್ ಆಫೀಸ್‌ನಲ್ಲಿ ಹೂಡಿಕೆ ಮಾಡುವುದರಿಂದ ಹಣಕ್ಕೆ ನೂರಕ್ಕೆ ನೂರು ಆರ್ಥಿಕ ಭದ್ರತೆ ಸಿಗುವುದರ ಜೊತೆಗೆ ಯಾವುದೇ ರಿಸ್ಕ್ ಇಲ್ಲದೆ ಸ್ಥಿರ ಆದಾಯದ ಬೆನಿಫಿಟ್ ಕೂಡ ಸಿಗುತ್ತದೆ.
ಸದ್ಯಕ್ಕೆ ಪೋಸ್ಟ್ ಆಫೀಸ್‌ನ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದಾದ ರಾಷ್ಟ್ರೀಯ ಉಳಿತಾಯ ಮರುಕಳಿಸುವ ಠೇವಣಿ ಅಥವಾ ಆರ್‌ಡಿಖಾತೆಯು ಗ್ರಾಹಕರಿಗೆ ಭರ್ಜರಿ ಶೇಕಡಾ 6.7 ರಷ್ಟು ಬಡ್ಡಿದರವನ್ನು ನೀಡುತ್ತಿದೆ. ಕೇವಲ ₹100 ರಷ್ಟು ಸಣ್ಣ ಮೊತ್ತದಿಂದಲೇ ಹೂಡಿಕೆ ಆರಂಭಿಸಬಹುದಾದ ಈ ಸೂಪರ್ ಪ್ಲಾನ್‌ನಲ್ಲಿ ಪ್ರತಿ ತಿಂಗಳು ನಿಗದಿತ ಹಣ ಉಳಿಸಿದರೆ 10 ವರ್ಷಗಳ ನಂತರ ಕೈ ತುಂಬಾ ಹಣ ಸಿಗುತ್ತೆ.
ಇದನ್ನೂ ಓದಿ: ನಿಮಗೆ ಹಣದ ಸಮಸ್ಯೆ ಇದ್ಯಾ, ಪರಿಹಾರ ಬೇಕಾ? – ಶುಕ್ರವಾರ ಈ ಬಣ್ಣದ ಬಟ್ಟೆ ಧರಿಸಿ ಲಕ್ಷ್ಮಿ ದೇವಿಯನ್ನ ಪೂಜೆಸಿ
ನೀವು ಈ ಪೋಸ್ಟ್ ಆಫೀಸ್ ಆರ್‌ಡಿ ಯೋಜನೆಯಲ್ಲಿ ಮುಂದಿನ 10 ವರ್ಷಗಳ ಅವಧಿಗೆ ಪ್ರತಿ ತಿಂಗಳು ₹3,000 ಹಣವನ್ನು ಹೂಡಿಕೆ ಮಾಡುತ್ತಾ ಹೋದರೆ, ನಿಮ್ಮ ಕಡೆಯಿಂದ ಜಮೆಯಾಗುವ ಒಟ್ಟು ಅಸಲು ಮೊತ್ತ ₹3,60,000 ಆಗಿರುತ್ತದೆ. ಇದಕ್ಕೆ ಸದ್ಯ ಜಾರಿಯಲ್ಲಿರುವ ಶೇ. 6.7 ರಷ್ಟು ಬಡ್ಡಿದರವನ್ನು ಲೆಕ್ಕ ಹಾಕಿದರೆ, ಕೇವಲ ಬಡ್ಡಿಯಿಂದಲೇ ನಿಮಗೆ ಬರೋಬ್ಬರಿ ₹1,52,565 ರಷ್ಟು ನಿವ್ವಳ ಲಾಭ ಸಿಗುತ್ತದೆ. ಅಂದರೆ 10 ವರ್ಷಗಳ ಅವಧಿ ಮುಗಿದ ನಂತರ ನಿಮ್ಮ ಕೈಗೆ ಸಿಗುವ ಒಟ್ಟು ಮೆಚ್ಯೂರಿಟಿ ಮೊತ್ತ ಬರೋಬ್ಬರಿ ₹5,12,565 ಆಗಿರುತ್ತದೆ!
ಮೂಲತಃ ಪೋಸ್ಟ್ ಆಫೀಸ್ ಆರ್‌ಡಿ ಖಾತೆಯ ಅಧಿಕೃತ ಅವಧಿ 5 ವರ್ಷಗಳು ಅಂದರೆ ಒಟ್ಟು 60 ಮಾಸಿಕ ಕಂತುಗಳಾಗಿರುತ್ತವೆ . ಈ ಮೊದಲ 5 ವರ್ಷಗಳ ಅವಧಿ ಮುಗಿದ ನಂತರ, ಖಾತೆದಾರರು ಬಯಸಿದರೆ ಮತ್ತೊಂದು 5 ವರ್ಷಗಳ ಕಾಲ ಈ ಯೋಜನೆಯನ್ನು ಆರಾಮವಾಗಿ ವಿಸ್ತರಿಸಬಹುದು. ಒಂದು ವೇಳೆ ಖಾತೆಯನ್ನು ಅಧಿಕೃತವಾಗಿ ವಿಸ್ತರಿಸದಿದ್ದರೂ ಸಹ, ಯಾವುದೇ ಹೊಸ ಕಂತುಗಳನ್ನು ಪಾವತಿಸದೆಯೇ ಮುಕ್ತಾಯದ ದಿನಾಂಕದಿಂದ ಗರಿಷ್ಠ ಐದು ವರ್ಷಗಳವರೆಗೆ ಆ ಹಣವನ್ನು ಹಾಗೇ ಮುಂದುವರಿಸಿಕೊಂಡು ಹೋಗುವ ಅವಕಾಶವಿದೆ.

ನೋಡಿರಿ

