ಕುಳಿತಲ್ಲೇ ಕೆಲಸ.. ಕೈತುಂಬಾ ಸಂಬಳ! – ಎಲ್ಲಿದೆ‌ ಜಾಬ್? ಷರತ್ತುಗಳೇನು?

ಕುಳಿತಲ್ಲೇ ಕೆಲಸ.. ಕೈತುಂಬಾ ಸಂಬಳ! – ಎಲ್ಲಿದೆ‌ ಜಾಬ್? ಷರತ್ತುಗಳೇನು?

ನಮಲ್ಲಿ‌ ಸೋಂಬೇರಿಗಳಿಗೇನು ಕಡಿಮೆ ಇಲ್ಲ. ಅನೇಕರು  ದಿನವಿಡೀ ಮನೇಲಿ ಬಿದ್ಕೊಂಡೇ ಇರ್ತಾರೆ.. ದೇವ್ರೇ ಕುಳಿತಲ್ಲೇ ದುಡ್ಡು.. ಫುಡ್ಡು ಸಿಗ್ಲಿ ಅಂತಾ‌ ಬೇಡ್ಕೋಳ್ತಿರ್ತಾರೆ.. ಅಂತವರಿಗಾಗಿಯೇ ಒಂದು ಜಾಬ್ ಆಫರ್ ಇದೆ.. ಈ ಕೆಲ್ಸಕ್ಕೆ ಸೇರಿದ್ರೆ ಮೈ ಬಗ್ಸಿ ದುಡಿ ಬೇಕಿಲ್ಲ. ಒಂದ್ಕಡೆ ಕೂತು ಕೊಟ್ಟಿದ್ದನ್ನೆಲ್ಲಾ ತಿಂತಾ ಇದ್ರೆ‌ ಸಾಕು.. ಈ ಕೆಲ್ಸ ಮಾಡಿದ್ರೆ ತಿಂಗಳಿಗೆ ಬರೋಬ್ಬರಿ 70  ಸಾವಿರ ರೂಪಾರಿ ಸ್ಯಾಲರಿ ಕೊಡ್ತಾರೆ.. ಅಷ್ಟಕ್ಕೂ ಆ ಜಾಬ್ ಏನು?‌ ಕೆಲ್ಸ ಕೊಡ್ತಿರೋರು ಯಾರು ಅನ್ನೋ ಮಾಹಿತಿ ಇಲ್ಲಿದೆ..

ಕಷ್ಟಪಟ್ಟು ಕೆಲಸ ಮಾಡೋದು ಅನೇಕರಿಗೆ ಇಷ್ಟವಾಗೋದಿಲ್ಲ. ಆರಾಮವಾಗಿ ಕುಳಿತು ಕೆಲಸ ಮಾಡ್ಬೇಕು.. ಅಂತವರಿಗಾಗಿಯೇ ಒಂದು ಸುವರ್ಣಾವಕಾಶವಿದೆ. ಚೀನಾದ ಹೆಬೈ ಪ್ರಾಂತ್ಯದಲ್ಲಿ ಒಂದು ಜಾಬ್ ಆಫರ್ ಇದೆ. ಹೆಬೈ (Hebei) ಪ್ರಾಂತ್ಯದ ವುಝಿಶನ್ ಸಿನಿಕ್ ಏರಿಯಾ ಪ್ರವಾಸಿ ತಾಣವಾಗಿದೆ. ಅಲ್ಲಿ ಬಾಜ್ ಆಫರ್ ಒಂದಿದೆ. ವುಝಿಶನ್ ಸಿನಿಕ್ ಏರಿಯಾ ಗುಹೆಯೊಳಗೆ ಕೆಲಸ ಮಾಡಬೇಕು. ಅಲ್ಲಿ ಮಂಕಿ ಕಿಂಗ್ ಆಗಿ ಉದ್ಯೋಗ ಮಾಡಬೇಕಾಗುತ್ತದೆ. ಗುಹೆಯಲ್ಲೇ ಇರಬೇಕಾಗುತ್ತದೆ.  ಶಿಫ್ಟ್ ಸಮಯದಲ್ಲಿ ಮಂಗದಂತಹ ವೇಷಭೂಷಣವನ್ನು ಧರಿಸಬೇಕು.

ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ – ʻಜೈ ಶ್ರೀರಾಮ್‌, ಜೈ ಶ್ರೀರಾಮ್‌ ರಾಜಾರಾಮ್‌ʼ ಹಾಡಿಗೆ ನೂರಾರು ಟೆಸ್ಲಾ ಕಾರು ಡಾನ್ಸ್!

ಗುಹೆ ಸ್ವಲ್ಪ ತೆರೆದಿರುತ್ತದೆ. ಅಲ್ಲಿ ಪ್ರವಾಸಿಗರು ನೀಡುವ ಬಾಳೆಹಣ್ಣು, ನೂಡಲ್ಸ್ ಮತ್ತು ಬಿಸ್ಕತ್ತುಗಳನ್ನು ತಿನ್ನಬೇಕಾಗುತ್ತದೆ.  ಈ ಉದ್ಯೋಗ ಪಡೆಯಲು ಯಾವುದೇ ಪದವಿ-ಡಿಪ್ಲೊಮಾ ಹೊಂದಿರಬೇಕು ಎನ್ನುವ ಅನಿವಾರ್ಯತೆ ಇಲ್ಲ. ಮಂಗದಂತೆ ವರ್ತಿಸುವ ಕಲೆ, ನಟನೆ ಗೊತ್ತಿದ್ರೆ ಸಾಕು.. ಅಲ್ಲಿಗೆ ಬರುವ ಪ್ರವಾಸಿಗರನ್ನು ರಂಜಿಸೋದು ಕೆಲಸವಾಗಿರುತ್ತದೆ. ಹಾಗಾಗಿ ಹೇಗೆ ಪ್ರವಾಸಿಗರ ಮನಸ್ಸು ಕದಿಯಬೇಕು ಎನ್ನುವ  ಜ್ಞಾನ ಇರಬೇಕು.

ಗುಹೆಯ ವ್ಯವಸ್ಥಾಪಕರು, ಕೆಲಸದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಎರಡು ಶಿಫ್ಟ್ ನಲ್ಲಿ ಕೆಲಸ ಇರುತ್ತದೆ. ಕೆಲಸದ ಸಮಯದಲ್ಲಿ ಮಂಕಿ ವೇಷಭೂಷಣ ಧರಿಸೋದು ಅನಿವಾರ್ಯ.  ಚಳಿ ಆಗದಿರಲಿ ಎನ್ನುವ ಕಾರಣಕ್ಕೆ ಅಲ್ಲಿ ಹೀಟರ್ ಕೂಡ ಅಳವಡಿಸಲಾಗಿದೆ.  ಈಗಾಗಲೇ ಮಂಕಿ ಕಿಂಗ್ ಆಗಿ ಕೆಲಸ ಮಾಡುವ ಇಬ್ಬರ ನೇಮಕ ಆಗಿದೆ. ಇನ್ನೊಬ್ಬರ ಅಗತ್ಯ ಇದೆ ಅಂತಾ ಹೇಳಿದ್ದಾರೆ.

ಈ ಗುಹೆಯಲ್ಲಿ ಮಂಗದ ವೇಷಭೂಷಣ ಹಾಕಿಕೊಂಡು, ಪ್ರವಾಸಿಗರನ್ನು ರಂಜಿಸಿದ್ರೆ  ತಿಂಗಳಿಗೆ 842 ಡಾಲರ್ ಅಂದರೆ ಸುಮಾರು 70 ಸಾವಿರ ರೂಪಾಯಿ ವೇತನ ಸಿಗುತ್ತದೆ. ಕೆಲಸಕ್ಕೆ ನೇಮಕವಾಗುವ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ.  ಅಲ್ಲಿರುವ ಆಹಾರದಲ್ಲಿ ಯಾವುದನ್ನು ಬೇಕಾದ್ರೂ ತಿನ್ನಬಹುದು. ಪ್ರವಾಸಿಗರು ನೀಡಿದ ಎಲ್ಲ ಬಾಳೆ ಹಣ್ಣು, ನೂಡಲ್ಸ್ ಗಳನ್ನು ತಿನ್ನಲೇಬೇಕು ಎನ್ನುವ ನಿಯಮವೂ ಇಲ್ಲ. ಅದನ್ನು ಅಗತ್ಯವೆನ್ನಿಸಿದ ಸಮಯದಲ್ಲಿ ತಿನ್ನಬಹುದು ಇಲ್ಲವೆ ಸಿಬ್ಬಂದಿಗೆ ಹಂಚಬಹುದು.

ಇನ್ನು ಇಲ್ಲಿ ಮಂಕಿ‌ಕಿಂಗ್ ಜಾಬ್ ಆಫರ್ ಯಾಕೆ ಅಂತಾ ಪ್ರಶ್ನೆ ಉದ್ಬವವಾಗಬಹುದು. ಅದಕ್ಕೂ ಒಂದು ಕಾರಣ‌ ಇದೆ. ಚೀನಾ ಪುರಾಣದಲ್ಲಿ ಮಂಕಿ ಕಿಂಗ್ ಬರುತ್ತದೆ. ಸುನ್ ವುಕಾಂಗ್ ಎಂಬಲ್ಲಿ ಮಂಕಿ ಕಿಂಗ್ ಕಥೆ ಕೇಳಬಹುದು. ಮಂಕಿ ಕಿಂಗ್ ಹುಟ್ಟು ಕಲ್ಲಿನಿಂದ ಆಗಿರುತ್ತದೆ.  ತೈ-ಚಿ  ಸಮರ ಕಲಾವಿದರಿಂದ ಕೆಲವು ಅಲೌಕಿಕ ಶಕ್ತಿಯನ್ನು ಪಡೆದುಕೊಳ್ಳುತ್ತಾರೆ. ಚಿನ್ನದ ಮಂತ್ರದಂಡ ಹಿಡಿದು ಮೋಡದ ಮೇಲೆ ಓಡಾಡುತ್ತಾರೆ. ಯೋಧರಂತೆ ಹೋರಾಡುತ್ತಾರೆ.  ಚೀನಾದಲ್ಲಿ ಮಂಕಿ ಕಿಂಗ್ ಹೆಚ್ಚು ಪ್ರಸಿದ್ಧಿ ಪಡೆದ ಪಾತ್ರವಾಗಿದೆ. ಸಿನಿಮಾ, ಧಾರಾವಾಹಿ ಮಕ್ಕಳ ಕಾರ್ಟೂನ್ ಗಳಲ್ಲಿ ಇದನ್ನು ನೋಡಬಹುದು. ಇದೇ ಥೀಮ್‌‌ ಇಟ್ಕೋಂಡ್ ಇಲ್ಲಿ‌ ಜಾಬ್ ಆಫರ್ ನೀಡಲಾಗಿದೆ.

Shwetha M