ಜನರ ಬೆಂಬಲವೇ ನನ್ನ ಮುಂದಿನ ಹೋರಾಟಕ್ಕೆ ಶಕ್ತಿ – ಹೆಚ್.ಡಿ ಕುಮಾರಸ್ವಾಮಿ
ಕೋಲಾರ : ಕೋಲಾರದಲ್ಲಿ ಪಂಚರತ್ನ ರಥಯಾತ್ರೆಯನ್ನು ಆರಂಭಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಶುಕ್ರವಾರ ರಾತ್ರಿ ಮಿಟ್ಟೂರಿನಲ್ಲಿ ಗ್ರಾಮವಾಸ್ತವ್ಯ ಮಾಡಿದರು. ಪಂಚರತ್ನ ರಥಯಾತ್ರೆಗೆ ಮೊದಲ ದಿನ ಕೋಲಾರದಲ್ಲಿ ಅಭೂತಪೂರ್ವ ಬೆಂಬಲ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಕುಮಾರಸ್ವಾಮಿ, ಜನರ ಬೆಂಬಲವೇ ನನ್ನ ಮುಂದಿನ ಹೋರಾಟಕ್ಕೆ ಶಕ್ತಿ ತುಂಬಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: 8,450 ಕೋಟಿ ವೆಚ್ಚದ ಜಲವಿದ್ಯುತ್ ಯೋಜನೆ ಸಮರ್ಪಿಸಿದ ಪ್ರಧಾನಿ ಮೋದಿ
ಮಿಟ್ಟೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ ಶನಿವಾರ 35 ಹಳ್ಳಿಗಳಿಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಹೆಚ್.ಡಿ ಕೆ, ಶಿಕ್ಷಣ, ಆರೋಗ್ಯ, ಕೃಷಿಯಲ್ಲಿ ಇರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಕೆಲಸವಾಗಬೇಕು. ಯಾವ ಸರ್ಕಾರ ಕೂಡ ರೈತನಿಗೆ ಶಾಶ್ವತ ಪರಿಹಾರ ನೀಡಿಲ್ಲ. ಯುವಕರಿಗೆ ಉದ್ಯೋಗ ಇಲ್ಲದಿರುವುದರಿಂದ ಮದುವೆಗೆ ಹೆಣ್ಣುಮಕ್ಕಳನ್ನು ಕೊಡ್ತಿಲ್ಲ. ರೈತ ಕುಟುಂಬದಲ್ಲಿ ಜನಿಸುವ ಗಂಡು ಮಕ್ಕಳಿಗೆ ವಧು ಸಿಗುತ್ತಿಲ್ಲ ಎಂಬ ವರದಿ ನೋಡಿದೆ. ಈ ದಿನಗಳನ್ನು ನೋಡುತ್ತಿದ್ರೆ, ರೈತರ ಅಭಿವೃದ್ಧಿಗೆ ಯೋಜನೆಗಳನ್ನು ಜಾರಿಗೆ ತರಬೇಕು ಎಂದಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ವೋಟರ್ ಲಿಸ್ಟ್ ಆಕ್ರಮ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಈ ವೋಟರ್ ಐಡಿ ಅಕ್ರಮವೋ, ಸಕ್ರಮವೋ ಅದು ಬೇಕಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುವುದು ಈ ಸರ್ಕಾರದ ಅವಧಿಯಲ್ಲಿ ಕಾಣುವುದಿಲ್ಲ. ವೈಫಲ್ಯದ ಬಗ್ಗೆ ಚರ್ಚೆ ಮಾಡುವುದಿಲ್ಲ. ಈ ವೋಟರ್ ಐಡಿಯಿಂದ ಮಹಾನ್ ಆಪತ್ತು ಬರುತ್ತೆ ಎಂದು ನನಗೆ ಅನ್ನಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.