ವಜ್ರಕ್ಕಾಗಿ ರಸ್ತೆಯಲ್ಲೆಲ್ಲಾ ಹುಡುಕಾಡಿದ ಜನ ! – ಡೈಮಂಡ್ ಸಿಕ್ಕ ಖುಷಿಯಲ್ಲಿದ್ದವರಿಗೆ ಕಾದಿತ್ತು ಶಾಕ್!

ದಾರಿಯಲ್ಲಿ ಹೋಗುವಾಗ ಏಕಾಏಕಿ ವಜ್ರದ ಚೀಲವೊಂದು ಸಿಕ್ಕರೆ ಹೇಗಿರುತ್ತೆ? ರಾಥ್ರಿ ಬೆಳಗಾಗುವುದರೊಳಗೆ ನಾವು ಶ್ರೀಮಂತರಾಗಬಹುದು. ಇಲ್ಲೊಂದು ಕಡೆ ಜನರ ಗುಂಪೊಂದು ವಜ್ರಕ್ಕಾಗಿ ರಸ್ತೆಯಲ್ಲೆಲ್ಲ ಹುಡುಕಾಡಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಏನಿದು ಘಟನೆ?
ಗುಜರಾತಿನ ಸೂರತ್ ಜಿಲ್ಲೆಯ ವಾರಚ್ಚ ಏರಿಯಾ ವಜ್ರಗಳ ಖರೀದಿ ಮತ್ತು ಮಾರಾಟಕ್ಕೆ ಈ ಏರಿಯಾ ತುಂಬಾ ಪ್ರಸಿದ್ಧಿ ಪಡೆದಿದೆ. ಇದನ್ನು ವಜ್ರಗಳ ಮಿನಿ ಬಜಾರ್ ಎಂದೇ ಸ್ಥಳೀಯವಾಗಿ ಕರೆಯಲಾಗುತ್ತದೆ. ಈ ಏರಿಯಾದಲ್ಲಿ ವ್ಯಾಪಾರಿಯೊಬ್ಬರು ಆಕಸ್ಮಿಕವಾಗಿ ವಜ್ರದ ಪ್ಯಾಕೆಟ್ ಅನ್ನು ರಸ್ತೆಯಲ್ಲಿ ಬೀಳಿಸಿ ಹೋಗಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಈ ಹಿನ್ನೆಲೆ ಜನರ ಗುಂಪೊಂದು ವಜ್ರಕ್ಕಾಗಿ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: ವಿದೇಶದಲ್ಲಿರುವ ಖಲಿಸ್ತಾನ್ ಉಗ್ರರ ಹೆಡೆಮುರಿ ಕಟ್ಟಲು ಕೇಂದ್ರಸರ್ಕಾರ ಸಜ್ಜು! – OCI Card ರದ್ದಿಗೆ ಸೂಚಿಸಿದ ಭಾರತ!
ವಜ್ರಕ್ಕಾಗಿ ರಸ್ತೆಯಲ್ಲೆಲ್ಲಾ ಹುಡುಕಾಡಿದ ಜನ!
ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವಜ್ರ ರಸ್ತೆಯಲ್ಲಿ ಚೆಲ್ಲಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಸ್ಥಳಕ್ಕೆ ಜಮಾಯಿಸಿದ ಜನರು ವಜ್ರಗಳ ಬೇಟೆಯನ್ನು ಆರಂಭಿಸಿದ್ದಾರೆ. ವಾಹನಗಳು ಹೋಗಲು ಅವಕಾಶ ನೀಡದೆ ರಸ್ತೆಯ ಮಧ್ಯೆಯೇ ವಜ್ರಗಳನ್ನು ಹುಡುಕಾಡುವಲ್ಲಿ ನಿರತರಾದರು. ಪರಿಣಾಮ ಕೆಲ ಕಾಲ ವಾಹನ ಸವಾರರಿಗೆ ತೊಂದರೆ ಸಹ ಉಂಟಾಯಿತು. ಕೆಲವರು ಮಾರುಕಟ್ಟೆಯ ರಸ್ತೆಯಿಂದಲೂ ಧೂಳನ್ನು ಸಂಗ್ರಹಿಸಿ ವಜ್ರಗಳನ್ನು ಹುಡುಕಾಡಿದ್ದಾರೆ. ಕೆಲವರು ಕೆಲವು ವಜ್ರಗಳನ್ನು ಹುಡುಕುವಲ್ಲಿ ಯಶಸ್ವಿಯಾದ್ದಾರೆ.
#સુરત વરાછા મિનિબજાર રાજહંસ ટાવર પાસે હીરા ઢોળાયાની વાત થતા હીરા શોધવા લોકોની ભીડ થઈ.
પ્રાથમિક સૂત્રો દ્વારા જાણવા મળેલ છે કે આ હીરા CVD અથવા અમેરિકન ડાયમંડ છે..#Diamond #Surat #Gujarat pic.twitter.com/WdQwbBSarl— 𝑲𝒂𝒍𝒑𝒆𝒔𝒉 𝑩 𝑷𝒓𝒂𝒋𝒂𝒑𝒂𝒕𝒊 🇮🇳🚩 (@KalpeshPraj80) September 24, 2023
ವಜ್ರ ಕೈಗೆ ಸಿಕ್ಕರೂ ನಿರಾಸೆ!
ಕೆಲವರು ವಜ್ರ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅವರಿಗೊಂದು ಶಾಕ್ ಕಾದಿತ್ತು. ಅವರಿಗೆ ಸಿಕ್ಕ ವಜ್ರಗಳು ನಕಲಿಯಾಗಿತ್ತು. ಈ ವಜ್ರಗಳು ಅಮೆರಿಕನ್ ವಜ್ರಗಳಾಗಿವೆ. ಇದನ್ನು ಆಭರಣ ಅಥವಾ ಸೀರೆಗಳ ವಿನ್ಯಾಸದಲ್ಲಿ ಮಾತ್ರ ಬಳಸಲಾಗುತ್ತದೆ. ಇದು ಬೆಲೆ ಬಾಳುವ ವಜ್ರವಲ್ಲ ಎಂದು ಜನ ನಿರಾಸೆಗೊಂಡಿದ್ದಾರೆ. ಸದ್ಯ ಜನರು ರಸ್ತೆಯಲ್ಲಿ ವಜ್ರಕ್ಕಾಗಿ ಹುಡುಕಾಟ ನಡೆಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.