5 ಕಥೆ, 5 ನಿರ್ದೇಶಕರ ವಿಭಿನ್ನ ಸಿನಿಮಾ – ‘ಪೆಂಟಗನ್’ ರಿಲೀಸ್ ಡೇಟ್ ಘೋಷಣೆ

5 ಕಥೆ, 5 ನಿರ್ದೇಶಕರ ವಿಭಿನ್ನ ಸಿನಿಮಾ – ‘ಪೆಂಟಗನ್’ ರಿಲೀಸ್ ಡೇಟ್ ಘೋಷಣೆ

ಬಹುನಿರೀಕ್ಷೆಯ ಹಾಗೂ ಪ್ರಯೋಗಾತ್ಮಕ ಸಿನಿಮಾ ಅಂತಾನೇ ಕ್ರೇಜ್ ಹುಟ್ಟಿಸಿದ ‘ಪೆಂಟಗನ್’ ಚಿತ್ರ ರಿಲೀಸ್ ಡೇಟ್ ಕೊನೆಗೂ ಘೋಷಣೆಯಾಗಿದೆ. ಏಪ್ರಿಲ್ 7 ರಂದು ದೇಶಾದ್ಯಂತ ಈ ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ಚಿತ್ರದ ಕ್ರಿಯೇಟಿವ್ ಡೈರೆಕ್ಟರ್ ಗುರು ದೇಶಪಾಂಡೆ ತಿಳಿಸಿದ್ದಾರೆ.  ಐದು ಜನ ನಿರ್ದೇಶಕರು, ಐದು ಕಥೆಗಳು, ಐದು ಜನ ಬರಹಗಾರರು, ಐದು ಹೀರೋಗಳು ಹೀಗೆ ಐದೈದು ವಿಷಯಗಳನ್ನು ಪೆಂಟಗನ್ ಚಿತ್ರದಲ್ಲಿ ಹೇಳಲು ಹೊರಟಿದೆ ಚಿತ್ರತಂಡ.

ಇದನ್ನೂ ಓದಿ:  ಕೆಜಿಎಫ್ 1, ಕಾಂತಾರ ಸಿನಿಮಾಗಳ ದಾಖಲೆಗಳು ಉಡೀಸ್ – ₹50 ಕೋಟಿ ‘ಕಬ್ಜ’ ಕಲೆಕ್ಷನ್!

ಎಲ್ಲಾ ವಯಸ್ಸಿನವರಿಗೂ ಇಷ್ಟವಾಗುವಂತಹ ಕಥೆಗಳನ್ನು ಪೆಂಟಗನ್ ಸಿನಿಮಾದಲ್ಲಿ ಹೇಳಲಾಗಿದೆ. ಜೊತೆಗೆ ಚಿತ್ರದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಲಾಗಿದೆ ಎಂದಿದ್ದಾರೆ ಗುರು ದೇಶಪಾಂಡೆ. ಹಾಗಾಗಿ ಸಿನಿಮಾ ಟ್ರೈಲರ್ ಬಿಡುಗಡೆಯಾದ ದಿನದಿಂದ ನಿರೀಕ್ಷೆ ಮೂಡಿಸಿದೆ. ಪ್ರತಿಭಾವಂತ ನಿರ್ದೇಶಕರುಗಳಾದ ರಾಘು ಶಿವಮೊಗ್ಗ, ಆಕಾಶ್ ಶ್ರೀವತ್ಸ, ಚಂದ್ರ ಮೋಹನ್, ಕಿರಣ್ ಕುಮಾರ್ ಹಾಗೂ ಮತ್ತೊಂದು ಕಥೆಗೆ ಗುರು ದೇಶಪಾಂಡೆ ಅವರೇ ನಿರ್ದೇಶನ ಮಾಡಿದ್ದಾರೆ. ಪ್ರಕಾಶ್ ಬೆಳವಾಡಿ, ಕಿಶೋರ್, ರವಿಶಂಕರ್ ಸೇರಿದಂತೆ ಹೆಸರಾಂತ ನಟರೇ ತಾರಾ ಬಳಗದಲ್ಲಿ ಇದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡುಗಳು ಜನರ ಗಮನ ಸೆಳೆದಿವೆ.

ಅಲ್ಲದೇ, ಪೆಂಟಗಾನ್ ಚಿತ್ರದ ಹಾಡೊಂದು ರಿಲೀಸ್ ಆಗಿದ್ದು, ಈ ಹಾಡು ಪಡ್ಡೆಗಳ ಮೈಬಿಸಿ ಮಾಡಿದೆ. ಇನ್ನು ಚಿತ್ರ ಕೂಡಾ ವಿಭಿನ್ನವಾಗಿ ಮೂಡಿಬಂದಿದ್ದು, ಪ್ರೇಕ್ಷಕರಿಗೆ ಇಷ್ಟವಾಗುತ್ತೆ ಅನ್ನೋ ದೃಢನಂಬಿಕೆ ಚಿತ್ರತಂಡದ್ದು. ನೋಡುಗರಿಗೆ ಏನೆಲ್ಲಾ ಬೇಕಿದೆಯೋ ಎಲ್ಲವನ್ನೂ ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ. ಹೊಸ ಆಲೋಚನೆಯ ನಿರ್ದೇಶಕರು, ಬರಹಗಾರರು ಮತ್ತು ಹೊಸ ಕಲಾವಿದರು ಕೂಡ ಸಿನಿಮಾದ ಭಾಗವಾಗಿದ್ದಾರೆ. ಹಾಗಾಗಿ ಪ್ರೇಕ್ಷಕರಿಗೆ ಈ ಸಿನಿಮಾ ಹೊಸ ಅನುಭವನ್ನು ನೀಡಲಿದೆ ಎನ್ನುತ್ತಾರೆ ಗುರು ದೇಶಪಾಂಡೆ.

suddiyaana