ಪೆನ್ಷನ್ ಜನವರಿ 31ಕ್ಕೆ ನಿಲ್ಲಲಿದೆ ಹುಷಾರ್! – ಪೆನ್ಷನ್ ಪಡೆಯಲು ಈ ದಾಖಲೆ ಸಲ್ಲಿಕೆ ಕಡ್ಡಾಯ
ಪೆನ್ಷನ್ ಪಡಿತಾ ಇರೋರಿಗೆ ಮಹತ್ವದ ಸುದ್ದಿಯೊಂದಿದೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ಪ್ರತಿ ತಿಂಗಳು ಪೆನ್ಷನ್ ಹಣ ಪಡೆಯುತ್ತಿರುವವರಿಗೆ ಕರ್ನಾಟಕ ಸರ್ಕಾರ ಬಿಗ್ ಶಾಕ್ ನೀಡಿದೆ. 2024ರ ಜನವರಿ 31 ರೊಳಗೆ ಈ ಕೆಲಸ ಮಾಡದಿದ್ರೆ ಮುಂದಿನ ತಿಂಗಳಿನಿಂದ ಸರ್ಕಾರದಿಂದ ದೊರೆಯುವ ಯಾವುದೇ ಪಿಂಚಣಿ ಹಣ ಬರೋದಿಲ್ಲ. ಅಂದ್ರೆ ವೃದ್ಧಾಪ್ಯ ಪಿಂಚಣಿ, ವಿಧವಾ ವೇತನ, ಅಂಗವಿಕಲ ಪಿಂಚಣಿ ಹಣ ಸೇರಿದಂತೆ ಸರ್ಕಾರದಿಂದ ದೊರೆಯುವ ಎಲ್ಲ ಹಣ ಶಾಶ್ವತವಾಗಿ ಸ್ಥಗಿತಗೊಳ್ಳಲಿದೆ. ಇದೇ ಜನವರಿ 31 ರ ಒಳಗಾಗಿ ಈ ಕೆಲಸ ಮಾಡುವುದು ಎಲ್ಲರಿಗೂ ಕಡ್ಡಾಯವಾಗಿದೆ.
ಇದನ್ನೂ ಓದಿ: ಜನವರಿ 22ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ – ಡ್ರೈ ಡೇ ಆಚರಣೆಗೆ ಆದೇಶ
ಈ ತಿಂಗಳೊಳಗೆ ವಾರ್ಷಿಕ ಜೀವಿತ ಪ್ರಮಾಣ ಪತ್ರ ಸಲ್ಲಿಸಬೇಕು. ಇಲ್ಲದಿದ್ದರೆ ಪಿಂಚಣಿ ಕಡಿತಗೊಳಿಸಲಾಗುತ್ತದೆ. ಇನ್ನೂ ನೀವು ಲೈಫ್ ಸರ್ಟಿಫಿಕೇಟ್ ಸಲ್ಲಿಸದೇ ಇದ್ದಲ್ಲಿ ತಕ್ಷಣ ಈ ಕೆಲಸ ಮಾಡಿ. ಸಾಮಾನ್ಯವಾಗಿ ಲೈಫ್ ಸರ್ಟಿಫಿಕೇಟ್ ಸಲ್ಲಿಕೆಗೆ ಗಡುವು ನವೆಂಬರ್ ಅಂತ್ಯದ ವೇಳೆಗೆ ಮುಕ್ತಾಯವಾಗಿದೆ. ಹಾಗಿದ್ದರೂ ಇನ್ನೂ ಈ ಸರ್ಟಿಫಿಕೇಟ್ ಸಲ್ಲಿಸದೆ ಮಿಸ್ ಆದವರಿಗಾಗಿ ಗಡುವು ವಿಸ್ತರಿಸಲಾಗಿದೆ. ಹೀಗಾಗಿ ಜೀವನ ಪ್ರಮಾಣ ಪತ್ರ ನೀಡುವ ಸೌಲಭ್ಯವನ್ನು 2024ರ ಜನವರಿ ಅಂತ್ಯದವರೆಗೆ ಒದಗಿಸಲಾಗುತ್ತಿದೆ.
ಇನ್ನು ಪೆನ್ಷನ್ ಪ್ರತಿ ತಿಂಗಳು ಬರ್ಬೇಕು ಅಂದ್ರೆ, ಬ್ಯಾಂಕ್ ಖಾತೆಗೆ ಮೊಬೈಲ್ ನಂಬರ್ ನ್ನು ಲಿಂಕ್ ಮಾಡುವುದು ಕಡ್ಡಾಯ. ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಮೂಲಕ ಈ-ಕೆವೈಸಿ ಮಾಡಿಸಿಕೊಳ್ಳಬೇಕು. ಜೊತೆಗೆ ಪಾನ್ ಕಾರ್ಡ್ ನಂಬರ್ ಲಿಂಕ್ ಮಾಡಿಸಿಬೇಕು. ಆಧಾರ್ ಕಾರ್ಡ್ ಪಡೆದುಕೊಂಡು 10 ವರ್ಷಗಳು ಆಗಿದ್ದರೆ, ಒಮ್ಮೆ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸಿಕೊಳ್ಳುವುದು ಕಡ್ಡಾಯ.. ಈ ಎಲ್ಲಾ ಕೆಲಸಗಳನ್ನು ಮಾಡಿದ್ರೆ ನೀವು ಪ್ರತಿ ತಿಂಗಳು ಪೆನ್ಷನ್ ಪಡೀಬಹುದು.