Watch: ಕುಣಿಯುತಾ… ಕುಣಿಯುತಾ… ಓಡೋಣು ಬಾರಾ..
ಹಿಮಪ್ರದೇಶಗಳಲ್ಲಿ ಕಾಣಸಿಗುವ ಪೆಂಗ್ವಿನ್ ಗಳು ನೋಡಲು ಸಖತ್ ಕ್ಯೂಟ್. ಇನ್ನೂ ಅದು ಪುಟಾಣಿ ಮಕ್ಕಳಂತೆ ಆಟವಾಗಿದರೆ ಕೇಳಬೇಕೇ? ಹೋಗಿ ಮುದ್ದಾಡೋಣ ಅನ್ನಿಸುತ್ತೆ. ಅದರಲ್ಲೂ ನೋಡಲು ಹಕ್ಕಿಗಳಂತೆ ಕಾಣಿಸದ, ಹಾರಲು ಬಾರದ ಪೆಂಗ್ವಿನ್ ಗಳು ಪಾತರಗಿತ್ತಿಯನ್ನು ಅಟ್ಟಿಸಿಕೊಂಡು ಹೋದರೆ ಹೇಗಿರುತ್ತೆ?
ಇದನ್ನೂ ಓದಿ: ನೋಡಲು ಹೂವಿನಂತಿದ್ರೂ ಇದು ಹೂವಲ್ಲ – ಕೀಟಗಳ ಲೋಕವೇ ಅದ್ಬುತ
ಸಾಮಾಜಿಕ ಜಾಲತಾಣದಲ್ಲಿ ಮುದ್ದಾದ ಪೆಂಗ್ವಿನ್ ಗಳ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಪೆಂಗ್ವಿನ್ ಗಳು ಕುಪ್ಪಳಿಸುತ್ತಾ ಬರುತ್ತವೆ. ಹೀಗೆ ಕುಪ್ಪಳಿಸುತ್ತಾ ಬರುವುದನ್ನು ಕಂಡಾಗ ಯಾರೋ ಅಟ್ಟಿಸಿಕೊಂಡು ಬರುವಂತೆ ಕಾಣಿಸುತ್ತದೆ. ವಿಡಿಯೋವನ್ನು ಸೂಕ್ಷವಾಗಿ ಗಮನಿಸುತ್ತಾ ಹೋದಾಗ, ಪೆಂಗ್ವಿನ್ ಗಳನ್ನು ಯಾರೂ ಅಟ್ಟಿಸಿಕೊಂಡು ಬರುತ್ತಿಲ್ಲ. ಬದಲಾಗಿ ಪೆಂಗ್ವಿನ್ ಗಳೇ ಪಕ್ಕದಲ್ಲಿ ಹಾರುತ್ತಿದ್ದ ಚಿಟ್ಟೆಯನ್ನು ಅಟ್ಟಿಸುತ್ತಿದೆ ಎಂದು ಗೊತ್ತಾಗುತ್ತದೆ.
ಡಿಸೆಂಬರ್ 31 ರಂದು Fascinating ಎಂಬ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ವೈರಲ್ ಆದ ವಿಡಿಯೋ 11.9 ಮಿಲಿಯನ್ ಜನರನ್ನು ಮೋಡಿ ಮಾಡಿದೆ. ಎರಡೇ ಸೆಕೆಂಡುಗಳ ಈ ಪುಟ್ಟ ವಿಡಿಯೋದಲ್ಲಿ ಚಿಟ್ಟೆಯನ್ನು ಹೀಗೆ ಬೆನ್ನಟ್ಟುತ್ತಿರುವ ಈ ಪೆಂಗ್ವಿನ್ ಗಳನ್ನು ನೋಡಿದ ನೂರಾರು ಜನರು ಮರುಳಾಗಿದ್ದಾರೆ.
Penguins chasing a butterfly.pic.twitter.com/niyjFLz1i3
— Fascinating (@fasc1nate) December 30, 2022
ನಾನಂತೂ ಮುಂದಿನ ಜನ್ಮದಲ್ಲಿ ಪೆಂಗ್ವಿನ್ ಆಗಿ ಹುಟ್ಟುತ್ತೇನೆ. ಚಿಟ್ಟೆ ನೀನು ಇನ್ನಷ್ಟು ಎತ್ತರಕ್ಕೆ ಹಾರು ಆಕಾಶವನ್ನು ಮುಟ್ಟು ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.