4 ದಿನ ಬಂದ್ ಆಗಿದ್ದ ಪೀಣ್ಯ ಫ್ಲೈಓವರ್ ಓಪನ್ – ವಾಹನ ಸಂಚಾರ ಆರಂಭ

ಬೆಂಗಳೂರಿನ ಪ್ರಮುಖ ಸಂಪರ್ಕ ಸೇತುವೆಯಾಗಿರುವ ಪೀಣ್ಯ ಎಲಿವೇಟೆಡ್ ಫ್ಲೈಓವರ್ ನಾಲ್ಕು ದಿನಗಳಿಂದ ಬಂದ್ ಆಗಿತ್ತು. ಇದೀಗ ಪೀಣ್ಯ ಸುತ್ತಮುತ್ತ ಓಡಾಡುವ ಪ್ರಯಾಣಿಕರಿಗೆ ಗುಡ್ನ್ಯೂಸ್ ಸಿಕ್ಕಿದೆ. ನಾಲ್ಕು ದಿನಗಳಿಂದ ಬಂದ್ ಆಗಿದ್ದ ಪೀಣ್ಯ ಫ್ಲೈಓವರ್ ಇದೀಗ ಓಪನ್ ಆಗಿದೆ.
ಇದನ್ನೂ ಓದಿ: ಆ್ಯಕ್ಸಲ್ ತುಂಡಾಗಿ ಸರ್ಕಾರಿ ಬಸ್ ಪಲ್ಟಿ! – ವಿದ್ಯಾರ್ಥಿ ಸಾವು.. 20ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರ!
ಫ್ಲೈಓವರ್ ಕೇಬಲ್ ಅಳವಡಿಕೆ, ದುರಸ್ತಿ ಕಾಮಗಾರಿ ಹಾಗೂ ಅಂತಿಮ ಹಂತದ ಲೋಡ್ ಟೆಸ್ಟಿಂಗ್ ಹಿನ್ನೆಲೆಯಲ್ಲಿ ಮೇ 5 ರಿಂದ ಮೇ 8 ರವರೆಗೆ ಬರೋಬ್ಬರಿ 4 ದಿನಗಳ ಕಾಲ ಪೀಣ್ಯ ಫ್ಲೈಓವರ್ ವಾಹನ ಸಂಚಾರಕ್ಕೆ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ನೆಲಮಂಗಲ, ತುಮಕೂರು ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೆ ಟ್ರಾಫಿಕ್ ಬಿಸಿ ತುಸು ಹೆಚ್ಚಾಗಿಯೇ ತಟ್ಟಿತ್ತು. ಇದೀಗ ಕೇಬಲ್ ಅಳವಡಿಕೆ ಮುಕ್ತಾಯ ಆಗಿದ್ದು, ಲೋಡ್ ಟೆಸ್ಟಿಂಗ್ ಕೂಡ ಯಶಸ್ವಿಯಾಗಿದೆ. ಬೆಳಗ್ಗೆ 11 ಗಂಟೆಯಿಂದಲೇ ಎಲ್ಲಾ ಮಾದರಿಯ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಬರೋಬ್ಬರಿ 22 ಜಿಲ್ಲೆಗಳ ಸಂಚಾರ ರಹದಾರಿ ಪೀಣ್ಯ ಫೈಓವರ್ನಲ್ಲಿ ಇಂದಿನಿಂದ ಮತ್ತೆ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಮೇ 5ರಂದು ಕೇಬಲ್ ಅಳವಡಿಕೆ ಮತ್ತು ಲೋಡ್ ಟೆಸ್ಟಿಂಗ್ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫ್ಲೈಓವರ್ ಬಂದ್ ಮಾಡಿ, ವಾಹನ ಸಂಚಾರಕ್ಕೆ ನಿರ್ಬಂಧ ಹೇರಿತ್ತು. ಕಳೆದ ನಾಲ್ಕು ದಿನದಿಂದ ಫ್ಲೈಓವರ್ ಬಂದ್ ಆಗಿದ್ದಕ್ಕೆ ವಾಹನ ಸವಾರರು ಟ್ರಾಫಿಕ್ನಿಂದ ಪರದಾಡಿದ್ದರು. ಸದ್ಯ ಎಂದಿನಂತೆ ಎರಡು ದಿಕ್ಕಿನಲ್ಲೂ ಫ್ಲೈಓವರ್ ಮೇಲೆ ಸಂಚಾರ ಆರಂಭವಾಗಿದೆ.

ನೋಡಿರಿ

