ಚಾಂಪಿಯನ್ಸ್ ಟ್ರೋಫಿಗೆ ರೆಡಿಯಾದ ಪಾಕಿಸ್ತಾನ – PCB ಹುಳುಕು ಬಯಲಾಗುತ್ತಾ?
![ಚಾಂಪಿಯನ್ಸ್ ಟ್ರೋಫಿಗೆ ರೆಡಿಯಾದ ಪಾಕಿಸ್ತಾನ – PCB ಹುಳುಕು ಬಯಲಾಗುತ್ತಾ?](https://suddiyaana.com/wp-content/uploads/2025/02/1200-675-23499228-556-23499228-1738988799714.jpg)
ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿಗೆ ಉಳಿದಿರೋದು ಇನ್ನು ಒಂದೇ ವಾರ. ಫೆಬ್ರವರಿ 19ರಿಂದ ಐಸಿಸಿಯ ಮೆಗಾ ಟೂರ್ನಿ ಆರಂಭಗೊಳ್ಳಲಿದೆ. ಚಾಂಪಿಯನ್ಸ್ ಟ್ರೋಪಿಯೂ 8 ತಂಡಗಳ ನಡುವೆ ನಡೆಯುತ್ತಿದೆ. ಗ್ರೂಪ್-Aನಲ್ಲಿ ಭಾರತ, ಪಾಕಿಸ್ತಾನ್ , ಬಾಂಗ್ಲಾದೇಶ್ ಮತ್ತು ನ್ಯೂಜಿಲೆಂಡ್ ತಂಡಗಳಿವೆ. ಗ್ರೂಪ್-Bನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಸೌತ್ ಆಫ್ರಿಕಾ ಮತ್ತು ಅಫ್ಘಾನಿಸ್ತಾನ್ ತಂಡಗಳಿವೆ. ಈ ಬಾರಿ ಚಾಂಪಿಯನ್ಸ್ ಟ್ರೋಫಿ ಹೊಣೆಯನ್ನ ಹೊತ್ತಿರೋದು ಪಾಕಿಸ್ತಾನ. ಆದ್ರೆ ಭಾರತ ಪಂದ್ಯಗಳನ್ನ ಆಡಲು ಪಾಕಿಸ್ತಾನಕ್ಕೆ ಕಾಲಿಡಲ್ಲ ಎಂದಿದ್ದಕ್ಕೆ ಹೈಬ್ರಿಡ್ ಮಾದರಿಯಲ್ಲಿ ಪಂದ್ಯ ನಡೀತಿದೆ. ಉಳಿದೆಲ್ಲಾ ಪಂದ್ಯಗಳು ಪಾಕಿಸ್ತಾನದ ಮೂರು ಮೈದಾನಗಳಲ್ಲಿ ನಡೆಸೋಕೆ ಫೈನಲ್ ಮಾಡ್ಲಾಗಿದೆ. ಇದೀಗ ಟೂರ್ನಿಗಾಗಿ ಸ್ಟೇಡಿಯಮ್ಗಳನ್ನ ಸಿದ್ಧಗೊಳಿಸಿರೋ ಪಾಕಿಸ್ತಾನ ಅದ್ರಲ್ಲಿ ಒಂದು ಸ್ಟೇಡಿಯಮ್ನ ಅನಾವರಣಗೊಳಿಸಿದೆ.
ಇದನ್ನೂ ಓದಿ : ಟೀಂ ಇಂಡಿಯಾಗೆ ಪಾಂಡ್ಯ ಕ್ಯಾಪ್ಟನ್ – ರೋಹಿತ್ ನಿವೃತ್ತಿ ಕನ್ಫರ್ಮ್ ಆಯ್ತಾ?
ಫೆಬ್ರವರಿ 19 ರಿಂದ ಶುರುವಾಗಲಿರುವ ಈ ಟೂರ್ನಿಗಾಗಿ ಆತಿಥೇಯ ಪಾಕಿಸ್ತಾನ್ ತಂಡ ತನ್ನ ನೂತನ ಜೆರ್ಸಿಯನ್ನು ಅನಾವರಣಗೊಳಿಸಿದೆ. ಲಾಹೋರ್ನ ಗಡಾಫಿ ಸ್ಟೇಡಿಯಂನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಹೊಸ ಜೆರ್ಸಿಯನ್ನು ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾದ ಪಾಕಿಸ್ತಾನ್ ತಂಡದ ಆಟಗಾರರು ಹಾಜರಿದ್ದರು. ಈ ಕಾರ್ಯಕ್ರಮದ ಜೊತೆ ಜೊತೆಗೆ ನವೀಕರಣಗೊಂಡಿರುವ ಗದ್ದಾಫಿ ಸ್ಟೇಡಿಯಂ ಕೂಡ ಉದ್ಘಾಟನೆಗೊಂಡಿದೆ. ಈ ಸ್ಟೇಡಿಯಂನಲ್ಲೇ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯ ಬಹುತೇಕ ಪಂದ್ಯಗಳು ನಡೆಯಲಿದೆ. ಆದ್ರೆ ಲಾಹೋರ್ ಮತ್ತು ಕರಾಚಿ ಮೈದಾನಗಳ ಬಗ್ಗೆ ಯಾವುದೇ ಅಪ್ಡೇಟ್ಸ್ ಹೊರ ಬಿದ್ದಿಲ್ಲ. ಯಾಕಂದ್ರೆ ಟೂರ್ನಿ ಆಯೋಜನೆಗೂ ಮುನ್ನ ಮೂರೂ ಮೈದಾನಗಳ ನವೀಕರಣ ಕಾರ್ಯ ನಡೆಯುತ್ತಿತ್ತು. ಆದ್ರೀಗ ಗಡ್ಡಾಫಿ ಕ್ರೀಡಾಂಗಣವನ್ನ ಅದ್ಧುರಿಯಾಗಿ ಇನಾಗುರೇಟ್ ಮಾಡಿದ್ರೂ ಉಳಿದ ಎರಡು ಸ್ಟೇಡಿಯಮ್ಗಳ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ಈ ಮೂಲಕ ಪಿಸಿಬಿ ತನ್ನ ಹುಳುಕನ್ನ ಮುಚ್ಚಿಕೊಳ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನವೇ ಗೆಲ್ಲೋದು ಅಂತಾ ಪಾಕಿಸ್ತಾನದ ಮಾಜಿ ಕ್ರಿಕೆಟಿಗರೆಲ್ಲಾ ಈಗಾಗ್ಲೇ ಭವಿಷ್ಯ ನುಡೀತಿದ್ದಾರೆ. 8 ತಂಡಗಳ ಪೈಕಿ ಸೆಮಿಫೈನಲ್ಗೇರುವ ಮೂರು ತಂಡಗಳನ್ನು ಹೆಸರಿಸಿದ್ದಾರೆ ಪಾಕ್ ತಂಡದ ಮಾಜಿ ಆಟಗಾರ ಶೊಯೆಬ್ ಅಖ್ತರ್. ಇವ್ರ ಪ್ರಕಾರ, ಈ ಬಾರಿ ಏಷ್ಯಾದ ಮೂರು ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಲಿದೆ. ಅದರಂತೆ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಸೆಮಿಫೈನಲ್ಗೇರುವುದು ಖಚಿತ. ಭಾರತ ಮತ್ತು ಪಾಕಿಸ್ತಾನ್ ತಂಡಗಳು ಗ್ರೂಪ್-ಎ ನಲ್ಲಿದ್ದು, ಈ ತಂಡಗಳು ಬಾಂಗ್ಲಾದೇಶ್ ಮತ್ತು ನ್ಯೂಝಿಲೆಂಡ್ ತಂಡಗಳಿಗೆ ಸೋಲುಣಿಸಿ ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ. ಇನ್ನು ಗ್ರೂಪ್-ಬಿ ಯಿಂದ ಅಫ್ಘಾನಿಸ್ತಾನ್ ತಂಡ ಸೆಮಿಫೈನಲ್ಗೇರಲಿದೆ. ಈ ಬಾರಿ ಏಷ್ಯಾದಲ್ಲಿ ಟೂರ್ನಿ ನಡೆಯುತ್ತಿರುವುದರಿಂದ ಅಫ್ಘಾನ್ ಪಡೆಯಿಂದ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಬಹುದು. ಏಕೆಂದರೆ 2023ರ ಏಕದಿನ ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ್ ತಂಡವು ಇಂಗ್ಲೆಂಡ್, ಪಾಕಿಸ್ತಾನ್ ಮತ್ತು ಶ್ರೀಲಂಕಾ ತಂಡಗಳಿ ಸೋಲುಣಿಸಿ ಆಘಾತ ನೀಡಿತ್ತು. ಅಂತಹದ್ದೇ ಪ್ರದರ್ಶನವನ್ನು ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲೂ ನಿರೀಕ್ಷಿಸಬಹುದು ಎಂದು ಶೊಯೆಬ್ ಅಖ್ತರ್ ಭವಿಷ್ಯ ನುಡಿದಿದ್ದಾರೆ.