ಸ್ಟಾರ್ಸ್ ಆದ್ರೂ ಪಾಕ್ ನಲ್ಲಿಲ್ಲ ಬೆಲೆ  – ಬಾಬರ್, ಆಫ್ರಿದಿಗೆ ಸಿಗೋ ವೇತನವೆಷ್ಟು?
ವಿಶ್ವಕ್ರಿಕೆಟರ್ ನಲ್ಲಿ ಭಾರತೀಯರೇ ಬೆಸ್ಟ್

ಸ್ಟಾರ್ಸ್ ಆದ್ರೂ ಪಾಕ್ ನಲ್ಲಿಲ್ಲ ಬೆಲೆ  – ಬಾಬರ್, ಆಫ್ರಿದಿಗೆ ಸಿಗೋ ವೇತನವೆಷ್ಟು?ವಿಶ್ವಕ್ರಿಕೆಟರ್ ನಲ್ಲಿ ಭಾರತೀಯರೇ ಬೆಸ್ಟ್

ಕ್ರಿಕೆಟ್ ಅನ್ನೋದು ಜಸ್ಟ್ ಈಗ ಗೇಮ್ ಆಗಿ ಉಳಿದಿಲ್ಲ. ಮಂಡಳಿಗಳ ಪಾಲಿಗೆ ಬಹುದೊಡ್ಡ ಬ್ಯುಸಿನೆಸ್. ಒಂಥರಾ ಚಿನ್ನದ ಮೊಟ್ಟೆಯಿಡೋ ಕೋಳಿ ಇದ್ದಂತೆ. ಅದ್ರಲ್ಲೂ ನಮ್ಮ ಬಿಸಿಸಿಐ ವಿಶ್ವಕ್ರಿಕೆಟ್​​ನಲ್ಲಿ ದೊಡ್ಡಣ್ಣ. ಇಲ್ಲಿ ಕೋಟಿಗಳಿಗೆ ಲೆಕ್ಕವೇ ಇಲ್ಲ. ಬಿಸಿಸಿಐನ ಒಪ್ಪಂದಕ್ಕೆ ಸೇರಿದ ಆಟಗಾರರಿಗೆ ಕೋಟಿಗಳ ಲೆಕ್ಕದಲ್ಲಿ ಪ್ರತೀವರ್ಷ ಸಂಭಾವನೆ ಸೇರುತ್ತೆ. ಎಂಥಾ ಕಡುಬಡವನಾಗಿದ್ರೂ ಟೀಂ ಇಂಡಿಯಾ ಸೇರಿದ್ರೂ ಅಂದ್ರೆ ಅವ್ರ ಲಕ್ ಕುದುರಿತು ಅಂತಾನೇ ಲೆಕ್ಕ. ನಮ್ಮ ಭಾರತದ ಆಟಗಾರರ ಅದೃಷ್ಟವೇನೋ ಹೀಗಿದೆ ಸರಿ. ನಮ್ಮ ಪಕ್ಕದ ವೈರಿ ರಾಷ್ಟ್ರ ಪಾಕಿಸ್ತಾನದಲ್ಲಿ ಆಡುವ ಕ್ರಿಕೆಟಿಗರಿಗೆ ಕಥೆ ಏನು ಅಂತಾ ನಿಮಗೆ ಅನ್ನಿಸ್ಬೋದು. ಮೊದ್ಲೇ ಕಿತ್ತು ತಿನ್ನೋ ಬಡತನದಲ್ಲಿರೋ ಪಾಕ್​ನಲ್ಲಿ ಕ್ರಿಕೆಟಿಗರಿಗೆ ಸಿಗುವ ಹಣ ನಮ್ಮ ದೇಶೀ ಟೂರ್ನಿಗಳಲ್ಲಿ ಆಟಗಾರರಿಗೆ ಇರೋ ಮೂಲ ಬೆಲೆಯಷ್ಟೂ ಹಣ ಸಿಗಲ್ಲ.

ಪಾಕ್ ಕ್ರಿಕೆಟರ್ಸ್ ಗೆ ಇಷ್ಟೇ ವೇತನ! 

ಕ್ರಿಕೆಟ್​ ಅತೀ ಹೆಚ್ಚು ಪಾಪ್ಯುಲಾರಿಟಿ ಹೊಂದಿರೋ ಜಗತ್ತಿನ ಎರಡನೇ ಗೇಮ್. ಕ್ರಿಕೆಟ್​ನಲ್ಲಿ ಖ್ಯಾತಿ ಪಡೆದವ್ರು ಫೈನಾನ್ಶಿಯಲಿ ಕೂಡ ತುಂಬಾನೇ ಸ್ಟ್ರಾಂಗ್ ಆಗಿದ್ದಾರೆ. ಜಾಹೀರಾತುಗಳಿಂದಲೂ ಹಣ ಎಣಿಸಿಕೊಳ್ತಿದ್ದಾರೆ. ಆಯಾದೇಶಗಳು ಕ್ರಿಕೆಟ್​ ಮಂಡಳಿಯಿಂದಲೂ ಆಟಗಾರರು ಕೈತುಂಬ ದುಡ್ಡು ಸಿಗುತ್ತೆ. ನಮ್ಮ ಭಾರತೀಯ ಕ್ರಿಕೆಟರ್ಸ್ ವಿಶ್ವದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ಆಟಗಾರರು. ಇನ್ನು ನಾಲ್ಕನೇ ಶ್ರೀಮಂತ ಕ್ರಿಕೆಟ್​ ಮಂಡಳಿ ಎನಿಸಿಕೊಂಡಿರುವ ಪಾಕಿಸ್ತಾನ ಎ, ಬಿ, ಸಿ, ಡಿ ಮಾದರಿಯಲ್ಲಿ ಆಟಗಾರರೊಂದಿಗೆ ಒಪ್ಪಂದ ಮಾಡಿಕೊಂಡು ವಾರ್ಷಿಕ ವೇತನ ನೀಡುತ್ತದೆ. ಆದ್ರೆ ನಮ್ಮ ಭಾರತದ ಆಟಗಾರರ ರೀತಿ ಕೋಟಿಗಳ ಲೆಕ್ಕದಲ್ಲಿ ಅಲ್ಲ ಲಕ್ಷದಲ್ಲಿ ಸಿಗುತ್ತೆ. 1 ಜುಲೈ 2023 ರಿಂದ 2026ರ ಜೂನ್ 30ರವರೆಗೆ ಪುರುಷರ ಒಪ್ಪಂದದ ಪಟ್ಟಿಯಲ್ಲಿ ಆಟಗಾರರು ಪಡೆಯುತ್ತಿರುವ ಸಂಭಾವನೆ ಬಗ್ಗೆ ಪಿಸಿಬಿಯೇ ಮಾಹಿತಿಯನ್ನ ಹಂಚಿಕೊಂಡಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ A ವರ್ಗದಲ್ಲಿ ಮೂವರು ಸ್ಟಾರ್ ಆಟಗಾರರಾದ ಬಾಬರ್ ಅಜಮ್, ಶಾಹೀನ್ ಶಾ ಅಫ್ರಿದಿ ಮತ್ತು ಮೊಹಮ್ಮದ್ ರಿಜ್ವಾನ್ ಸೇರಿದ್ದಾರೆ. ಇವರು ಪಾಕಿಸ್ತಾನಿ ರೂಪಾಯಿ 4.5 ಮಿಲಿಯನ್ ವಾರ್ಷಿಕ ವೇತನವನ್ನು ಪಡೆಯುತ್ತಾರೆ. ಈ ಮೊತ್ತವನ್ನು ಭಾರತೀಯ ರೂಪಾಯಿಯಲ್ಲಿ ನೋಡುವುದಾದರೇ 13 ಲಕ್ಷದ 56 ಸಾವಿರ ರೂಪಾಯಿ ಆಗಿದೆ. ಹಾಗೇ ಬಿ ಕೆಟಗರಿಯಲ್ಲಿ ಶಾದಾಬ್ ಖಾನ್, ಫಖರ್ ಜಮಾನ್, ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ ಅವರಂತಹ ಆಟಗಾರರು ಇದ್ದಾರೆ. ಇವರು ವಾರ್ಷಿಕ 3 ಮಿಲಿಯನ್ ಪಾಕಿಸ್ತಾನಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅಂದ್ರೆ ಭಾರತೀಯ ರೂಪಾಯಿಯಲ್ಲಿ ಇದು 9 ಲಕ್ಷ ರೂಪಾಯಿ. C ಮತ್ತು D ವರ್ಗಗಳಲ್ಲಿನ ಆಟಗಾರರು ಪಾಕಿಸ್ತಾನಿ ರೂಪಾಯಿ 1.5 ಮಿಲಿಯನ್ ಅಂದ್ರೆ ಇಂಡಿಯನ್ ಕರೆನ್ಸಿ ಪ್ರಕಾರ ಏಳೂವರೆ ಲಕ್ಷ ವೇತನ ಪಡೆಯುತ್ತಾರೆ.

ಒಂದು ಕಾಲದಲ್ಲಿ ಕ್ರಿಕೆಟ್ ಫೀಲ್ಡ್​​ನಲ್ಲಿ ಸ್ಟಾರ್ ಪ್ಲೇಯರ್ಸ್ ಮತ್ತು ಸಾಲು ಸಾಲು ವಿಕ್ಟರಿಗಳನ್ನ ಪಡೀತಿದ್ದ ಪಾಕ್ ತಂಡ ಈಗ ಸೊರಗಿ ಸೋರೇಕಾಯಿಯಂತಾಗಿದೆ. ಈಗಷ್ಟೇ ಕ್ರಿಕೆಟ್​ಗೆ ಕಾಲಿಟ್ಟಿರೋ ಶಿಶುಗಳ ಮುಂದೆಯೇ ಸೋಲೊಪ್ಪಿಕೊಂಡಿದೆ. ಇತ್ತೀಚೆಗೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ತನ್ನದೇ ನೆಲದಲ್ಲಿ ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಮ್ಯಾಚ್​ನಲ್ಲಿ ಕ್ಲೀನ್ ಸ್ವೀಪ್ ಆಗಿ ಮುಖಭಂಗ ಅನುಭವಿಸಿದೆ. ಒಟ್ನಲ್ಲಿ ಪಾಕಿಸ್ತಾನ ದಿವಾಳಿಯಾಗಿ ವರ್ಷಗಳೇ ಕಳೆದಿವೆ. ಜನಸಾಮಾನ್ಯರಿಗೆ ಮೂರೊತ್ತಿನ ಊಟವೂ ಸಿಗ್ತಿಲ್ಲ. ಇಂಥಾ ಪರಿಸ್ಥಿತಿಯಲ್ಲಿ ಅಲ್ಲಿನ ಸ್ಟಾರ್ ಆಟಗಾರರಿಗೂ ಕಡಿಮೆ ವೇತನ ನೀಡ್ತಿರೋದು ಅಚ್ಚರಿಯೇನೂ ಅಲ್ಲ ಬಿಡಿ.

Shwetha M

Leave a Reply

Your email address will not be published. Required fields are marked *