PAK ಟೀಮ್ ಆಪರೇಷನ್ – ಪ್ಲೇಯರ್ಸ್, ಕೋಚ್ ಗೆ ಗೇಟ್ ಪಾಸ್
ತಲೆ ಇಲ್ಲದ್ದು ತಂಡಕ್ಕೋ.. PCBಗೋ?

ಒಂದು ಕಾಲದಲ್ಲಿ ವಿಶ್ವ ಕ್ರಿಕೆಟ್‌ನ ಮೋಸ್ಟ್ unpredictable ಹಾಗೂ dangerous ಟೀಂ ಆಗಿ ಕಾಣ್ತಿದ್ದ ಪಾಕಿಸ್ತಾನ ಫಾಸ್ಟ್ ಬೌಲರ್ಗಳ ಫ್ಯಾಕ್ಟರಿಯೇ ಆಗಿತ್ತು. ವಸೀಮ್ ಅಕ್ರಂ, ವಕಾರ್ ಯೂನಿಸ್, ಶೋಯೆಬ್ ಅಖ್ತರ್, ಮೊಹಮ್ಮದ್ ಅಮೀರ್, ಶಾಹೀನ್ ಅಫ್ರಿದಿ ಜಗತ್ತಿನ ಬಲಿಷ್ಠ ಬ್ಯಾಟರ್ಗಳನ್ನೂ ನಡುಗಿಸುತ್ತಿದ್ರು. ಆದ್ರೆ ಈಗ ಕಾಲ ಬದಲಾಗಿದೆ. ಪಾಕಿಸ್ತಾನ ತಂಡ ಸೋತು ಸೋತು ಸೊರಗಿ ಹೋಗಿದೆ. ಈಗಂತೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮಧ್ಯದಲ್ಲೇ ತಂಡಕ್ಕೆ ಆಪರೇಷನ್ ಮಾಡಿದ್ದಾರೆ. ಆಟಗಾರರ ಜೊತೆ ಕೋಚ್ ಗೂ ಗೇಟ್ ಪಾಸ್ ಸಿಕ್ಕಿದೆ.
ಇದನ್ನೂ ಓದಿ : 26 ಬಾಲ್.. 77 ರನ್ಸ್.. ಸಿಡಿದ ಅಭಿ – T-20I ಡ್ರಾಪ್ ಭೀತಿಗೆ ಬೆಂಕಿಯಾದ್ರಾ?
ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೀತಿದ್ದು ಈಗಾಗ್ಲೇ ಎರಡು ಪಂದ್ಯಗಳು ನಡೆದಿವೆ. ಬ್ಯಾಡ್ಲಕ್ ಅಂದ್ರೆ ಎರಡಕ್ಕೆ ಎರಡೂ ಪಂದ್ಯಗಳನ್ನೂ ಪಾಕಿಸ್ತಾನ ಹೀನಾಯವಾಗಿ ಸೋತಿದೆ. ಹೆಡಿಂಗ್ಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಇನ್ನಿಂಗ್ಸ್ + 103 ರನ್‌ಗಳ ಬಿಗ್ ಮಾರ್ಜಿನ್ನಲ್ಲಿ ಸೋತಿದ್ರು. ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ 194 ರನ್‌ಗಳ ಹೀನಾಯ ಸೋಲು. ಈ ಎರಡೂ ಡೌನ್ಫಾಲ್ ಬಳಿಕ ಪಿಸಿಬಿ ಮೇಜರ್ ಸರ್ಜರಿಗೆ ಮುಂದಾಗಿದೆ. ಮೂರನೇ ಪಂದ್ಯಕ್ಕೂ ಮುನ್ನ ತಂಡವನ್ನೇ ಬದಲಿಸಿದೆ.
7 ಆಟಗಾರರ ಜೊತೆ ಕೋಚ್ & ಸಿಬ್ಬಂದಿಗೂ ಗೇಟ್ ಪಾಸ್!
ಸರಣಿ ಮಧ್ಯದಲ್ಲಿ ಯಾರೋ ಒಬ್ರು ಅಥವಾ ಇಬ್ರು ಆಟಗಾರರನ್ನ ಚೇಂಜ್ ಮಾಡ್ಬೋದು. ಆದ್ರೆ ಅರ್ಧಕ್ಕರ್ಧ ಟೀಮ್ನೇ ಬದಲಿಸೋ ತಂಡ ಅಂತಾ ಇದ್ರೆ ಅದು ಪಾಕಿಸ್ತಾನವೇ ಇರ್ಬೇಕು. ಇಂಗ್ಲೆಂಡ್ ವಿರುದ್ಧ 2 ಟೆಸ್ಟ್ ಮ್ಯಾಚ್ ಸೋಲ್ತಿದ್ದಂತೆ ಮೂರನೇ ಪಂದ್ಯಕ್ಕೂ ಮುನ್ನ 7 ಆಟಗಾರರು ಹಾಗೇ ಹೆಡ್ ಕೋಚ್ ಮತ್ತು ಇಡೀ ಕೋಚಿಂಗ್ ಸ್ಟಾಫ್ಸ್ನೇ ಸಸ್ಪೆಂಡ್ ಮಾಡಲಾಗಿದೆ. ಕಳಪೆ ಪ್ರದರ್ಶನ ನೀಡಿದ ಆಟಗಾರರನ್ನು ಪಾಕ್ಗೆ ವಾಪಸ್ ಕಳಿಸಲಾಗಿದೆ. ಆಟಗಾರರಾದ ಮೊಹಮ್ಮದ್ ರಿಝ್ವಾನ್, ಇಮಾಮ್-ಉಲ್-ಹಕ್, ಸಲ್ಮಾನ್ ಅಲಿ ಅಘಾ, ಅಲಿ ಉಸ್ಮಾನ್, ಅಮೀರ್ ಜಮಾಲ್ಮು, ಹಮ್ಮದ್ ಅವೈಸ್ ಜಫರ್, ಖುರ್ರಮ್ ಶಹಜಾದ್ ಹಾಗೇ ಮುಖ್ಯ ಕೋಚ್ ಸರ್ಫರಾಝ್ ಅಹ್ಮದ್ ಮತ್ತು ಬೌಲಿಂಗ್ ಕೋಚ್ ಉಮರ್ ಗುಲ್ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ. ಸೆಪ್ಟೆಂಬರ್ 9 ರಿಂದ ಎಡ್ಜ್‌ಬಾಸ್ಟನ್‌ನಲ್ಲಿ ಶುರುವಾಗಲಿರೋ ಕೊನೇ ಟೆಸ್ಟ್ ಪಂದ್ಯಕ್ಕೆ ವೈಟ್-ಬಾಲ್ ಕೋಚ್ ಆಗಿರುವ ಮೈಕ್ ಹೆಸನ್ ಅವರಿಗೆ ಟೆಸ್ಟ್ ತಂಡದ ಮುಖ್ಯ ಕೋಚ್ ಜವಾಬ್ದಾರಿಯನ್ನೂ ನೀಡಲಾಗಿದೆ. ಆಸ್ಟ್ರೇಲಿಯಾದ ಮಾಜಿ ವೇಗಿ ಆಶ್ಲೇ ನಾಫ್ಕೆ ನೂತನ ಬೌಲಿಂಗ್ ಕೋಚ್ ಆಗಿದ್ದಾರೆ. ಇನ್ನು ಆಟಗಾರರಾದ ಸೈಮ್ ಅಯೂಬ್, ಅಬ್ದುಲ್ಲಾ ಫಝಲ್, ಅರಾಫತ್ ಮಿನ್ಹಾಸ್, ಸಾದ್ ಬೇಗ್, ಮೊಹಮ್ಮದ್ ಇಮ್ರಾನ್, ರಝಾವುಲ್ಲಾ ಖಾನ್, ಮೊಹಮ್ಮದ್ ಇಮ್ರಾನ್ ಜೂನಿಯರ್ ಇಂಗ್ಲೆಂಡ್ಗೆ ಹಾರಿದ್ದಾರೆ. ಹೀಗೆ ಇಡೀ ತಂಡದ ಬದಲಾವಣೆ ನಡುವೆ ಗಾಯದ ನಾಟಕ ಮಾಡಿದ್ದ ಇಮಾಮ್ ಉಲ್ ಹಕ್ಗೂ ಬಿಸಿ ತಟ್ಟಿದೆ.
ಗಾಯದ ನಾಟಕವಾಡಿದ್ದ ಆರೋಪದಲ್ಲಿ ಇಮಾಮ್ ವಿರುದ್ಧ ತನಿಖೆ!
ಪಾಕಿಸ್ತಾನ ಕ್ರಿಕೆಟ್ ಯಾಕೆ ಆ ಮಟ್ಟಿಗೆ ಟ್ರೋಲ್ ಆಗುತ್ತೆ ಅನ್ನೋದು ಇದೂ ಕೂಡ ಒನ್ ಆಫ್ ದಿ ರೀಸನ್ ನೋಡಿ. ಲಾರ್ಡ್ಸ್‌ನಲ್ಲಿ ನಡೆದಿದ್ದ 2ನೇ ಮ್ಯಾಚಲ್ಲಿ ಇಂಗ್ಲೆಂಡ್ ಫಾಸ್ಟ್ ಬೌಲರ್ಗಳಿಂದ ಬರ್ತಿದ್ದ ಸುನಾಮಿ ಬಾಲ್ಗಳಿಗೆ ಬೆದರಿ ಪಾಕಿಸ್ತಾನದ ಬ್ಯಾಟರ್ ಇಮಾಮ್-ಉಲ್-ಹಕ್ ಇಂಜುರಿ ನಾಟಕ ಆಡಿ ರಿಟೈರ್ಡ್ ಹರ್ಟ್ ಆಗಿದ್ರು ಅನ್ನೋ ಆರೋಪಗಳು ಕೇಳಿ ಬಂದಿತ್ತು. ಲಾರ್ಡ್ಸ್ ಪಂದ್ಯದ ಮೊದಲ ದಿನವೇ ಫೀಲ್ಡಿಂಗ್ ಮಾಡುವಾಗ ಎಡಗಾಲಿನಲ್ಲಿ ನೋವಿದೆ ಅಂತಾ ಮೈದಾನ ತೊರೆದಿದ್ರು. ಈ ವೇಳೆ ಸ್ಕ್ಯಾನ್‌ಗೆ ಒಳಪಡಿಸಿದಾಗ ಗಾಯ ಅಷ್ಟು ಗಂಭೀರವಾಗಿಲ್ಲ ಎಂದು ವರದಿ ಬಂದಿತ್ತು. ಆದರೆ ಗಾಯದ ನೆಪ ಹೇಳಿ ಇಮಾಮ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಲಿಲ್ಲ. ಇದೂ ಕೂಡ ತಂಡದ ಹೀನಾಯ ಸೋಲಿಗೆ ಕಾರಣ ಆಗಿತ್ತು. ಅದೂ ಅಲ್ದೇ 2025ರಲ್ಲೂ ಇದೇ ಇಮಾಮ್ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಕಾಲ್ಬೆರಳಿನಲ್ಲಿ ನೋವಿದೆ ಅಂದಿದ್ರು. ಬಟ್ ಎಕ್ಸ್-ರೇನಲ್ಲಿ ಇಮಾಮ್ ಕಾಲ್ಬೆರಳಿನಲ್ಲಿ ಯಾವುದೇ ಮುರಿತ ಅಥವಾ ಗಾಯವಾಗಿರಲಿಲ್ಲ. ಅದೆಲ್ಲಕ್ಕಿಂತ ಮುಖ್ಯವಾಗಿ ಕಾಲ್ಬೆರಳಿನಲ್ಲಿ ಕಾಣಿಸಿದ್ದು ನಿಜವಾದ ರಕ್ತವೇ ಆಗಿರಲಿಲ್ಲ. ಬದಲಾಗಿ ಪೆನ್ನಿನಿಂದ ಮಾಡಿದ್ದ ಮಾರ್ಕ್ ಅನ್ನೋದು ವೈದ್ಯರ ರಿಪೋರ್ಟ್ ನಲ್ಲಿ ಗೊತ್ತಾಗಿತ್ತು. ಅಷ್ಟೇ ಅಲ್ಲದೆ ಇಮಾಮ್ ಕ್ಯಾಮೆರಾ ಮುಂದೆ ಮಾತ್ರ ಕುಂಟುವ ನಾಟಕ ಆಡಿ ಉಳಿದೆಲ್ಲಾ ಟೈಮಲ್ಲಿ ಸರಿಯಾಗೇ ನಡೆಯುತ್ತಿದ್ದದ್ದು ಕೂಡ ಬಯಲಾಗಿತ್ತು. ಹೀಗಾಗಿ ಇಮಾಮ್ ವಿಚಾರವಾಗಿ ಪಿಸಿಬಿಗೆ ಪದೇಪದೆ ಮುಖಭಂಗವಾಗ್ತಿದೆ. ಈ ಸಲ ಇಮಾಮ್ ನಿಜವಾಗಿಯೂ ಗಾಯಗೊಂಡಿದ್ರಾ ಅಥವಾ ಮತ್ತೆ ಡ್ರಾಮಾ ಮಾಡಿದ್ದಾರಾ ಅನ್ನೋದ್ರ ಬಗ್ಗೆ ತನಿಖೆ ಮಾಡೋಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಂದಾಗಿದ್ದು, ಇಂಗ್ಲೆಂಡ್ನಿಂದ ಕೂಡಲೇ ಪಾಕಿಸ್ತಾನಕ್ಕೆ ತೆರಳುವಂತೆ ಆದೇಶ ನೀಡಲಾಗಿದೆ. ಇಂಗ್ಲೆಂಡ್ ವಿರುದ್ಧ ಸರಣಿಯನ್ನೇನೋ ಪಾಕಿಸ್ತಾನ ಆಲ್ರೆಡಿ ಸೋತಾಗಿದೆ. ಅಟ್ಲೀಸ್ಟ್ ವೈಟ್ವಾಶ್ನಿಂದನಾದ್ರೂ ತಪ್ಪಿಸಿಕೊಳ್ಳೋಣ ಅಂತಾ ಮೂರನೇ ಪಂದ್ಯಕ್ಕೂ ಮುನ್ನ ಅರ್ಧ ತಂಡವನ್ನೇ ಬದಲಿಸೋಕೆ ಮುಂದಾಗಿದ್ದಾರೆ. ಆದ್ರೆ ಏನೇ ಬದಲಾವಣೆ ತಂದ್ರೂ ಮೂರನೇ ಪಂದ್ಯವನ್ನೂ ಪಾಕಿಸ್ತಾನ ಗೆಲ್ಲೋದು ಕನಸಿನ ಮಾತೇ ಸರಿ.

ನೋಡಿರಿ

