PCB ಬ್ಯಾಡ್ ಟೈಂ ಸ್ಟಾರ್ಟ್ – ಶೇಕ್ ಹ್ಯಾಂಡ್ ಮಾಡದೇ ಶೇಕ್ ಶೇಕ್
ICC ನೋಟಿಸ್.. ಉಲ್ಲಂಘನೆಗೆ ಶಿಕ್ಷೆ ಏನು?

PCB ಬ್ಯಾಡ್ ಟೈಂ ಸ್ಟಾರ್ಟ್ – ಶೇಕ್ ಹ್ಯಾಂಡ್ ಮಾಡದೇ ಶೇಕ್ ಶೇಕ್ICC ನೋಟಿಸ್.. ಉಲ್ಲಂಘನೆಗೆ ಶಿಕ್ಷೆ ಏನು?

ಏಷ್ಯಾಕಪ್ ಟೂರ್ನಿ​ಯಲ್ಲಿ ಆನ್​ ಫೀಲ್ಡ್​ನಲ್ಲಿ ಆಡಿದ್ದಕ್ಕಿಂತ ಜಾಸ್ತಿ ಆಫ್ ದಿ ಫೀಲ್ಡ್ ಕಿರಿಕ್​ಗಳಿಂದಲೇ ಪಾಕಿಸ್ತಾನ ಸುದ್ದಿಯಲ್ಲಿದೆ. ಭಾರತ ವಿರುದ್ಧದ ಪಂದ್ಯದಲ್ಲಿ ಸೋತು ಅವಮಾನಕ್ಕೊಳಗಾಗಿದ್ದ ಪಾಕ್ ತಂಡ ಆ ಬಳಿಕ ಯುಎಇ ವಿರುದ್ಧದ ಮ್ಯಾಚಲ್ಲಿ ಹೈಡ್ರಾಮಾವನ್ನೇ ಮಾಡಿತ್ತು. ಟೂರ್ನಿಯನ್ನ ಬಹಿಷ್ಕಾರ ಮಾಡ್ತೇವೆ ಅಂತೆಲ್ಲಾ ಬ್ಲ್ಯಾಕ್ ಮೇಲ್ ಮಾಡಿದ್ರು. ಪಂದ್ಯದ ಆರಂಭಕ್ಕೆ ಟೈಂ ಆದ್ರೂ ಗ್ರೌಂಡ್​ನಲ್ಲಿ ಸುಳಿವೇ ಇರ್ಲಿಲ್ಲ. ಐಸಿಸಿಗೆ ಕಂಪ್ಲೇಂಟ್ ಮಾಡೋದ್ರಲ್ಲೇ ಬ್ಯುಸಿ ಆಗೋಗಿತ್ತು. ಈಗ ಅದೆಲ್ಲವಕ್ಕೂ ಫೈನ್ ಕಟ್ಟೋ ಟೈಂ ಬಂದಿದೆ. ಐಸಿಸಿ ಕೊಟ್ಟಿರೋ ಡೋಸ್​ಗೆ ಪಿಸಿಬಿ ತಲೆಯೇ ತಿರುಗಿದೆ.

ಇದನ್ನೂ ಓದಿ : 3000 ವರ್ಷ ಹಳೆಯ ಚಿನ್ನದ ಬಳೆ ನಾಪತ್ತೆ! – ಬೆಲೆ ಕಟ್ಟಲಾಗದ ಈ ಬಳೆಯನ್ನು ಕದ್ದವರು ಯಾರು?

ರೂಲ್ಸ್ ಬ್ರೇಕ್ ಮಾಡಿದ ಪಿಸಿಬಿಗೆ ಐಸಿಸಿ ಶಾಕ್!

ಮೆನ್ ಇನ್ ಗ್ರೀನ್ ತಂಡ ಶೇಕ್ ಹ್ಯಾಂಡ್ ವಿವಾದವನ್ನ ಮೈದಾನದಲ್ಲೇ ಬಿಟ್ಟಿದಿದ್ರೆ ಏನೂ ಆಗ್ತಿರಲಿಲ್ಲ. ಅದನ್ನ ಐಸಿಸಿವರೆಗೂ ಕೊಂಡೊಯ್ದು ತಾನೇ ತಗ್ಲಾಕ್ಕೊಂಡಿದೆ. ಭಾನುವಾರ ನಡೆದ ಭಾರತ-ಪಾಕಿಸ್ತಾನ ಪಂದ್ಯದ ತೀರ್ಪುಗಾರರಾಗಿದ್ದ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಹಾಗೂ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ, ಕೋಚ್ ಮೈಕ್ ಹೆಸ್ಸನ್ ಹಾಗೂ ತಂಡದ ವ್ಯವಸ್ಥಾಪಕ ನವೀದ್ ಅಕ್ರಮ್ ಚೀಮಾ ನಡುವೆ ಐಸಿಸಿ ಸಭೆ ಏರ್ಪಡಿಸಿತ್ತು. ಈ ವೇಳೆ ಸಭೆಯ ದೃಶ್ಯಗಳನ್ನ ರೆಕಾರ್ಡ್ ಮಾಡದಂತೆ ಹೇಳಿದ್ದರೂ ಪಿಸಿಬಿ ಅದನ್ನು ರೆಕಾರ್ಡ್ ಮಾಡಿದೆ. ಹಾಗೇ ಪಾಕಿಸ್ತಾನಿ ಮಂಡಳಿಯು ಸುದ್ದಿ ಸಂಸ್ಥೆಗಳಿಗೆ ದೃಶ್ಯಗಳನ್ನ ಬಿಡುಗಡೆ ಮಾಡಿದೆ. ಹೀಗಾಗಿ ಪಿಸಿಬಿ ತನ್ನ ನಿರ್ಧಾರವನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ ಎಂದು ಐಸಿಸಿ ಗರಂ ಆಗಿದೆ. ಈ ಬಗ್ಗೆ ಐಸಿಸಿ ಸಿಇಒ ಸಂಜೋಗ್ ಗುಪ್ತಾ ಅವರು ಪಿಸಿಬಿಯಿಂದ ಸ್ಪಷ್ಟೀಕರಣ ಕೋರಿದ್ದಾರೆ ಮತ್ತು ನಿಯಮಗಳ ಸ್ಪಷ್ಟ ಉಲ್ಲಂಘನೆಗಳಿಗಾಗಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಮೇಲ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಬಾಯ್ಕಾಟ್ ಬೆದರಿಕೆ.. 140 ಕೋಟಿ ಲಾಸ್ ಎನ್ನುತ್ತಿದ್ದಂತೆ ಗಪ್ ಚುಪ್!

ಮತ್ತೊಂದೆಡೆ ದುಬೈನಲ್ಲಿ ಪಾಕಿಸ್ತಾನ-ಯುಎಇ ನಡುವಿನ ಪಂದ್ಯಕ್ಕೂ ಮೊದಲು ಮ್ಯಾಚ್ ರೆಫರಿ ಌಂಡಿ ಪೈಕ್ರಾಪ್ಟ್ ಅವ್ರನ್ನ ಸಸ್ಪೆಂಡ್ ಮಾಡಿ ಎಂದು ಐಸಿಸಿಗೆ ಪಾಕಿಸ್ತಾನ ದುಂಬಾಲು ಬಿದ್ದಿತ್ತು. ಒಂದ್ವೇಳೆ ರೆಫ್ರಿ ಸಸ್ಪೆಂಡ್ ಮಾಡದಿದ್ರೆ, ನಾವು ಯುಎಇ ಎದುರು ಮ್ಯಾಚ್ ಬಾಯ್ಕಾಟ್ ಮಾಡ್ತೀವಿ ಅಂತ ಪಾಕ್ ಬೆದರಿಸಿತ್ತು. ಸತತ ಎರಡನೇ ಬಾರಿ ಮ್ಯಾಚ್‌ ರೆಫ್ರಿಯನ್ನು ವಜಾಗೊಳಿಸಬೇಕು ಎಂದು ಐಸಿಸಿಗೆ ಪತ್ರಬರೆದಿತ್ತು. ಬಟ್ ಪಾಕ್‌ ಮನವಿಗೆ ಐಸಿಸಿ ಕ್ಯಾರೇ ಅಂದಿರಲಿಲ್ಲ. ಇದ್ರಿಂದ ಗಲಿಬಿಲಿಗೊಂಡ ಪಿಸಿಬಿ ವಜಾ ಮಾಡ್ದಿದ್ರೂ ಪರ್ವಾಗಿಲ್ಲ ಅಟ್​ಲೀಸ್ಟ್ ತಮ್ಮ ಮ್ಯಾಚ್ ಮಟ್ಟಿಗಾದರೂ ಮ್ಯಾಚ್ ರೆಫ್ರಿಯನ್ನು ಬದಲಿಸಿ ಅಂತಾ ಕೇಳ್ಕೊಂಡಿತ್ತು. ಈ ಬೇಡಿಕೆಗೂ ಐಸಿಸಿ ಸೊಪ್ಪು ಹಾಕಿಲ್ಲ. ಆಯ್ತು ಟೂರ್ನಿ ಬಹಿಷ್ಕಾರ ಮಾಡೋ ಹಂಗಿದ್ರೆ ಮಾಡಿ ಇದ್ರಿಂದ ನಿಮಗೆ ಸುಮಾರು 140 ಕೋಟಿ ರುಪಾಯಿ ನಷ್ಟವಾಗಬಹುದು ಅಂತಾ ಐಸಿಸಿ ಪಾಕ್‌ಗೆ ವಾರ್ನಿಂಗ್ ಕೊಟ್ಟಿತ್ತು. ಅಷ್ಟೇ  ಮ್ಯಾಚ್ ರೆಫರಿ ಯಾರಾದ್ರೂ ಇರ್ಲಿ ನಮ್ಗೇನ್ ಪ್ರಾಬ್ಲಂ ಇಲ್ಲ ಅಂತಾ ಕೊನೆಗೆ ಯುಎಇ ವಿರುದ್ಧದ ಪಂದ್ಯಕ್ಕೆ ಆಗಮಿಸಿತ್ತು. 1 ಗಂಟೆ ಲೇಟಾಗಿ ಮ್ಯಾಚ್ ಸ್ಟಾರ್ಟ್ ಆಗಿತ್ತು. ಇದನ್ನೂ ಕೂಡ ಐಸಿಸಿ ಗಂಭೀರವಾಗಿ ಪರಿಗಣಿಸಿದೆ.

ಶೇಕ್ ಹ್ಯಾಂಡ್ ವಿವಾದದ ಹಿಂದಿದ್ಯಾ ಪಾಕ್ ಪಿತೂರಿ?

ಸೆಪ್ಟೆಂಬರ್ 14ರಂದು ಭಾರತ ವರ್ಸಸ್ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತೀಯರು ಆಟಗಾರರು ಶೇಕ್ ಹ್ಯಾಂಡ್ ಮಾಡಲು ನಿರಾಕರಿಸಿದ್ರು. ಇದಕ್ಕೆಲ್ಲಾ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಕಾರಣ ಅಂತಾ ಪಾಕ್ ಆರೋಪಿಸಿತ್ತು. ಹಾಗೇ ಅವ್ರನ್ನ ವಜಾಗೊಳಿಸುವಂತೆ ಐಸಿಸಿಗೆ ಪತ್ರಗಳನ್ನೂ ಬರೆದಿತ್ತು. ಆದ್ರೀಗ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್​ಗೆ ಕೈಕುಲುಕದಂತೆ ನಾಯಕರಿಗೆ ಹೇಳುವಂತೆ ಸ್ವತಃ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಆದೇಶಿಸಿತ್ತು ಎನ್ನಲಾಗಿದೆ. ಇಂಟ್ರೆಸ್ಟಿಂಗ್ ಅಂದ್ರೆ ಎಸಿಸಿಯ ಅಧ್ಯಕ್ಷರಾಗಿರುವುದೇ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರೇ. ಒಂದು ವೇಳೆ ಎಸಿಸಿಯೇ ಈ ಆದೇಶ ಹೊರಡಿಸಿದ್ರೆ, ಮೊಹ್ಸಿನ್ ನಖ್ವಿ ಅವರೇ ಇದಕ್ಕೆಲ್ಲ ನೇರ ಹೊಣೆಗಾರರಾಗಿದ್ದಾರೆ. ಸೋ ಅಲ್ಲಿಗೆ ಹ್ಯಾಂಡ್‌ಶೇಕ್‌ ವಿವಾದ ಹುಟ್ಟಿಕೊಳ್ಳೋಕೆ ಮುಖ್ಯ ಕಾರಣವೇ ಪಾಕಿಸ್ತಾನ ಎನ್ನುವಂತಾಗುತ್ತೆ.

Shantha Kumari