Top 2 ಪಟ್ಟಕ್ಕೆ MI Vs PBKS ಫೈಟ್ ಲೀಗ್ ಹಂತದಲ್ಲೇ ರೋಚಕ ಸೆಣಸಾಟ
ಕ್ವಾಲಿಫೈಯರ್‌ಗೆ ಯಾರಿಗೆಲ್ಲಾ ಚಾನ್ಸ್?

Top 2 ಪಟ್ಟಕ್ಕೆ MI Vs PBKS ಫೈಟ್  ಲೀಗ್ ಹಂತದಲ್ಲೇ ರೋಚಕ ಸೆಣಸಾಟಕ್ವಾಲಿಫೈಯರ್‌ಗೆ ಯಾರಿಗೆಲ್ಲಾ ಚಾನ್ಸ್?

ಇಂದು ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಅಖಾಡದಲ್ಲಿ ತೊಡೆ ತಟ್ಟಿ ಕಾದಾಟ ನಡೆಸಲಿವೆ.  ಎರಡೂ ತಂಡಗಳಿಗೆ ಈ ಪಂದ್ಯ ತುಂಬಾ ಮುಖ್ಯ. ಶನಿವಾರ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ಪಂಜಾಬ್‌ ಕಿಂಗ್ಸ್ ತಂಡವು ಇದೀಗ ಎಂಐ ವಿರುದ್ಧ ಗೆದ್ದರಷ್ಟೇ ಲೀಗ್ ಹಂತದಲ್ಲಿ ಅಗ್ರ ಎರಡು ಸ್ಥಾನಕ್ಕೆ ಎಂಟ್ರಿ ಕೊಡಲಿದೆ. ಗುಜರಾತ್ ಟೈಟಾನ್ಸ್ ವಿರುದ್ದದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆದ್ದ ನಂತರ, ಅಗ್ರ ನಾಲ್ಕು ತಂಡಗಳಿಗೂ ಟಾಪ್ 2 ಒಳಗೆ ಸ್ಥಾನ ಪಡೆಯುವ ಅವಕಾಶ ಕೊಟ್ಟಿದೆ. ಹೀಗಾಗಿ ಮುಂಬೈ ಕೂಡಾ ಗೆದ್ದರೆ ಅಗ್ರ ಎರಡರಲ್ಲಿ ಒಂದು ಸ್ಥಾನ ಪಡೆಯಲಿದೆ. ಇಂದು ಯಾವ ತಂಡ ಗೆಲ್ಲುತ್ತೆ ಆ ತಂಡ ಕ್ವಾಲಿಫೈಯರ್ ಪಂದ್ಯಕ್ಕೆ ಎಂಟ್ರಿ ಕೊಡಲಿದೆ.

ಸಣ್ಣ ಪುಟ್ಟ ಸಮಸ್ಯೆಯಿಂದಾಗಿ ಡಿಸಿ ವಿರುದ್ಧದ ಪಂದ್ಯದಲ್ಲಿ ಯುಜೇಂದ್ರ ಚಾಹಲ್ ಆಡಿರಲಿಲ್ಲ ಎಂದು ಸ್ಪಿನ್ ಕೋಚ್ ಸುನಿಲ್ ಜೋಶಿ ಹೇಳಿದ್ದರು. ಆದರೆ, ಮಣಿಕಟ್ಟಿನ ಗಾಯದಿಂದಾಗಿ ಮುಂಬೈ ವಿರುದ್ಧದ ಪಂದ್ಯದಿಂದಲೂ ಅವರು ಹೊರಗುಳಿಯುವ ಸಾಧ್ಯತೆ ಇದೆ ಅನ್ನೋ ಮಾತು ಕೇಳಿ ಬರ್ತಿದೆ. ಒಂದು ವೇಳೆ ಚಾಹಲ್ ಇವತ್ತು ಆಡಿಲ್ಲ ಅಂದ್ರೆ ಪಂಜಾಬ್‌ಗೆ  ಮೈನೆಸ್ ಆಗಲಿದೆ.

ಹಾಗೇ ಪಂಜಾಬ್ ಹಾಗೂ ಮುಂಬೈ ನಡುವಿನ ಪಂದ್ಯವು ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನ ನಡೆಯಲಿದೆ. ಇಲ್ಲಿ ನಡೆದ ಕಳೆದ ಎಂಟು ಪಂದ್ಯಗಳಲ್ಲಿ, ಏಳು ಬಾರಿ 200ಕ್ಕೂ ಹೆಚ್ಚು ರನ್ ಹರಿದು ಬಂದಿದೆ. ಕೊನೆಯ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಡೆಲ್ಲಿ ಚೇಸಿಂಗ್ ಮಾಡಿ ಗೆದ್ದಂತೆ, ರಾತ್ರಿ ಪಂದ್ಯದಲ್ಲಿ ಚೇಸಿಂಗ್ ಮಾಡುವುದು ತಂಡಗಳಿಗೆ ಪ್ಲೇಸ್ ಆಗಲಿದೆ. ಇಬ್ಬನಿ ಬರುವುದರಿಂದ ಚೇಸಿಂಗ್ ತುಸು ಸುಲಭವಾಗಲಿದೆ. ಪಂದ್ಯದ ಸಮಯವಾದ ಸಂಜೆ 7ರಿಂದ ರಾತ್ರಿ 11 ಗಂಟೆಯವರೆಗೆ ಜೈಪುರದಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ.   ಇಲ್ಲಿಯವರೆಗೆ ಎರಡೂ ತಂಡಗಳ ನಡುವೆ ನಡೆದಿರುವ 32 ಪಂದ್ಯಗಳಲ್ಲಿ ಮುಂಬೈ 17 ಪಂದ್ಯಗಳಲ್ಲಿ ಗೆದ್ದಿದ್ದರೆ, ಪಂಜಾಬ್ 15 ಪಂದ್ಯಗಳಲ್ಲಿ ಗೆದ್ದಿದೆ. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಎರಡು ತಂಡಗಳ ಪ್ರದರ್ಶನ ಕಳಪೆಯಾಗಿದೆ. ಮುಂಬೈ ಇಲ್ಲಿ ಒಂಬತ್ತು ಪಂದ್ಯಗಳಲ್ಲಿ ಕೇವಲ ಮೂರರಲ್ಲಿ ಗೆದ್ದಿದ್ದರೆ, ಪಿಬಿಕೆಎಸ್ ತಂಡ ಆಡಿದ ಎಂಟು ಪಂದ್ಯಗಳಲ್ಲಿ ಗೆಲುವಿನ ಸಂಖ್ಯೆ ಕೇವಲ ಎರಡು ಮಾತ್ರ. ಹೀಗಾಗಿ ಎರಡು ತಂಡಕ್ಕೆ ಪಿಚ್ ಕಷ್ಟವೇ ಆಗಿದೆ

ಪಂಜಾಬ್ ತಂಡಕ್ಕೆ ಸ್ಫೋಟಕ ಆಟಗಾರರೇ ಬಲ

ಪಂಜಾಬ್ ತಂಡಕ್ಕೆ ಸ್ಫೋಟಕ ಆಟಗಾರರೇ ಬಲವಿದೆ. ಆರಂಭಿಕ ಆಟಗಾರರಾದ ಪ್ರಬ್‌ಸಿಮ್ರಾನ್ ಸಿಂಗ್  ಮತ್ತು ಪ್ರಿಯಾಂಶ್ ಆರ್ಯ ಈ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ನಾಯಕ ಶ್ರೇಯಸ್ ಅಯ್ಯರ್ ಮುಂಬೈ ವಿರುದ್ಧದ ಪಂದ್ಯದಲ್ಲಿ ತಂಡಕ್ಕೆ ಪ್ರಮುಖ ಅಸ್ತ್ರವಾಗಲಿದ್ದಾರೆ. ಎಂಐ ಬೌಲರ್‌ಗಳ ವಿರುದ್ಧ ಇವರ ದಾಖಲೆ ಉತ್ತಮವಾಗಿದೆ. ಬುಮ್ರಾ ಮತ್ತು  ಬೌಲ್ಟ್ ವಿರುದ್ಧ ಅಯ್ಯರ್ 64ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.   ದೀಪಕ್ ಚಹರ್ ಮತ್ತು ಕರ್ಣ್ ಶರ್ಮಾ ಈವರೆಗೂ ಅಯ್ಯರ್ ಅವರನ್ನು ಔಟ್ ಮಾಡಿಲ್ಲ. ಇವರ ಬೌಲಿಂಗ್‌ನಲ್ಲಿ ಕ್ರಮವಾಗಿ 136 ಮತ್ತು 158ರ ಸ್ಟೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಮಿಚೆಲ್ ಸ್ಯಾಂಟ್ನರ್‌ ಎಂಟು ಇನ್ನಿಂಗ್ಸ್‌ಗಳಲ್ಲಿ ಒಮ್ಮೆ ಮಾತ್ರ ಔಟ್ ಮಾಡಿದ್ದಾರೆ.

ಮುಂಬೈನಲ್ಲಿದ್ದಾರೆ ಮಿಂಚಿನ ಆಟಗಾರರು  

ಮುಂಬೈ ತಂಡದ ಪ್ರಮುಖ ವೇಗಿ ಜಸ್ಟ್ರೀತ್ ಬುಮ್ರಾ ಪಿಬಿಕೆಎಸ್ ವಿರುದ್ಧ 16 ಪಂದ್ಯಗಳಲ್ಲಿ 23 ವಿಕೆಟ್ ಕಬಳಿಸಿದ್ದಾರೆ. ಕೇವಲ 6.3ರ ಎಕಾನಮಿ ಹಾಗೂ 15.8ರ ಸ್ಟೈಕ್ ರೇಟ್‌ನಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಔಟ್ ಮಾಡಿರುವ ಸೊನ್ನಿಸ್, ಪಂಜಾಬ್ ತಂಡಕ್ಕೆ ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್‌ನಲ್ಲೂ ಅಸ್ತ್ರವಾಗಬಹುದು. ಮುಂಬೈನ ಅತ್ಯಂತ ಯಶಸ್ವಿ ಬ್ಯಾಟ‌ರ್ ಸೂರ್ಯಕುಮಾರ್ ಯಾದವ್ ಕೂಡ ಟಿ20 ಪಂದ್ಯಗಳಲ್ಲಿ ಎರಡು ಬಾರಿ ಸ್ಟೋಯ್ದಿಸ್ ಬೌಲಿಂಗ್‌ಗೆ ಬಲಿಯಾಗಿದ್ದಾರೆ. ಆದರೂ ಇಬ್ಬರ ಸ್ಟೈಕ್ ರೇಟ್ ಉತ್ತಮವಾಗಿದೆ. ಇಲ್ಲಿ ಎರಡು ತಂಡ ಚೆನ್ನಾಗಿದ್ದು, ದೊಡ್ಡ ಮಟ್ಟದಲ್ಲಿ ಕ್ವಾಲಿಫೈಟರ್‌ಗೆ ಎಂಟ್ರಿ ಕೊಡುವುದ್ದಕ್ಕೆ ಪೈಪೋಟಿ ನಡೆಯಲಿದೆ.

Kishor KV