ಗೆಲ್ಲೋ ಮ್ಯಾಚ್ ಕೈ ಚೆಲ್ಲಿದ ಗಿಲ್ – ಸಿರಾಜ್ & ಕೃಷ್ಣಗಿಂತ ಬೌಲರ್ ಬೇಕಾ?
ಪ್ರೆಶರ್ ಹ್ಯಾಂಡಲ್ ನಲ್ಲಿ ಫೇಲ್ ಆದ್ರಾ?

ಗುಜರಾತ್ ವರ್ಸಸ್ ಪಂಜಾಬ್ ನಡುವಿನ ಮ್ಯಾಚ್ ನಲ್ಲಿ ಪಂಜಾಬ್ ಗೆದ್ದಿದೆ. ಬಟ್ ಗುಜರಾತ್ ನಾಯಕ ಶುಭಮನ್ ಗಿಲ್ ಗೆಲ್ಲೋ ಮ್ಯಾಚ್ ನ ತಮ್ಮದೇ ನಿರ್ಧಾರಗಳಿಂದ ಸೋಲಿಸಿದ್ದಾರೆ. ಅನುಭವಿ ಬೌಲರ್ಸ್ ಇದ್ರೂ ಬಳಸಿಕೊಳ್ಳದೆ ಕ್ಯಾಪ್ಟನ್ಸಿ ವೀಕ್ ನೆಸ್ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ : ಗುಜರಾತ್ ಟೈಟಾನ್ಸ್‌ಗೆ ಪಂಚ್ ಕೊಟ್ಟ ಪಂಜಾಬ್ ಕಿಂಗ್ಸ್ – ರೋಚಕ ಪಂದ್ಯ ಗೆದ್ದ ಶ್ರೇಯಸ್ ಪಡೆ
ಐಪಿಎಲ್ 19ನೇ ಆವೃತ್ತಿಯ ನಾಲ್ಕನೇ ಮ್ಯಾಚ್ ನಲ್ಲೂ ಚೇಸಿಂಗ್ ಟೀಂ ವಿನ್ ಆಗಿದೆ. ಮೊದಲ ಮೂರೂ ಪಂದ್ಯಗಳಲ್ಲಿ ಚೇಸಿಂಗ್ ಟೀಂ ಡಾಮಿನೇಷನ್ ಮಾಡಿ ಗೆದ್ದಿತ್ತು. ಬಟ್ ನಾಲ್ಕನೇ ಮ್ಯಾಚ್ ನಲ್ಲಿ ಡಿಫೆನ್ಸ್ ಮಾಡಿಕೊಳ್ಳೋ ಚಾನ್ಸ್ ಇದ್ರೂ ಗುಜರಾತ್ ನಾಯಕ ಬಳಸಿಕೊಳ್ಳಲಿಲ್ಲ. ಮೊದ್ಲಿಗೆ ಪಂದ್ಯದ ಹೈಲೇಟ್ಸ್ ನೋಡೋಣ. ಟಾಸ್ ಗೆದ್ದಂತ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಫಸ್ಟ್ ಬೌಲಿಂಗ್ ಚೂಸ್ ಮಾಡಿಕೊಳ್ತಾರೆ. ಸಾಯಿ ಸುದರ್ಶನ್ ಮತ್ತು ಶುಭ್ಮನ್ ಗಿಲ್ ಗುಜರಾತ್ ಪರ ಇನ್ನಿಂಗ್ಸ್ ಓಪನ್ ಮಾಡ್ತಾರೆ. ಬಟ್ ಗಿಲ್ 39 ರನ್ ಗಳಿಸಿದ್ದು ಬಿಟ್ರೆ ಉಳಿದ ಯಾವ ಬ್ಯಾಟರ್ಸ್ ಕೂಡ ಬಿನ್ ಇನ್ನಿಂಗ್ಸ್ ಬರ್ಲಿಲ್ಲ. ಸೋ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 162 ರನ್ಗಳಿಸಲಷ್ಟೇ ಸಾಧ್ಯ ಆಯ್ತು. ಇನ್ನು ಟಾರ್ಗೆಟ್ ನೋಡಿದಾಗ ಈಸಿ ಅನ್ಸಿದ್ರೂ ಪಂಜಾಬ್ಗೂ ಒಳ್ಳೆ ಓಪನಿಂಗ್ ಸಿಕ್ಕಿರಲಿಲ್ಲ. ಆದ್ರೆ ಕೂಪರ್ ಕೊನೊಲಿ ಮತ್ತು ಶ್ರೇಯಸ್ ಅಯ್ಯರ್ ಜೊತೆಯಾದ ಮೇಲೆ ಪಂಜಾಬ್ ಒನ್ ಸೈಡೆಡ್ ಆಗಿ ಗೆಲ್ಲೋ ಥರ ಕಾಣ್ತಿತ್ತು. ಬಟ್ ಮಿಡ್ಲಲ್ಲಿ ತುಂಬಾನೇ ಸ್ಟ್ರಗಲ್ ಪಟ್ಟು ಸೋಲೋ ಆತಂಕವೂ ಶುರುವಾಗಿತ್ತು. ಅಂತಿಮವಾಗಿ ಕೂಪರ್ ಕೊನೊಲಿ 44 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 72 ರನ್ ಬಾರಿಸಿ ಅಜೇಯರಾಗಿ ಉಳಿದ್ರು. 19.1 ಓವರ್ಗಳಲ್ಲಿ ಗುರಿ ತಲುಪಿ 3 ವಿಕೆಟ್ಗಳ ರೋಚಕ ಗೆಲುವು ಸಾಧಿಸಿದ್ರು. ಇಬ್ಬರಿಗೂ ವಿನ್ನಿಂಗ್ ಚಾನ್ಸಸ್ ಇದ್ದ ಈ ಮ್ಯಾಚ್ನ ಟರ್ನಿಂಗ್ ಮೊಮೆಂಟ್ಸ್ ಬಗ್ಗೆ ನೋಡೋಣ.
ಮ್ಯಾಚ್ ಟರ್ನ್ ಆಗಿದ್ದೆಲ್ಲಿ?
ಟಾಸ್ ಸೋತ್ರೂ ಗುಜರಾಯ್ ಬ್ಯಾಟರ್ಸ್ 40ರ ಒಳಗೆ ಔಟ್
162 ರನ್ಸ್ ಡಿಫೆನ್ಸ್ ಮಾಡಿಕೊಳ್ಳೋ ಚಾನ್ಸ್ ಇದ್ರೂ ಮಿಸ್ಟೇಕ್ಸ್
ಪಂಜಾಬ್ ಓಪನರ್ಸ್ ಬೇಗ ಔಟ್ ಆದ್ರೂ ಗಿಲ್ ಕೇರ್ ಲೆಸ್
ಶ್ರೇಯಸ್ ಅಯ್ಯರ್ ಇಂಜುರಿ ವೇಳೆ ಮೊಮೆಂಟಮ್ ಚೇಂಜ್
ಪವರ್ ಪ್ಲೇ 12 ಬಾಲ್ 15 ರನ್ ನೀಡಿದ್ದ ಸಿರಾಜ್ ಗಿಲ್ಲ ಬಾಲ್
ಅನುಭವಿ ಪ್ರಸಿದ್ಧ ಕೃಷ್ಣಗೆ 13 ನೇ ಓವರ್ ಬೌಲಿಂಗ್ ಅವಕಾಶ
ನಾಯಕನಾಗಿ ಪ್ರೆಶರ್ ಹ್ಯಾಂಡಲ್ ಮಾಡದ ಗಿಲ್ ಸೋಲು

ನೋಡಿರಿ

