ಧೋನಿ ಪ್ರಯೋಗ ಫೇಲ್‌! – ಪ್ಲೇಆಫ್‌ ಚೆನ್ನೈಗೂ ಕಷ್ಟ???
ಅಪಾಯ ಎದುರಾಗಿದ್ದು ಎಲ್ಲಿ?

ಧೋನಿ ಪ್ರಯೋಗ ಫೇಲ್‌! – ಪ್ಲೇಆಫ್‌ ಚೆನ್ನೈಗೂ ಕಷ್ಟ???ಅಪಾಯ ಎದುರಾಗಿದ್ದು ಎಲ್ಲಿ?

ಚೆನ್ನೈ ಸೂಪರ್‌ ಕಿಂಗ್ಸ್‌ ಈಗ ಅಪಾಯದಲ್ಲಿದೆ.. ಪಂಜಾಬ್‌ ವಿರುದ್ಧದ ಸೋಲು ಪ್ಲೇಆಫ್‌ನಲ್ಲಿ ಚೆನ್ನೈ ತಂಡವನ್ನು ಕೂಡ ಅಪಾಯದ ಅಂಚಿಗೆ ದೂಡಿದೆ.. ಇನ್ನು ಮುಂದೆ ಒಂದೊಂದು ಮ್ಯಾಚ್‌ ಕೂಡ ಇಂಪಾರ್ಟೆಂಟ್‌.. ಗೆಲ್ಲುವ ವಿಶ್ವಾಸದಲ್ಲಿ ಪ್ರಯೋಗಕ್ಕೆ ಕೈ ಹಾಕಿದ ಚೆನ್ನೈ ಟೀಂ ಈಗ ಕೈ ಸುಟ್ಟುಕೊಂಡಿದೆ.. ಇದ್ರಿಂದಾಗಿಯೇ ಪ್ಲೇಆಫ್‌ ಕನಸು ನನಸಾಗಬೇಕು ಅಂದ್ರೆ ಮುಂದಿನ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಬಿದ್ದಿದೆ.. ಧೋನಿಯ ಗೇಮ್‌ ಪ್ಲ್ಯಾನ್‌ ಎಡವಿದ್ದೆಲ್ಲಿ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮತ್ತಷ್ಟು ಹದಗೆಟ್ಟ ಪಾಪಿ ಪಾಕ್‌ ಆರ್ಥಿಕ ಪರಿಸ್ಥಿತಿ – ಗೋಧಿಹಿಟ್ಟು ₹800, ಬಾಳೆಹಣ್ಣು ಕೆಜಿಗೆ 200 ರುಪಾಯಿ!

ಟಿ20 ವರ್ಲ್ಡ್‌ ಕಪ್‌ಗೆ ಸೆಲೆಕ್ಟ್‌ ಆಗಿರುವ ಟೀಂ ಮೆಂಬರ್ಸ್‌ಗೆ ಜಾಸ್ತಿ ಚಾನ್ಸ್‌ ಕೊಡಲು ಚೆನ್ನೈ ಟೀಂ, ಪಂಜಾಬ್‌ ವಿರುದ್ಧ ನಿರ್ಧರಿಸಿತ್ತು.. ಇದುವೇ ಚೆನ್ನೈ ಟೀಂಗೆ ಮುಳುವಾಗಿದ್ದು ಮಾತ್ರ ವಿಪರ್ಯಾಸ.. ಈಗಾಗ್ಲೇ ಐಪಿಎಲ್‌ನಲ್ಲಿ ಮಿಂಚುತ್ತಿರುವ ಶಿವಂ ದುಬೆ, ಅದೇ ಪರ್ಫಾರ್ಮೆನ್ಸ್‌ ಆಧಾರದಲ್ಲಿ ಟೀಂ ಇಂಡಿಯಾಗೂ ಸೆಲೆಕ್ಟ್‌ ಆಗಿದ್ದಾರೆ.. ಐಪಿಎಲ್‌ನಲ್ಲಿ ಇದುವರೆಗೆ ಶಿವಂ ದುಬೆ ಚೆನ್ನಾಗಿಯೇ ಬ್ಯಾಟ್‌ ಬೀಸಿ, ತಂಡವನ್ನು ಅಪಾಯದಲ್ಲಿ ಪಾರು ಮಾಡುತ್ತಿದ್ದರು.. ಬಿಗ್‌ ಶಾಟ್‌ಗಳ ಮೂಲಕ ತಂಡದ ರನ್‌ ರೇಟ್‌ ಹೆಚ್ಚಿಸುತ್ತಿದ್ದ ಶಿವಂ ದುಬೆ ಈಗ ಟೀಂ ಇಂಡಿಯಾದ ಪರವಾಗಿ ವರ್ಲ್ಡ್‌ ಕಪ್‌ ಆಡಲಿದ್ದಾರೆ.. ಆದ್ರೆ ವರ್ಲ್ಡ್‌ಕಪ್‌ ಮುಂಚಿತವಾಗಿ ಶಿವಂ ದುಬೆಗೆ ಮೇಲಿನ ಆರ್ಡರ್‌ನಲ್ಲೂ ಆಡುವ ಅನುಭವ ನೀಡಲು ಪಂಜಾಬ್‌ ವಿರುದ್ಧ ಒಂದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಗೆ ಇಳಿಸಲಾಗಿತ್ತು. ಈ ಕ್ರಮಾಂಕದಲ್ಲಿ ಐಪಿಎಲ್‌ನಲ್ಲಿ ಚೆನ್ನೈ ಡೆರಿಲ್‌ ಮಿಚೆಲ್‌ ಅವರನ್ನು ಆಡಿಸುತ್ತಿತ್ತು.. ಮಿಚೆಲ್‌ ಕೂಡ ತೀರಾ ಹೊಡಿ ಬಡಿ ಆಟ ಆಡದಿದ್ದರೂ ತಂಡ ಬ್ಯಾಟಿಂಗ್‌ಗೆ ಸ್ಥಿರತೆ ಕೊಟ್ಟು, ಮತ್ತೊಂದು ಎಂಡ್‌ನಿಂದ ರನ್‌ ಬರುವಂತೆ ನೋಡಿಕೊಳ್ತಿದ್ದರು.. ಆದ್ರೆ ಮಿಚೆಲ್‌ ಬದಲು 1ನೇ ಕ್ರಮಾಂಕದಲ್ಲಿ ಶಿವಂ ದುಬೆಯನ್ನು ಬ್ಯಾಟಿಂಗ್‌ಗೆ ಇಳಿಸಲು ಇನ್ನೂ ಒಂದು ಕಾರಣವಿತ್ತು.. ಆದು ಲೆಫ್ಟ್‌-ರೈಟ್‌ ಕಾಂಬಿನೇಷನ್‌ ಲೆಕ್ಕಾಚಾರ.. ಅಜಿಂಕ್ಯ ರಹಾನೆ ಔಟಾದ ನಂತರ ದುಬೆಯನ್ನು ಕಳಿಸಿ, ಸ್ಪಿನ್‌ ಅಟ್ಯಾಕ್‌ ಅನ್ನು ಟ್ಯಾಕಲ್‌ ಮಾಡುವ ಲೆಕ್ಕಾಚಾರವನ್ನು ಚೆನ್ನೈ ಹಾಕಿತ್ತು. ಆದ್ರೆ ಒಂದನೇ ಕ್ರಮಾಂಕದಲ್ಲಿ ಆಡಲು ಬಂದ ಶಿವಂ ದುಬೆ ಒಂದೇ ಬಾಲ್‌ನಲ್ಲಿ ಔಟಾಗುವ ಮೂಲಕ ನಿರಾಶೆ ಮೂಡಿಸಿದ್ದರು.. ಇದು ಶಿವಂ ದುಬೆ ವರ್ಲ್ಡ್‌ ಕಪ್‌ಗೆ ಸೆಲೆಕ್ಟ್‌ ಆದ ನಂತರದ ಮೊದಲ ಮ್ಯಾಚ್‌ ಆಗಿತ್ತು..

ದುಬೆ ಔಟಾಗುತ್ತಿದ್ದಂತೆ ಮತ್ತೊಬ್ಬ ಲೆಫ್ಟ್‌ ಹ್ಯಾಂಡ್‌ ಬ್ಯಾಟ್ಸ್‌ಮನ್‌ ರವೀಂದ್ರ ಜಡೇಜಾರನ್ನು ಕ್ರೀಸ್‌ಗಿಳಿಸಿದ್ದು ಕೂಡ ಚೆನ್ನೈಗೆ ಕಾಸ್ಟ್ಲಿ ಆಗಿ ಪರಿಣಮಿಸಿತ್ತು.. ಯಾಕಂದ್ರೆ ಎಂಟು ಓವರ್‌ಗೆ 64 ರನ್‌ ಗಳಿಸಿ, ಉತ್ತಮ ಸ್ಥಿತಿಯಲ್ಲಿ ಚೆನ್ನೈ ಕೇವಲ ಎರಡು ಓವರ್‌ಗಳ ಅಂತರದಲ್ಲಿ ಕೇವಲ ಏಳು ರನ್‌ ಗಳಿಸುವಾಗ ಮೂರು ವಿಕೆಟ್‌ ಕಳೆದುಕೊಂಡು ಪರದಾಟ ಶುರು ಮಾಡಿತ್ತು.. ಅಲ್ಲಿಂದ ನಂತರ ಚೆನ್ನೈನ ರನ್‌ ರೇಟ್‌ ಮೇಲೇಳಲೇ ಇಲ್ಲ.. ಸಮೀರ್‌ ರಿಜ್ವಿ ಮತ್ತು ಮೊಯೀನ್ ಅಲಿ ಉತ್ತಮ ಪಾರ್ಟ್‌ನರ್‌ ಶಿಪ್‌ ಕೊಟ್ಟರೂ ರನ್‌ ರೇಟ್‌ ಹೇಳಿಕೊಳ್ಳುವ ರೀತಿಯಲ್ಲಿ ಮುಂದಕ್ಕೆಸಾಗಲಿಲ್ಲ.. ಬೋರ್ಡ್‌ನಲ್ಲಿ ಕನಿಷ್ಠ 190ರಿಂದ 200 ರನ್‌ ಗಳಿಸಬೇಕಾದ ಅನಿವಾರ್ಯತೆ ಚೆನ್ನೈಗಿತ್ತು.. 18ನೇ ಓವರ್‌ನಲ್ಲಿ ಧೋನಿ ಕ್ರೀಸ್‌ಗಿಳಿದರೂ, ಅದ್ಯಾಕೋ ಕರೆಕ್ಟಾಗಿ ಬಾಲ್‌ ಕನೆಕ್ಟ್‌ ಆಗಲಿಲ್ಲ.. ಕೇವಲ ಒಂದು ಸಿಕ್ಸ್‌ ಮತ್ತು ಒಂದು ಬೌಂಡರಿ ಮಾತ್ರ ದೋನಿ ಬ್ಯಾಟಿಂದ ಬಂತು.. ಅಲ್ಲದೆ, ಟೂರ್ನಿಯಲ್ಲಿ ಮೊದಲ ಬಾರಿಗೆ ಧೋನಿ ಔಟಾದ್ರು.. ಕಡೆಯ ಎಸೆತದಲ್ಲಿ ಇಲ್ಲದ ರನ್‌ಗೆ ಓಡಿ, ರನೌಟ್‌ ಆದ್ರು.. ಇದ್ರಿಂದ ಟೀಂ ಕೇವಲ 162 ರನ್‌ ಮಾತ್ರ ಗಳಿಸಿ, ಪಂಜಾಬ್‌ಗೆ 163 ರನ್‌ಗಳ ಟಾರ್ಗೆಟ್ ಕೊಟ್ಟಿತ್ತು..

ಕೆಕೆಆರ್‌ ವಿರುದ್ಧ 262ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಚೇಸ್‌ ಮಾಡಿ ಐಪಿಎಲ್‌ನಲ್ಲಿ ಹೊಸ ದಾಖಲೆಯನ್ನೇ ಬರೆದಿದೆ ಪಂಜಾಬ್‌.. ಬ್ಯಾಟಿಂಗ್‌ನಲ್ಲಿ ಸತತ ವೈಫಲ್ಯ ಕಂಡಿದ್ದ ಪಂಜಾಬ್‌, ಕೊಲ್ಕೊತ್ತಾ ವಿರುದ್ಧ ಸಿಡಿಲಿನಂತೆ ಅಬ್ಬರಿಸಿತ್ತು.. ಅದೇ ಆಟ ಚೆನ್ನೈ ಮುಂದೆಯೂ ರಿಪೀಟ್‌ ಮಾಡುವ ಮನಸ್ಥಿತಿಯಲ್ಲೇ ಪಂಜಾಬ್‌ ಬ್ಯಾಟ್ಸ್‌ಮನ್‌ಗಳ ಆಡಿದ್ರು.. ಮತ್ತು ಅದ್ರಿಂದ ದೊಡ್ಡ ಫಲವನ್ನೇ ಪಂಜಾಬ್‌ ಪಡೆದಿದೆ.. ಟೂರ್ನಿಯಲ್ಲಿ ಹೊಡಿಬಡಿ ಆಟ ಬಿಟ್ಟು ಇನ್ನೇನೂ ಆಪ್ಷನ್‌ ಸದ್ಯ ಪಂಜಾಬ್‌ ಎದುರಿಲ್ಲ.. ಹೀಗಾಗಿ ಯಾರೇ ಬೌಲರ್‌ಗಳಿದ್ದರೂ ಮುಲಾಜಿಲ್ಲದೆ, ಹೊಡೆಯುವುದಕ್ಕೆ ಪಂಜಾಬ್‌ ಬ್ಯಾಟ್ಸ್‌ಮನ್‌ಗಳು ಆದ್ಯತೆ ಕೊಟ್ಟಿದ್ದಾರೆ.. ಇದ್ರಿಂದಾಗಿಯೇ ಚೆನ್ನೈ ವಿರುದ್ಧ ಪಂಜಾಬ್‌ಗೆ 163 ರನ್‌ಗಳ ಟಾರ್ಗೆಟ್‌ ಬಿಗ್‌ಸ್ಕೋರ್‌ ಅನ್ನಿಸಲೇ ಇಲ್ಲ.. ಇದ್ರಿಂದಾಗಿ ನೀರು ಕುಡಿದಷ್ಟೇ ಸಲೀಸಾಗಿ ಚೇಸ್‌ ಮಾಡುವುದು ಪಂಜಾಬ್‌ಗೂ ಸಾಧ್ಯವಾಯ್ತು.. ಪ್ರಭುಸಿಮ್ರಾನ್‌ ಬೇಗನೆ ಔಟಾದ್ರೂ ಜಾನಿ ಬೈರ್‌ಸ್ಚೋ, ರಿಲೀ ರೊಸ್ಸೌ, ಶಶಾಂಕ್‌ ಸಿಂಗ್‌ ಮತ್ತು ಸ್ಯಾಮ್‌ ಕರ್ರನ್‌ ಈಸಿಯಾಗಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು..

ಪತಿರಾನ ಬದಲು ರಿಚರ್ಡ್‌ ಗ್ಲೀಸನ್‌ಗೆ ಅವಕಾಶ ಕೊಟ್ಟಿದ್ದ ಚೆನ್ನೈಗೆ ಇದರಿಂದಾಗಿ ಬೌಲಿಂಗ್‌ನಲ್ಲಿ ದೊಡ್ಡ ಬಲ ಇಲ್ಲದಂತಾಗಿತ್ತು.. ಹೀಗಾಗಿ ಪಂಜಾಬ್‌ ವಿರುದ್ಧ ಸೋತಿರುವ ಚೆನ್ನೈಗೆ ಈಗ ಮುಂದಿನ ನಾಲ್ಕು ಪಂದ್ಯಗಳಲ್ಲಿ ಕನಿಷ್ಠ ಮೂರನ್ನಾದರೂ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ.. ಅದರಲ್ಲೂ ಪಂಜಾಬ್‌ ತಂಡವನ್ನು ಇನ್ನೊಮ್ಮೆ ಎದುರಿಸಲಿರುವ ಚೆನ್ನೈ ನಂತರ ಆರ್‌ಆರ್‌ ಹಾಗೂ ಆರ್‌ಸಿಬಿ ವಿರುದ್ಧ ಆಡಬೇಕಿದೆ.. ಇತ್ತೀಚೆಗೆ ಆರ್‌ಸಿಬಿ ಕೂಡ ಗೆಲುವಿನ ಟ್ರ್ಯಾಕ್‌ಗೆ ಮರಳಿರುವುದರಿಂದ ಸಿಎಸ್‌ಕೆಗೆ ಮುಂದಿನ ಹಾದಿ ಸುಲಭವಿಲ್ಲ.. ಇಂತಹ ಚಾಲೆಂಜ್‌ಅನ್ನು ಧೋನಿ ಹೇಗೆ ನಿಭಾಯಿಸುತ್ತಾರೆ ಎನ್ನುವುದರ ಮೇಲೆಯೇ ಚೆನ್ನೈನ ಪ್ಲೇ ಆಫ್‌ ಭವಿಷ್ಯ ನಿಂತಿದೆ.. ಬಹುತೇಕ ಮುಂದಿನ ಪಂದ್ಯಗಳಲ್ಲಿ ಚೆನ್ನೈ ಹೊಸ ಪ್ರಯೋಗಕ್ಕಿಂತ ಹಳೆಯ ಸಿದ್ಧಸೂತ್ರದ ಕಡೆಗೆ ಹೆಚ್ಚಿನ ಒತ್ತು ನೀಡಬಹುದು.. ಅದರ ಮೂಲಕ ಗೆಲುವಿನ ಹಾದಿಯನ್ನು ಹಿಡಿಯಲು ಪ್ರಯತ್ನಿಸುವುದು ನಿಶ್ಚಿತ..

Shwetha M