ಗೆಲುವಿನ ಟ್ರ್ಯಾಕ್ ಬಿಟ್ಟ PBKS – RCB ಟ್ರೋಲ್ ಮಾಡಿ ಕೆಟ್ರಾ?
ಡೆಲ್ಲಿ ಪ್ಲೇ ಆಫ್ ಆಸೆ ಈಡೇರುತ್ತಾ?

ಫಸ್ಟ್ ಆಫ್ನಲ್ಲಿ ಒಂದೇ ಒಂದು ಪಂದ್ಯ ಸೋಲದೆ ಟೇಬಲ್ ಟಾಪರ್ ಆಗಿದ್ದ ಪಂಜಾಬ್ ಕಿಂಗ್ಸ್ ಈಗ ಸೆಕೆಂಡ್ ಆಫ್ನಲ್ಲಿ ಒಂದೇ ಒಂದು ಪಂದ್ಯ ಗೆಲ್ಲೋಕೆ ಆಗಿಲ್ಲ. ಸತತ ನಾಲ್ಕು ಪಂದ್ಯಗಳಲ್ಲಿ ಸೋಲು. ಆರ್ಸಿಬಿ ವಿರುದ್ಧ ಅದೊಂದು ಟ್ವೀಟ್ ಮಾಡಿದ್ಮೇಲಂತೂ ಗೆದ್ದಿದ್ದೇ ಇಲ್ಲ.
ಇದನ್ನೂ ಓದಿ : ಶೆಫರ್ಡ್ ಈಗ ಭೀಮನಲ್ಲ ಬಲಹೀನ – ಪದೇಪದೆ ಚಾನ್ಸ್ ಕೊಟ್ಟಿದ್ದೇ ತಪ್ಪಾ?
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ನಡುವಿನ ಮ್ಯಾಚಲ್ಲಿ ಡೆಲ್ಲಿ ಗೆದ್ದು ಬೀಗಿದೆ. ಟಾಸ್ ಸೋತು ಫಸ್ಟ್ ಬ್ಯಾಟಿಂಗ್ಗೆ ಬಂದ ಪಂಜಾಬ್ ಆರಂಭದಲ್ಲಿ ಸಿಕ್ಕ ಅದ್ಭುತ ಸ್ಕೋರ್ನಿಂದ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 210 ರನ್ ಗಳಿಸಿತ್ತು. 211 ರನ್ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಆರಂಭದಲ್ಲೇ ಆಘಾತ. ಇನ್ನೇನು ಡೆಲ್ಲಿ ಸೋಲಬಹುದು ಅನ್ಕೊಂಡ್ರೆ ಮಿಡಲ್ ಆರ್ಡರ್ ಮತ್ತು ಟೇಲ್ ಎಂಡರ್ಸ್ ಪಂದ್ಯ ಗೆಲ್ಲಿಸಿದ್ರು. 19 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಡೆಲ್ಲಿ ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ತು.
5 ಬದಲಾವಣೆ ಮಾಡಿ ಗೆದ್ದ ಡೆಲ್ಲಿ!
ಪಂಜಾಬ್ ಪರ 17 ಎಸೆತಗಳಲ್ಲೇ 50 ರನ್ಸ್ ಬಂದ್ರೂ ಆಮೇಲೆ ಡೌನ್
ಪ್ರಿಯಾನ್ಶ್ ಆರ್ಯ ಔಟ್ ಆದ ಮೇಲೆ ಬಿಗ್ ಹಿಟ್ಸ್ ಕಡಿಮೆ ಆಯ್ತು
ಟಾರ್ಗೆಟ್ ಬೆನ್ನತ್ತಿದ ಡೆಲ್ಲಿಗೆ ಕೈಕೊಟ್ಟ ಓಪನಿಂಗ್ ನಾಲ್ವರು ಬ್ಯಾಟರ್ಸ್
ಅಕ್ಷರ್ ಪಟೇಲ್ & ಡೇವಿಡ್ ಮಿಲ್ಲರ್ ತಲಾ ಅರ್ಧಶತಕದ ನೆರವು
ಅಶುತೋಶ್ 24(10), ಮಾಧವ್ 18(8), ನಬಿ 10(2) ನೆರವು
ಪಂಜಾಬ್ ಪರ ಅರ್ಶದೀಪ್ ಬಿಟ್ಟು ಉಳಿದೆಲ್ಲಾ ಬೌಲರ್ಸ್ ದುಬಾರಿ
ಯುಜ್ವೇಂದ್ರ ಚಹಾಲ್ ಕೈಯಿಂದ ಒಂದೇ ಒಂದು ಬಾಲ್ ಹಾಕಿಸಲಿಲ್ಲ
ಪ್ಲೇಯಿಂಗ್ 11ನಲ್ಲಿ 5 ಬದಲಾವಣೆ ಮಾಡಿದ್ದೂ ಕೂಡ ಪ್ಲಸ್ ಆಯ್ತು.
ನಿನ್ನೆ ಮ್ಯಾಚಲ್ಲಿ ಡೆಲ್ಲಿ ಪ್ಲೇಯಿಂಗ್ 11ನಲ್ಲಿ 5 ಬದಲಾವಣೆಗಳೊಂದಿಗೆ ಕಣಕ್ಕಿಳಿದಿತ್ತು. ಅಭಿಷೇಕ್ ಪೊರೆಲ್, ಸಾಹಿಲ್ ಪರೇಖ್, ಡೇವಿಡ್ ಮಿಲ್ಲರ್, ಅಕಿಬ್ ನಬಿ ಮತ್ತು ಮಾಧವ್ ತಿವಾರಿ ಅವರಿಗೆ ಅವಕಾಶ ನೀಡಲಾಗಿತ್ತು. ಌಂಡ್ ಇದ್ರಲ್ಲಿ ಅಭಿಷೇಕ್ ಪೊರೆಲ್ ಮತ್ತು ಸಾಹಿಲ್ ಕಡೆಯಿಂದ ಬಿಗ್ ಇಂಪ್ಯಾಕ್ಟ್ ಆಗದೇ ಇದ್ರೂ ಮಿಲ್ಲರ್, ನಬಿ ಹಾಗೇ ಮಾಧವ್ ಅದ್ಭುತ ಪ್ರದರ್ಶನದ ಮೂಲಕ ತಂಡವನ್ನ ಗೆಲ್ಲಿಸಿದ್ರು. ಬಟ್ ಈ ಬದಲಾವಣೆ ಡೆಲ್ಲಿಯ ಪ್ಲೇ ಆಫ್ ಆಸೆಯನ್ನ ಜೀವಂತವಾಗಿರಿಸಿದೆ. ಅಂದ್ರೆ ಮ್ಯಾಥಮೆಟಿಕಲಿ ಚಾನ್ಸ್ ಇದೆ. ಅದೂ ಒನ್ ಆರ್ ಟು ಪರ್ಸೆಂಟ್. ಬೇರೆ ತಂಡಗಳ ಸೋಲು ಗೆಲುವಿನ ಮೇಲೆ ಡಿಪೆಂಡ್ ಆಗ್ಬೇಕು.ಇತ್ತ ಪಂಜಾಬ್ ತಂಡ 210 ರನ್ಸ್ ಹೊಡ್ದೂ ಸೋತಿದ್ದಾರೆ. ಅಲ್ದೇ ಆರ್ಸಿಬಿ 49ಕ್ಕೆ ಆಲೌಟ್ ಆಗಿದ್ದ ಕಳಪೆ ದಾಖಲೆಯನ್ನ ಪಂಜಾಬ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಟ್ರೋಲ್ ಮಾಡಿದ್ರು. ಏಪ್ರಿಲ್ 28ಕ್ಕೆ ರಾಜಸ್ಥಾನ ವಿರುದ್ಧದ ಮ್ಯಾಚಲ್ಲಿ 4.3 ಓವರ್ಗಳಲ್ಲಿ 49ಕ್ಕೆ 1 ವಿಕೆಟ್ ಅಂತಾ ಆರ್ಸಿಬಿಯನ್ನ ಗೇಲಿ ಮಾಡಿದ್ರು. ಬಟ್ ಬಟ್ ಬ್ಯಾಡ್ಲಕ್ ಅದಾದ್ಮೇಲೆ ಪಂಜಾಬ್ ಗೆದ್ದಿದ್ದೇ ಇಲ್ಲ. ರಾಜಸ್ಥಾನ ಆ ಪಂದ್ಯವನ್ನ ಗೆಲ್ಲುತ್ತೆ. ನಂತ್ರ ಗುಜರಾತ್, ಹೈದ್ರಾಬಾದ್ ಈಗ ಡೆಲ್ಲಿ ವಿರುದ್ಧ ಸತತ 4 ಮ್ಯಾಚ್ ಸೋತಿದ್ದಾರೆ. ಈಗ ಆರ್ಸಿಬಿ ಫ್ಯಾನ್ಸ್ ಪಂಜಾಬ್ನ ಟ್ರೋಲ್ ಮಾಡ್ತಿದ್ದಾರೆ.

ನೋಡಿರಿ

