11 ವರ್ಷ.. ನಂ.1ಸ್ಥಾನಕ್ಕೆ PBKS – ಶ್ರೇಯಸ್ & ರಿಕಿ ಪಾಂಟಿಂಗ್ ಕಪ್ ಗೆಲ್ಲಿಸ್ತಾರಾ?  

11 ವರ್ಷ.. ನಂ.1ಸ್ಥಾನಕ್ಕೆ PBKS – ಶ್ರೇಯಸ್ & ರಿಕಿ ಪಾಂಟಿಂಗ್ ಕಪ್ ಗೆಲ್ಲಿಸ್ತಾರಾ?  

17 ಸೀಸನ್.. ಭರ್ತಿ 17 ಸೀಸನ್ ಮುಗ್ದು ಇದೀಗ 18ನೇ ಸೀಸನ್ ಐಪಿಎಲ್ ಆಲ್ಮೋಸ್ಟ್ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಬಟ್ ಇಷ್ಟೂ ಸೀಸನ್​ಗಳನ್ನ ಆಡಿದ್ರೂ ಪಂಜಾಬ್ ಆಗ್ಲಿ, ಡೆಲ್ಲಿ ಆಗ್ಲಿ ಅಥವಾ ಪಂಜಾಬ್ ಆಗ್ಲಿ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಬಟ್ ಈ ಸಲ ಆ ಚಾನ್ಸ್ ಆರ್​ಸಿಬಿ ಮತ್ತು ಪಂಜಾಬ್​ಗೆ ಇದೆ. ಈ ಎರಡೂ ತಂಡಗಳು ಪ್ಲೇಆಫ್​​ಗೆ ಸೆಲೆಕ್ಟ್ ಆಗಿರೋದ್ರಿಂದ ಚಾಂಪಿಯನ್ ಪಟ್ಟಕ್ಕೇರೋಕೆ ಕೆಲ ಹೆಜ್ಜೆಗಳಷ್ಟೇ ಬಾಕಿ. ಈ ಎರಡೂ ತಂಡಗಳ ಐಪಿಎಲ್ ಜರ್ನಿ ನೋಡ್ದಾಗ ಆರ್​ಸಿಬಿ ಕಪ್ ಗೆದ್ದಿಲ್ಲ ಅಂದ್ರೂ ಟಾಪಲ್ಲೇ ಇದೆ. ಫ್ಯಾನ್ಸ್ ಬೇಸ್ ಅಂತೂ ಯಾವ ಇಂಟರ್​ನ್ಯಾಷನಲ್ ಪಂದ್ಯಗಳಿಗೂ ಇರದಷ್ಟಿದೆ. ಐಪಿಎಲ್​ನಲ್ಲಿ ತನ್ನದೇ ಬ್ರ್ಯಾಂಡ್ ಕ್ರಿಯೇಟ್ ಮಾಡಿದೆ. 17 ಸೀಸನ್​ಗಳಿಂದಲೂ ಟಫ್ ಫೈಟ್ ನೀಡ್ತಾನೇ ಬಂದಿದೆ. ಬಟ್ ಪಂಜಾಬ್ ಪರಿಸ್ಥಿತಿ ಹಾಗಿರಲಿಲ್ಲ. ಲಾಸ್ಟ್ ಸೀಸನ್​ವರೆಗೂ ಹತ್ತರಲ್ಲಿ ಹನ್ನೊಂದು ಅನ್ನೋ ಹಾಗೇ ಇದ್ದ ಟೀಂ. ಪಂದ್ಯ ಅಂತಾ ಬಂದಾಗ ಬೋರಿಂಗ್, ವ್ಯೂವರ್​ಶಿಪ್ ಕೂಡ ಡೌನ್ ಆಗ್ತಿತ್ತು. ಬಟ್ ಈ ಸೀಸನ್ ಕಂಪ್ಲೀಟ್ ಸೀನೇ ಚೇಂಜ್ ಆಗಿತ್ತು. ಅದಕ್ಕೆ ಕಾರಣ ಕ್ಯಾಪ್ಟನ್ & ಕೋಚ್ ಕರಾಮತ್ತು.

ಇದನ್ನೂ ಓದಿ : RCBಗೆ ಬದಲಿ ಆಟಗಾರರ ಟೆನ್ಷನ್ – LSG ಸದೆ ಬಡಿದ್ರೆ ಟಾಪ್-2 ಫಿಕ್ಸ್

ನಿಜ. ಪಂಜಾಬ್ ಇವತ್ತು ಟೇಬಲ್ ಟಾಪರ್ ಆಗಿದೆ ಅಂದ್ರೆ ಅದಕ್ಕೆ ಮುಖ್ಯ ಕಾರಣ ಶ್ರೇಯಸ್ ಅಯ್ಯರ್ ಮತ್ತು ಕೋಚ್ ರಿಕಿ ಪಾಂಟಿಂಗ್. 2025ರ ಐಪಿಎಲ್​ಗೂ ಮುನ್ನ ನಡೆದ ಮೆಗಾ ಹರಾಜಿನಲ್ಲಿ ಪಿಬಿಕೆಎಸ್ ಆಟಗಾರರನ್ನ ಪಿಕ್ ಮಾಡೋ ಹೊಣೆಯನ್ನ ರಿಕಿ ಪಾಂಟಿಂಗ್​ಗೆ ಬಿಡ್ಲಾಗಿತ್ತು. ಸೋ ಇದಕ್ಕಾಗಿ ಕಂಪ್ಲೀಟ್ ವರ್ಕ್ ಮಾಡಿದ ಪಾಂಟಿಂಗ್ ಶ್ರೇಯಸ್ ಅಯ್ಯರ್ ಅವ್ರ ಫಸ್ಟ್ ಟಾರ್ಗೆಟ್ ಆಗಿದ್ರು. ಚಾಂಪಿಯನ್ ತಂಡದ ನಾಯಕನ್ನೇ ಬಿಟ್ಟಿದ್ದ ಕೆಕೆಆರ್ ಅಲ್ಲಿ ಎಡವಟ್ಟು ಮಾಡಿಕೊಂಡ್ರೇ ಅದೇ ನಾಯಕನೇ ಬೇಕು ಅಂದ್ರೆ ಬರೋಬ್ಬರಿ 26.75 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದ್ರು. ಇಲ್ಲಿ ಪಾಂಟಿಂಗ್ ಮತ್ತು ಫ್ರಾಂಚೈಸಿಗೆ ಹಣಕ್ಕಿಂತ ಆಟಗಾರ ಇಂಪಾರ್ಟೆಂಟ್ ಆಗಿದ್ರು. ಹಾಗೇ ಒಂದೊಂದು ಸ್ಲಾಟ್​ಗೂ ತುಂಬಾನೇ ಯೋಜನೆಗಳನ್ನ ರೂಪಿಸಿಯೇ ಆಟಗಾರರನ್ನ ಖರೀದಿ ಮಾಡಿದ್ರು. ಅಲ್ಲಿಗೆ ಅರ್ಧ ಕೆಲಸ ಕಂಪ್ಲೀಟ್ ಆಗಿತ್ತು. ಬಟ್ ಇನ್ನರ್ಧ ಕೆಲ್ಸ ಮುಗಿಸಿದ್ದು ಶ್ರೇಯಸ್ ಅಯ್ಯರ್.  ಕ್ಯಾಪ್ಟನ್ ಆಗಿ ಪ್ಲೇಯರ್ ಆಗಿ ಡೇ ಒನ್ ಪಂದ್ಯದಿಂದಲೂ ಶ್ರೇಯಸ್ ಅದ್ಭುತವಾಗಿ ಆಡಿದ್ದಾರೆ.

ಇಲ್ಲಿ ಒಂದು ತಂಡಕ್ಕೆ ಕ್ಯಾಪ್ಟನ್ & ಕೋಚ್ ಎಷ್ಟು ಇಂಪಾರ್ಟೆಂಟೋ ಟೀಂ ಬ್ಯಾಲೆನ್ಸ್ ಆಗಿರೋದು ಕೂಡ ಅಷ್ಟೇ ಮ್ಯಾಟರ್ ಆಗುತ್ತೆ. ಟಾಪ್ ಆರ್ಡರ್ ಬ್ಯಾಟರ್​ಗಳಾದ ಪ್ರಿಯಾಂಶ್ ಆರ್ಯ, ಪ್ರಭ್ ಸಿಮ್ರಾನ್ ಸಿಂಗ್, ಶ್ರೇಯಸ್ ಅಯ್ಯರ್, ನೆಹಾಲ್ ವಧೇರಾ ಮತ್ತು ಶಶಾಂಕ್ ಸಿಂಗ್ ಅದ್ಭುತ ಬ್ಯಾಟಿಂಗ್ ಮಾಡಿದ್ದಾರೆ. ಈ ಸೀಸನ್​ನಲ್ಲಿ ಇವ್ರೆಲ್ಲಾ ತಲಾ 280 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಆರ್ಯ, ಪ್ರಭ್ಸಿಮ್ರಾನ್ ಮತ್ತು ಶ್ರೇಯಸ್ ಅವರಲ್ಲಿ ಅಗ್ರ ಮೂವರು ಆಟಗಾರರು 420 ರನ್ ದಾಟಿದ್ದಾರೆ. ಜೋಶ್ ಇಂಗ್ಲಿಸ್ ಮತ್ತು ಮಾರ್ಕಸ್ ಸ್ಟೊಯಿನಿಸ್ ತಲಾ ಎಂಟು ಬಾರಿ ಮಾತ್ರ ಬ್ಯಾಟಿಂಗ್ ಮಾಡಿದ್ದಾರೆ ಮತ್ತು ಇಬ್ಬರೂ ಆವರೇಜ್ 30 ಕ್ಕಿಂತ ಹೆಚ್ಚು ಬ್ಯಾಟಿಂಗ್ ಮಾಡಿದ್ದಾರೆ. ಇಂಗ್ಲಿಸ್ ಸ್ಟ್ರೈಕ್-ರೇಟ್ 164.2 ಆಗಿದ್ದರೆ, ಸ್ಟೊಯಿನಿಸ್ 193.8 ರನ್ ಗಳಿಸಿದ್ದಾರೆ. ಅಷ್ಟೇ ಅಲ್ದೇ ಪಂಜಾಬ್​ನ ನಾಲ್ವರು ಬೌಲರ್ಸ್ ಎರಡಂಕಿಯ ವಿಕೆಟ್‌ಗಳನ್ನು ಪಡೆದಿದ್ದಾರೆ: ಅರ್ಶ್‌ದೀಪ್ ಸಿಂಗ್, ಮಾರ್ಕೊ ಜಾನ್ಸೆನ್, ಯುಜ್ವೇಂದ್ರ ಚಾಹಲ್ ಮತ್ತು ಹರ್‌ಪ್ರೀತ್ ಬ್ರಾರ್ 10ಕ್ಕೂ ಹೆಚ್ಚು ವಿಕೆಟ್ಸ್ ಕಿತ್ತಿದ್ದಾರೆ.

ಪಂಜಾಬ್ ಕಿಂಗ್ಸ್ ತಂಡ ಈ ಸಲ ತುಂಬಾನೇ ಸ್ಪೆಷಲ್ ಆಗಿ ಕಾಣ್ತಿರೋದಕ್ಕೆ ಕಾರಣವೇ ಇದು. ಮುಂಬೈ ತಂಡವನ್ನ ಸೋಲಿಸೋ ಮೂಲಕ ಅಂಕಪಟ್ಟಿಯಲ್ಲಿ ನಂ.1 ಸ್ಥಾನದೊಂದಿಗೆ ಕ್ವಾಲಿಫೈಯರ್ 1ಗೆ ಲಗ್ಗೆಯಿಟ್ಟಿದೆ. 11 ವರ್ಷಗಳ ಬಳಿಕ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟ ಪಂಜಾಬ್‌ ಕಿಂಗ್ಸ್‌ 14 ವರ್ಷಗಳ ಬಳಿಕ ಮೊದಲ ಬಾರಿಗೆ ನಂ.1 ಸ್ಥಾನಕ್ಕೇರಿದೆ.  ಬಟ್ ಕಳೆದ ಸೀಸನ್​ಗಳಲ್ಲಿ ಸಿಚುಯೇಷನ್ ಬೇರೆಯದ್ದೇ ರೀತಿ ಇತ್ತು. ಐಪಿಎಲ್​ನಲ್ಲಿ ಏನ್ ಬೇಕಾದ್ರೂ ಆಗ್ಬೋದು ಅನ್ನೋ ಮಾತಿದ್ರೂ ಕೂಡ ಪಮಜಾಬ್ ಅಂತೂ ಪ್ಲೇಆಪ್ಸ್​ಗೆ ಬರಲ್ಲ ಅನ್ನೋದಂತೂ ಬೇರೆ ತಂಡಗಳಿಗೆ ಗೊತ್ತಿರ್ತಾ ಇತ್ತು. ಯಾಕಂದ್ರೆ ಅವ್ರ ಪರ್ಫಾಮೆನ್ಸ್ ಅಷ್ಟಕ್ಕೆ ಸೀಮಿತ ಆಗಿರ್ತಿತ್ತು. ಬಟ್ ಈ ಸಲ ಟೋಟಲಿ ಡಿಫರೆಂಟ್. ಈ ಸೀಸನ್​ನಲ್ಲಿ ಲೀಗ್ ಹಂತದಲ್ಲಿ ಒಟ್ಟು 14 ಪಂದ್ಯಗಳನ್ನ ಆಡಿರೋ ಪಂಜಾಬ್ ಒಂಬತ್ತರಲ್ಲಿ ಗೆದ್ದು ನಾಲ್ಕರಲ್ಲಿ ಸೋಲು ಕಂಡಿದೆ. ಒಂದು ಪಂದ್ಯ ರದ್ದಾಘಿದೆ. ಈ ಮೂಲಕ 19 ಅಂಕಗಳೊಂದಿಗೆ ಟೇಬಲ್ ಟಾಪರ್ ಆಗಿದೆ. ತಂಡದ ಈ ಅದ್ಭುತ ಪ್ರದರ್ಶನಕ್ಕೆ ತಂಡದ ಮಾಲಕಿ ಆಗಿರುವ ಪ್ರೀತಿ ಝಿಂಟಾ ಸಂಭ್ರಮಕ್ಕೆ ಪಾರವೇ ಇಲ್ಲ.

Shantha Kumari

Leave a Reply

Your email address will not be published. Required fields are marked *