PBKS ಲಕ್ ಬದಲಿಸಿದ ಶ್ರೇಯಸ್ – ಚೇಂಜಸ್ ಇಲ್ಲದೇ ಡೇಂಜರಸ್ ಆದ್ರಾ?
2025 ಜಸ್ಟ್ ಮಿಸ್.. 2026 ಕಪ್ ಫಿಕ್ಸ್?

PBKS ಲಕ್ ಬದಲಿಸಿದ ಶ್ರೇಯಸ್ – ಚೇಂಜಸ್ ಇಲ್ಲದೇ ಡೇಂಜರಸ್ ಆದ್ರಾ?2025 ಜಸ್ಟ್ ಮಿಸ್.. 2026 ಕಪ್ ಫಿಕ್ಸ್?

2025ರ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿ ರನ್ನರ್​ಅಪ್ ಆಗಿದ್ದ ಪಂಜಾಬ್ ಕಿಂಗ್ಸ್ ಈಗ ಮಿನಿ ಆಕ್ಷನ್ ಬಳಿಕ ಮತ್ತಷ್ಟು ಸ್ಟ್ರಾಂಗ್ ಆಗಿದೆ. ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ಚೊಚ್ಚಲ ಕಪ್ ನಿರೀಕ್ಷೆಯಲ್ಲಿದ್ದಾರೆ. ಡಿಸೆಂಬರ್ 16ರಂದು ನಡೆದ ಐಪಿಎಲ್​ನಲ್ಲಿ ಮಿನಿ ಆಕ್ಷನ್​ನಲ್ಲಿ 11.50 ಕೋಟಿಯೊಂದಿಗೆ ಅಖಾಡಕ್ಕಿಳಿದ ಪಂಬಾಬ್ ಫ್ರಾಂಚೈಸಿ ಟೋಟಲಿ ನಾಲ್ವರನ್ನ ಖರೀದಿ ಮಾಡಿತ್ತು. ಯಾಕಂದ್ರೆ 2025ರಲ್ಲಿ 11 ವರ್ಷಗಳ ಬಳಿಕ ತಂಡವನ್ನ ಫೈನಲ್​ಗೇರಿಸಿದ್ದ ಬಹುತೇಕ ಆಟಗಾರರನ್ನ ತಂಡದಲ್ಲೇ ಉಳಿಸಿಕೊಂಡು ನಾಲ್ವರನ್ನಷ್ಟೇ ರಿಲೀಸ್ ಮಾಡಿದ್ರು. ಹೀಗಾಗಿ ಹರಾಜಿನಲ್ಲಿ ಆಸ್ಟ್ರೇಲಿಯಾದ ಬ್ಯಾಟಿಂಗ್ ಆಲ್‌ರೌಂಡರ್ ಕೂಪರ್ ಕೊನೊಲಿ ಅವರನ್ನು 3 ಕೋಟಿ ರೂಪಾಯಿಗೆ ಖರೀದಿ ಮಾಡಿದ್ರು. ಹಾಗೇ ಡಚ್ ವೇಗಿ ಬೆನ್ ದ್ವಾರಶುಯಿಸ್ ಅವರನ್ನು 4.40 ಕೋಟಿ ರೂಪಾಯಿಗೆ ಬಿಡ್ ಮಾಡಿದ್ರು. ಉಳಿದಂತೆ ಪ್ರವೀಣ್ ದುಬೆ ಮತ್ತು ವಿಶಾಲ್ ನಿಶಾದ್ ಇಬ್ಬರೂ ತಲಾ 30 ಲಕ್ಷ ರೂ.ಗೆ ಸೇರಿದ್ದರು. ಹೆಚ್ಚು ಚೇಂಜಸ್ ಅಂತಾ ಏನೂ ಇಲ್ಲದೇ ಇದ್ರೂ ಟೀಂ ಅಂತೂ ಸ್ಟ್ರಾಂಗ್ ಆಗೇ ರೆಡಿಯಾಗಿದೆ.

ಇದನ್ನೂ ಓದಿ : ವಿಜಯ ಹಝಾರೆ ಟೂರ್ನಿಯಲ್ಲಿ ಇಶಾನ್ ಕಿಶನ್ ಸಿಡಿಲಬ್ಬ -33 ಎಸೆತಗಳಲ್ಲಿ ಭರ್ಜರಿ ಶತಕ

ಪಂಜಾಬ್ ನಲ್ಲಿದ್ದಾರೆ ಅನುಭವಿಗಳು & ಯಂಗ್ ಸ್ಟರ್ಸ್!

ಪಂಜಾಬ್ ಕಿಂಗ್ಸ್ ತಂಡದ ಅತಿದೊಡ್ಡ ಶಕ್ತಿ ಅಂದ್ರೆ ಕೋರ್ ಟೀಮ್​ನ ಕಂಟಿನ್ಯೂಟಿ ಌಂಡ್ ಎಕ್ಸ್​ಪೀರಿಯೆನ್ಸ್.  ಶ್ರೇಯಸ್ ಅಯ್ಯರ್ ನೇತೃತ್ವದ ತಂಡವು ಅನುಭವಿ ಅಂತರರಾಷ್ಟ್ರೀಯ ಆಟಗಾರರು ಮತ್ತು ಪ್ರತಿಭಾನ್ವಿತ ಭಾರತೀಯ ಆಟಗಾರರ ಬ್ಯಾಲೆನ್ಸ್ ಹೊಂದಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸ್ಥಿರತೆ ಹೊಂದಿದ್ದಾರೆ. ಹಾಗೇ ಪೇಸ್ ಬೌಲಿಂಗ್ ಬಲಿಷ್ಠವಾಗಿದೆ.  ಅರ್ಶ್ದೀಪ್ ಸಿಂಗ್, ಮಾರ್ಕೊ ಜಾನ್ಸೆನ್, ದ್ವಾರಶುಯಿಸ್ ಮತ್ತು ಲಾಕಿ ಫರ್ಗುಸನ್ ರಲ್ಲಿ ವೆರೈಟಿ ಸ್ಕಿಲ್ಸ್ ಇದ್ದು ಡೆತ್-ಓವರ್ ಗಳಲ್ಲಿ ಎಕ್ಸ್​ಪರ್ಟ್ ಆಗಿದ್ದಾರೆ. ಆಲ್​ರೌಂಡರ್ ಗಳಾದ ಮಾರ್ಕಸ್ ಸ್ಟೊಯಿನಿಸ್ ಮತ್ತು ಕೊನೊಲಿ ಡೆತ್ ಓವರ್​ಗಳಲ್ಲಿ ಇಂಪ್ಯಾಕ್ಟ್ ಮಾಡ್ತಾರೆ. ಆದ್ರೆ ಫ್ರಾಂಚೈಸಿ ವಿಕೆಟ್ ಕೀಪಿಂಗ್ ನಲ್ಲಿ ಎಡವಿದಂತಿದೆ.

ವಿಕೆಟ್ ಕೀಪಿಂಗ್ ನಲ್ಲಿ ಪ್ರಭ್ ಸಿಮ್ರಾನ್ ಸಿಂಗ್ ಮೇಲೆಯೇ ಡಿಪೆಂಡ್!

ಪಿಬಿಕೆಎಸ್ ತಂಡವು ಬಲಿಷ್ಠವಾಗಿ ಕಾಣ್ತಿದ್ರೂ ಪ್ರಭ್ ಸಿಮ್ರಾನ್ ಸಿಂಗ್ ಮಾತ್ರ ವಿಶ್ವಾಸಾರ್ಹ ವಿಕೆಟ್ ಕೀಪರ್-ಬ್ಯಾಟರ್ ಆಗಿದ್ದಾರೆ. ವಿಷ್ಣು ವಿನೋದ್ ಭಾರತದ ಏಕೈಕ ಬ್ಯಾಕಪ್ ಆಗಿದ್ದಾರೆ. ಮಿಚೆಲ್ ಓವನ್ ತಂಡದಲ್ಲಿ ಇದ್ದಾರಾದ್ರೂ ಪ್ಲೇಯಿಂಗ್ 11 ನಲ್ಲಿ ಸೇರಿಸೋದ್ರಿಂದ ವಿದೇಶಿ ಆಟಗಾರರ ಸ್ಲಾಟ್​ಗಳಲ್ಲಿ ವೇರಿಯೇಷನ್ಸ್ ಆಗುತ್ತೆ. ಇನ್ನು ಸ್ಪಿನ್ ವಿಭಾಗ ಕೂಡ ವೀಕ್ ಆಗಿದೆ. ಯುಜ್ವೇಂದ್ರ ಚಹಾಲ್ ಕೆಲವೊಮ್ಮೆ ಹರ್‌ಪ್ರೀತ್ ಬ್ರಾರ್ ಜೊತೆಗೆ ಹೆಚ್ಚಿನ ಜವಾಬ್ದಾರಿ ಹೊರಬೇಕಾಗುತ್ತೆ. ಪ್ರವೀಣ್ ದುಬೆ ಮತ್ತು ಕಾನೊಲಿ ತುಂಬಾ ಎಫೆಕ್ಟಿವ್ ಏನಿಲ್ಲ.  ಹೀಗಾಗಿ ಮಿನಿ ಆಕ್ಷನ್ ನಲ್ಲಿ ಭಾರತೀಯ ವಿಕೆಟ್‌ಕೀಪರ್-ಬ್ಯಾಟರ್‌ನನ್ನು ಗುರಿಯಾಗಿಸಿಕೊಂಡು ಮತ್ತು ಚಾಹಲ್‌ಗೆ ಬೆಂಬಲ ನೀಡಲು ಅನುಭವಿ ಸ್ಪಿನ್ ಆಯ್ಕೆಗಳನ್ನು ಮಾಡಬಹುದಿತ್ತು ಅನ್ನೋ ವಾದವೂ ಇದೆ. ಸೋ ಅಂತಿಮವಾಗಿ ಪಂಜಾಬ್ ತಂಡದ ಪ್ಲೇಯಿಂಗ್ 11 ಹೇಗಿರಬಹುದು ಅನ್ನೋದನ್ನ ನೋಡೋದಾದ್ರೆ..

ಸಂಭಾವ್ಯ ಪ್ಲೇಯಿಂಗ್ 11

ಪ್ರಭ್ ಸಿಮ್ರಾನ್ ಸಿಂಗ್

ಪ್ರಿಯಾಂಶ್ ಆರ್ಯ

ಶ್ರೇಯಸ್ ಅಯ್ಯರ್

ನೆಹಾಲ್ ವಾಧೇರಾ

ಶಶಾಂಕ್ ಸಿಂಗ್

ಮಾರ್ಕಸ್ ಸ್ಟೊಯಿನಿಸ್

ಕೂಪರ್ ಕೊನೊಲಿ

ಮಾರ್ಕೊ ಜಾನ್ಸೆನ್

ಲಾಕಿ ಫರ್ಗುಸನ್

ಯುಜ್ವೇಂದ್ರ ಚಾಹಲ್

ಅರ್ಶ್ದೀಪ್ ಸಿಂಗ್

Shantha Kumari