ಧೋನಿ ಇಲ್ಲದ CSK ಗೆಲ್ಲಲ್ವಾ? – ಚೆನ್ನೈನಲ್ಲಿ ಚೇಟಾ ಬ್ಯಾಟ್ ಮಂಕು
ಚೇಸಿಂಗ್ ನಲ್ಲೂ ಶ್ರೇಯಸ್ ಕಿಂಗ್

ಐಪಿಎಲ್ನ ಯಶಸ್ವೀ ಟೀಂ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ಈ ಸೀಸನ್ನಲ್ಲೂ ಸ್ಟ್ರಗಲ್ ಮಾಡ್ತಿದೆ. ಆಡಿರುವಂತ ಎರಡಕ್ಕೆ ಎರಡು ಪಂದ್ಯಗಳಲ್ಲೂ ಕೈಚೆಲ್ಲಿ ಬಾಟಮ್ ಆಫ್ ದಿ ಟೇಬಲ್ ನಲ್ಲಿದ್ದಾರೆ. ಅಲ್ದೇ ಚೆಪಾಕ್ನಲ್ಲಿ ಸತತ ಆರನೇ ಸೋಲು ಇದು.
ಇದನ್ನೂ ಓದಿ : CSK Vs RCB ಪಂದ್ಯಕ್ಕೂ ಮುನ್ನ RCB ಕ್ಯಾಪ್ಟನ್ ಟೆಂಪಲ್ ರನ್! – ತಿಮ್ಮಪ್ಪನ ದರ್ಶನ ಪಡೆದ ರಜತ್ ಪಾಟೀದಾರ್!
ಶುಕ್ರವಾರ ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಪಂಜಾಬ್ ವರ್ಸಸ್ ಚೆನ್ನೈ ನಡುವಿನ ಮ್ಯಾಚಲ್ಲಿ ಪಂಜಾಬ್ ಕಿಂಗ್ ಭರ್ಜರಿಯಾಗಿ ಗೆದ್ದಿದೆ. ಬ್ಯಾಕ್ ಟು ಬ್ಯಾಕ್ ಸೋತಿರೋ ಸಿಎಸ್ಕೆ ಸಂಕಷ್ಟಕ್ಕೆ ಸಿಲುಕಿದೆ. ರಾಜಸ್ಥಾನ ವಿರುದ್ಧ ಹೀನಾಯವಾಗಿ ಸೋತಿದ್ದ ಸಿಎಸ್ಕೆ ಈಗ ಪಂಜಾಬ್ ವಿರುದ್ಧ ಬಿಗ್ ಮಾರ್ಜಿನ್ ಸೆಟ್ ಮಾಡಿಯೂ ಡಿಫೆನ್ಸ್ ಮಾಡಿಕೊಳ್ಳೋಕೆ ಆಗ್ದೆ ಮಂಡಿಯೂರಿದ್ದಾರೆ. ಮಹೇಂದ್ರ ಸಿಂಗ್ ಧೋನಿಯವ್ರ ಆಬ್ಸೆನ್ಸ್ ಸರಿಯಾಗೇ ಹೊಡೆತ ಕೊಡ್ತಿದೆ.
ಬಿಗ್ ಟಾರ್ಗೆಟ್ ಸೆಟ್ ಮಾಡಿಯೂ ಸೋತ ಚೆನ್ನೈ ಸೂಪರ್ ಕಿಂಗ್ಸ್!
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಮ್ಯಾಚಲ್ಲಿ ಟಾಸ್ ಸೋತು ಫಸ್ಟ್ ಬ್ಯಾಟಿಂಗ್ಗೆ ಬಂದ ಸಿಎಸ್ಕೆ ಆರಂಭದಲ್ಲೇ ವಿಕೆಟ್ ಕಳ್ಕೊಂಡ್ರೂ ಕೂಡ ಆಯುಷ್ ಮಾತ್ರೆ ಅವ್ರ ಅಧ್ಬುತ ಬ್ಯಾಟಿಂಗ್, ಶಿವಂ ದುಬೆ ಫಿನಿಶಿಂಗ್, ಸರ್ಫರಾಜ್ ಖಾನ್ ಪವರ್ ಹಿಟ್ಟಿಂಗ್ ಮೂಲಕ 5 ವಿಕೆಟ್ ನಷ್ಟಕ್ಕೆ 209 ರನ್ಗಳನ್ನ ಕಲೆ ಹಾಕಿತ್ತು. ಸೋ ಪಂಜಾಬ್ ತಂಡದ ಗೆಲುವಿಗೆ 210 ರನ್ಸ್ ಬೇಕಿತ್ತು. ಆದ್ರೆ ಈ ಟಾರ್ಗೆಟ್ ಬೆನ್ನತ್ತಿದ ಪಂಜಾಬ್ ಪ್ರೆಶರ್ ಫ್ರೀಯಾಗಿ ಟಾರ್ಗೆಟ್ ರೀಚ್ ಆಯ್ತು. ಅದಕ್ಕೆ ಕಾರಣ ಬ್ಯಾಟಿಂಗ್ ಪ್ರದರ್ಶನ. ಚೇಸಿಂಗ್ಗೆ ಇಳಿದ ಪಂಜಾಬ್ ಪರ ಪ್ರಿಯಾನ್ಶ್ ಆರ್ಯ 11 ಬಾಲಲ್ಲೇ 39 ರನ್ಸ್ ಕಲೆ ಹಾಕಿದ್ರು. ಹಾಗೇ ಪ್ರಭ್ ಸಿಮ್ರಾನ್ ಸಿಂಗ್ 43, ಕೂಪರ್ 33, ನಾಯಕ ಶ್ರೇಯಸ್ ಅರ್ಧಶತಕದಿಂದ ಟಾರ್ಗೆಟ್ ಈಸಿಯಾಯ್ತು. ಅಂತಿಮವಾಗಿ ಇನ್ನೂ 8 ಎಸೆತಗಳು ಬಾಕಿ ಇದ್ದಂತೆಯೇ 5 ವಿಕೆಟ್ ನಷ್ಟಕ್ಕೆ ಟಾರ್ಗೆಟ್ ರೀಚ್ ಆದ್ರು. ಆಡಿರುವಂತ ಎರಡಕ್ಕೆ ಎರಡೂ ಪಂದ್ಯಗಳನ್ನೂ ಗೆಲ್ಲೂ ಮೂಲಕ ಅದ್ಭುತ ಶುಭಾರಂಭ ಮಾಡಿದ್ದಾರೆ. ಅಷ್ಟಕ್ಕೂ 200+ ಸ್ಕೋರ್ ಇದ್ರೂ ಚೆನ್ನೈ ಸೋತಿದ್ದೇಗೆ ಅಂದ್ರೆ ಅದಕ್ಕೆ ಹಲವು ಕಾರಣಗಳಿವೆ.
ಚೆನ್ನೈ ತಂಡದ ಸೋಲಿಗೆ ಕಾರಣಗಳು!
ಸಂಜು ಸ್ಯಾಮ್ಸನ್ ಕಡೆಯಿಂದ ಬಿಗ್ ಇನ್ನಿಂಗ್ಸ್ ಬರ್ತಿಲ್ಲ
ಸ್ಪಿನ್ನರ್ಸ್ ಸಾಥ್ ಇಲ್ಲದೆ ವಿಕೆಟ್ ಸಿಗದೆ ಬೌಲಿಂಗ್ ವೀಕ್
ನೂರ್ ಅಹ್ಮದ್ ಮತ್ತು ರಾಹುಲ್ ಚಹರ್ ವಿಕೆಟ್ ಇಲ್ಲದೆ 84 ರನ್ಸ್
ಮಹೇಂದ್ರ ಸಿಂಗ್ ಧೋನಿಯವ್ರ ಅನುಭವದ ಕೊರತೆ
209 ರನ್ಸ್ ಇದ್ರೂ ಬೌಲರ್ ಗಳ ವೀಕ್ ನೆಸ್ ನಿಂದ ಸೋಲು
ಪಂಜಾಬ್ ಪರ ಬ್ಯಾಟಿಂಗ್ ಅದ್ಭುತವಾಗಿದ್ದು ಚೇಸಿಂಗ್ ಸಾಧ್ಯ
ಚೆನ್ನೈಗೆ ಈ ಸಲವೂ ಸೀಸನ್ ಆರಂಭದಲ್ಲೇ ಬ್ಯಾಕ್ ಟು ಬ್ಯಾಕ್ ಸೋಲಾಗಿದೆ. ಒಂದ್ಕಡೆ ಐಕಾನಿಕ್ ಪ್ಲೇಯರ್ ಮಹೇಂದ್ರ ಸಿಂಗ್ ಧೋನಿ ಇಲ್ಲ. ಅತ್ತ ಚೇಟಾ ಸೌಂಡ್ ಮಾಡ್ತಿಲ್ಲ. ಗಾಯಕ್ವಾಡ್ಗೆ ಕ್ಯಾಪ್ಟನ್ಸಿ ಎಕ್ಸ್ಪೀರಿಯನ್ಸ್ ಸಾಲ್ತಿಲ್ಲ. ಬೌಲರ್ಸ್ ವೀಕ್.. ಜೊತೆಗೆ ಯಂಗ್ಸ್ಟರ್ಸ್ ಸಾಥ್ ಕೊಡ್ತಿಲ್ಲ. ಈಗ ಮೂರನೇ ಪಂದ್ಯ ನಾಳೆ ಆರ್ಸಿಬಿ ವಿರುದ್ಧ ಬೆಂಗಳೂರಿನಲ್ಲಿ ನಡೆಯಲಿದೆ.

ನೋಡಿರಿ

