ಸಿಂಗರ್ ದಿಯಾ ಹೆಗ್ಡೆ ಈಗ ACTOR.. ನಟನೆಗೆ ಕಾಲಿಟ್ಟ ಪುಟ್ಟ ಪೋರಿ! – ʼಶೋಧʼದಲ್ಲಿ ದಿಯಾ ರೋಲ್ ಏನು?

ದಿಯಾ ಹೆಗ್ಡೆ.. ಕನ್ನಡ ಕಿರುತೆರೆಯಲ್ಲಿ ಹಾಡು, ಡ್ಯಾನ್ಸ್ ಮೂಲಕವೇ ಕರುನಾಡಿನ ಮನೆ ಮನ ಗೆದ್ದ ಪುಟ್ಟ ಪೋರಿ.. ದಿಯಾ ಸ್ಟೇಜ್‌ಗೆ ಬಂದ್ಲು ಅಂದ್ರೆ 100% ಮನರಂಜನೆ ಫಿಕ್ಸ್ ಅಂತಾನೇ ಲೆಕ್ಕ.. ಹರಳು ಹುರಿದಂತೆ ಪಟ ಪಟ ಮಾತನಾಡುವ ಈ ಹುಡುಗಿ ಟ್ಯಾಲೆಂಟ್ ಒಂದೆರಡಲ್ಲ.. ಇದೀಗ ಸರಿಗಮಪ ಖ್ಯಾತಿಯ ದಿಯಾ ಹೆಗ್ಡೆ ನಟನಾ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಇದೀಗ ದಿಯಾ ಹೆಗ್ಡೆ ಹೊಸ ವೆಬ್ ಸೀರಿಸ್‌ವೊಂದ್ರಲ್ಲಿ ನಟಿಸ್ತಿದ್ದಾಳೆ.
ಇದನ್ನೂ ಓದಿ: ದತ್ತು ಪುತ್ರನಿಗಾಗಿ ಗಂಭೀರ್ ಪಾಲಿಟಿಕ್ಸ್ – KKR ಕೋಟಾದಲ್ಲಿ ಏಷ್ಯಾಕಪ್ ಗೆ ರಾಣಾ
ಸರಿಗಮಪ ಸೀಸನ್ 19ರ ಪೋರಿ ದಿಯಾ ಹೆಗ್ಡೆ ಪ್ರತಿಭೆಗೆ ತಲೆದೂಗದವರೇ ಇಲ್ಲ. ಹಾಡು.. ಡ್ಯಾನ್ಸ್.. ಮಾತಿನ ಮೂಲಕ ದಿಯಾ ಕರುನಾಡ ಜನರ ಮನಗೆದ್ದಿದ್ದರು. ಕಳೆದ ಕೆಲ ತಿಂಗಳ ಹಿಂದೆ ಹಿಂದಿ ರಿಯಾಲಿಟಿ ಶೋನಲ್ಲೂ ಭಾಗವಹಿಸಿ, ರಾಷ್ಟ್ರ ಮಟ್ಟದಲ್ಲಿ ಸೌಂಡ್ ಮಾಡಿದ್ಲು.. ಒಂದಾದ ಮೇಲೊಂದು ಶೋಗಳಲ್ಲಿ ಕಾಣಿಸಿಕೊಳ್ತಾ ಇದ್ದ ದೀಯಾ ಈಗ ನಟನಾ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಇದೀಗ ಶೋಧ ಎಂಬ ವೆಬ್‌ಸೀರಿಸ್‌ನಲ್ಲಿ ಪಾತ್ರವೊಂದಕ್ಕೆ ಜೀವ ತುಂಬುತ್ತಿದ್ದಾಳೆ.. ಈಗಾಗಲೇ ಇದ್ರ ಟ್ರೈಲರ್ ರಿಲೀಸ್ ಆಗಿದೆ.
ಜೀ ಕನ್ನಡದಲ್ಲಿ ಪ್ರಸಾರವಾದ ಸರಿಗಮಪ ಶೋನಲ್ಲಿ ದಿಯಾ ತನ್ನ ಗಾಯನದ ಮೂಲಕವೇ ಮಿಂಚು ಹರಿಸಿದ್ಲು. ಹರಳು ಹುರಿದಂತೆ ಪಟ ಪಟ ಮಾತನಾಡುವ, ಯಾರ ಮೇಲಾದರೂ ಪದ ಕಟ್ಟಿ ಹಾಡು ಹಾಡುವ, ತಾನೇ ಪದ್ಯ ಸೃಷ್ಟಿಸಿ ಹಾಡುತ್ತಿದ್ದ ನಮ್ಮ ಸಾಗರದ ಹುಡುಗಿ ದಿಯಾ ಹೆಗ್ಡೆಯ ಟ್ಯಾಲೆಂಟ್ ಗೆ ಕರ್ನಾಟಕ ಜನ ಮನಸೋತಿದ್ದರು. ಇದೀಗ ಮತ್ತೆ ದಿಯಾ ಕರುನಾಡಿನ ಜನರನ್ನ ಮನರಂಜಿಸಲು ಬರ್ತಿದ್ದಾಳೆ. ಅದೂ ಕೂಡ ವೆಚ್ ಸೀರಿಸ್ ಮೂಲಕ.. ಜೀ 5 ನಲ್ಲಿ ಪ್ರಸಾರ ಕಾಣಲಿರುವ ಶೋಧ ವೆಬ್ ಸರಣಿಯಲ್ಲಿ ದಿಯಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾಳೆ. ಆಗಸ್ಟ್ 29ರಿಂದ ‘ಶೋಧ’ zee5 ಒಟಿಟಿ ಪ್ಲಾಟ್‌ಫಾರ್ಮ್ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಅಂದ್ಹಾಗೆ, ಶೋಧ, ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾಗಿದೆ. ಕೊಡಗಿನ ಮಡಿಕೇರಿಯಲ್ಲಿರುವ ಸಣ್ಣ ಕುಟುಂಬದ ಕಥೆ. ಘಟನೆಯೊಂದರ ಬಳಿಕ ಗಂಡ ತನ್ನ ಹೆಂಡತಿಯನ್ನೇ ಮರೆಯುತ್ತಾನೆ. ಅವನ ನೆನಪುಗಳನ್ನು ಪುನಃ ತರುವ ಪ್ರಯತ್ನದಲ್ಲೇ ಕಥೆ ತೆರೆದುಕೊಳ್ಳುತ್ತದೆ. ಇದೊಂದು ಸಸ್ಪೆನ್ಸ್ ಥಿಲ್ಲರ್ ಕಥೆಯಾಗಿದೆ. ಶೋಧ ವೆಬ್ ಸೀರಿಸ್ ನಲ್ಲಿ ದಿಯಾ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಈ ವೆಬ್ ಸೀರೀಸ್ ಅನ್ನು ಕೆಆರ್‌ಜಿ ಸ್ಟುಡಿಯೋದ ಕಾರ್ತಿಕ್ ಗೌಡ ನಿರ್ಮಾಣ ಮಾಡಿದ್ದು, ಸುನಿಲ್ ಮೈಸೂರು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಶೋಧ ಟ್ರೇಲರ್ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಶೋಧ ದಲ್ಲಿ ಅರುಣ್ ಸಾಗರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅನುಷಾ ರಂಗನಾಥ್ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.. ಇನ್ನೊಂದು ವಿಶೇಷ ಏನಪ್ಪ ಅಂದ್ರೆ, ‘ಕಾಂತಾರ’ ನಟಿ ಸಪ್ತಮಿ ಗೌಡ ಕೂಡ ಕಾಣಿಸಿಕೊಂಡಿದ್ದಾರೆ. ಲೂಸಿಯಾ’ ಡೈರೆಕ್ಟರ್ ಪವನ್ ಕುಮಾರ್ ಮತ್ತು ಸಿರಿ ರವಿಕುಮಾರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ವೆಬ್ ಸರಣಿಯಲ್ಲಿ ಒಟ್ಟು ಆರು ಎಪಿಸೋಡ್‌ಗಳು ಇವೆ.

ನೋಡಿರಿ

