ಹೊಸದೇನಿಲ್ಲ.. ಎಲ್ಲಾ ಔಟ್‌ಡೇಟೆಡ್ – ಒನ್ ಮ್ಯಾನ್ ಶೋ, ಹೇಗಿದೆ OG?

ಹೊಸದೇನಿಲ್ಲ.. ಎಲ್ಲಾ ಔಟ್‌ಡೇಟೆಡ್  –  ಒನ್ ಮ್ಯಾನ್ ಶೋ, ಹೇಗಿದೆ OG?

ಹರಿಹರ ವೀರಮಲ್ಲು ಸೋಲಿನ ಬಳಿಕ ಪವನ್ ಕಲ್ಯಾಣ್ ನಟಿಸಿರುವ ಮತ್ತೊಂದು ಸಿನಿಮಾ ರಿಲೀಸ್ ಆಗಿದೆ. ಅದುವೇ ಓಜಿ . ದಾನಯ್ಯ ನಿರ್ಮಾಣದ ಹಾಗೂ ಸುಜಿತ್ ನಿರ್ದೇಶನದ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಾಕಿತ್ತು. ಆದ್ರೆ ರಿಲೀಸ್ ಆದ್ರೂ ಮೇಲೆ ಹೇಳಿಕೊಳ್ಳುವ ತರ ಸದ್ದು ಮಾಡ್ತಿಲ್ಲ.

ಸಾಹೋ  ಸೋಲಿನ ಬಳಿಕ ಕಣ್ಮರೆಯಾಗಿದ್ದ ನಿರ್ದೇಶಕ ಸುಜಿತ್‌ಗೆ ‘ಓಜಿ’ ಕಮ್ ಬ್ಯಾಕ್ ಸಿನಿಮಾ. ಹಾಗೇ ರಾಜಕೀಯದಲ್ಲಿ ಮುಳುಗಿ ಹೋಗಿದ್ದ ಪವನ್ ಕಲ್ಯಾಣ್‌ಗೂ ‘ಓಜಿ’ (OG) ವಿಭಿನ್ನ ಅನುಭವ ನೀಡಿದೆ. ಪವನ್ ಕಲ್ಯಾಣ್ ಮತ್ತೊಮ್ಮೆ ಮಾಸ್ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬರುತ್ತಿರೋದು ಸಿನಿಮಾದ ಕ್ರೇಜ್ ಅನ್ನು ದುಪ್ಪಟ್ಟು ಮಾಡಿದೆ.

ಇದನ್ನೂ ಓದಿ: ಬೆಳ್ತಂಗಡಿ ಕೋರ್ಟ್‌ಗೆ ಚಿನ್ನಯ್ಯ ಹಾಜರು! – ತಿಮರೋಡಿಗಾಗಿ ಪೊಲೀಸರಿಂದ ಹುಡುಕಾಟ!

OG ಕಥೆಯೇನು?

ಪವನ್ ಕಲ್ಯಾಣ್  (ಓಜಸ್ ಗಂಭೀರ್) ಜಪಾನಿನ ಸಮುರಾಯ್ ಕುಲದ ಕೊನೆಯ ವಂಶಸ್ಥ. ಓಜಿಯನ್ನು ಸತ್ಯದೇವ್  ದತ್ತು ಪಡೆದಿದ್ದರಿಂದ ಅವನು ಮುಂಬೈಗೆ ಬರುತ್ತಾನೆ. ಸತ್ಯದೇವ್ ಕುಟುಂಬವನ್ನು ರಕ್ಷಿಸುವುದೇ ಓಜಿಯ ಬಹುಮುಖ್ಯ ಕೆಲಸ ಆಗುತ್ತೆ. ಸತ್ಯದೇವ್ ಅಥವಾ ಸತ್ಯದಾದ ಜಪಾನ್‌ನಿಂದ ತಂದ ಅಪಾರ ಚಿನ್ನವನ್ನು ವ್ಯಾಪಾರದಲ್ಲಿ ತೊಡಗಿಸಿ, ತನ್ನಿಬ್ಬರು ಮಕ್ಕಳು ವೆಂಕಟ್ ಮತ್ತು ಶ್ಯಾಮ್ ಜೊತೆ ದೊಡ್ಡ ಸಾಮ್ರಾಜ್ಯವನ್ನು ಕಟ್ಟುತ್ತಾರೆ. ಒಂದು ದಿನ ಸತ್ಯದೇವ್‌ಗೆ ಮುಂಬೈನ ಬಂದರಿನಲ್ಲಿ ಆರ್‌ಡಿಎಕ್ಸ್ ಸಿಗುತ್ತೆ. ಇದು ಹೇಗೆ ಬಂತು? ಇದನ್ನು ತಂದವರು ಯಾರು? ಸತ್ಯದೇವ್ ಹಿರಿಯ ಮಗನನ್ನು ಓಜಿ ಕೊಂದಿದ್ದೇಕೆ? ಸಿನಿಮಾದ ಕಥೆ ಈ ಪ್ರಶ್ನೆಗಳ ಸುತ್ತ ಸಾಗುತ್ತಾ ಮುಂದೆ ಹೋಗುತ್ತೆ?

ಓಜಿ ಅಲಿಯಾಸ್ ಪವನ್ ಕಲ್ಯಾಣ್ ಪವನ್ ಕಲ್ಯಾಣ್ ಸ್ಟೈಲ್ ಹಾಗೂ ಮ್ಯಾನರಿಸಂಗೆ ಅಭಿಮಾನಿಗಳಿದ್ದಾರೆ. ‘ಓಜಿ’ ಆ ಸ್ವ್ಯಾಗ್ ಅನ್ನು ಮತ್ತೆ ನೋಡುವುದಕ್ಕೆ ಸಿಗುತ್ತೆ. ಈ ಸಿನಿಮಾದಲ್ಲಿ ಪವನ್ ಕಲ್ಯಾಣ್ ಮ್ಯಾನರಿಸಂ, ಡೈಲಾಗ್ ಡಿಲೇವರಿ ಹಾಗೂ ಸಾಹಸ ದೃಶ್ಯಗಳು ಗಮನ ಸೆಳೆಯುತ್ತವೆ. ಇಂತಹ ಚಿತ್ರಕ್ಕಾಗಿ ಇಷ್ಟು ದಿನ ಕಾಯುತ್ತಿದ್ದ ಅಭಿಮಾನಿಗಳಿಗೆ ಪವರ್ ಸ್ಟಾರ್ ಭರ್ಜರಿ ಮನರಂಜನೆ ಕೊಟ್ಟಿದ್ದಾರೆ. ಲವ್ ಸೀನ್‌ಗಳು ಹಾಗೂ ಸೆಂಟಿಮೆಂಟ್ ದೃಶ್ಯಗಳಲ್ಲಿ ಪವನ್ ಕಲ್ಯಾಣ್‌ರನ್ನು ವಿಭಿನ್ನವಾಗಿ ನೋಡಬಹುದು

ಸುಚಿತ್ ಸ್ಟೈಲಿಶ್ ಕಥೆಯನ್ನು ಹೆಣೆದಿದ್ದರೂ, ಚಿತ್ರಕಥೆಯಲ್ಲಿ ಹೆಣೆದಿದ್ದಾರೆ. ಮೊದಲಾರ್ಧ ಇಷ್ಟ ಆಗಿದ್ದರೂ, ದ್ವಿತೀಯಾರ್ಧ ಎಳೆದಿದ್ದಾರೆ ಎನಿಸುತ್ತೆ. ಎಡಿಟಿಂಗ್ ಇನ್ನೂ ಶಾರ್ಫ್ ಆಗಿರಬೇಕಿತ್ತು. ನಾಯಕಿ ಪ್ರಿಯಾಂಕಾ ಮೋಹನ್ ಪಾತ್ರ ಇನ್ನಷ್ಟು ಇರಬೇಕಿತ್ತು. ಭಜರಂಗಿ ಲೋಕಿಗೆ ಒಳ್ಳೆಯ ಪಾತ್ರ ಸಿಕ್ಕಿದ್ದರೂ, ಸ್ಕ್ರೀನ್ ಸ್ಪೇಸ್ ಕಮ್ಮಿಯಿದೆ. ಪ್ರಕಾಶ್ ರಾಜ್ ಹಾಗೂ ಅರ್ಜುನ್ ದಾಸ್ ಇಬ್ಬರೂ ಹೆಚ್ಚಾಗಿ ಬಳಸಿಕೊಂಡಿಲ್ಲ

Kishor KV