ಪವಿತ್ರಾ ಲೋಕೇಶ್ – ನರೇಶ್ ಸಂಬಂಧದ “ರಿಯಲ್” ಸಿನಿಮಾ! –  ಹೀರೋ, ಹೀರೋಯಿನ್ ಯಾರು ಗೊತ್ತಾ?

ಪವಿತ್ರಾ ಲೋಕೇಶ್ – ನರೇಶ್ ಸಂಬಂಧದ “ರಿಯಲ್” ಸಿನಿಮಾ! –  ಹೀರೋ, ಹೀರೋಯಿನ್ ಯಾರು ಗೊತ್ತಾ?

ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಕೆಲವು ತಿಂಗಳಿನಿಂದ ಭಾರಿ ಸುದ್ದಿಯಲ್ಲಿದ್ದಾರೆ. ತಾನು ಮತ್ತು ಪವಿತ್ರಾ ಲೋಕೇಶ್ ರಿಲೇಷನ್ ಶಿಪ್ ನಲ್ಲಿದ್ದೇವೆ ಎಂದು ಮಾಧ್ಯಮಗಳ ಮುಂದೆ ನರೇಶ್ ಹೇಳಿದ್ದರು. ಇದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಇದಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಅವರಿಬ್ಬರು ಪರಸ್ಪರ ಕಿಸ್ ಮಾಡುವ ವಿಡಿಯೋವನ್ನು ಕೂಡ ಶೇರ್ ಮಾಡಿದ್ದರು. ಈ ವಿಡಿಯೋ ರಿಲೀಸ್ ಬೆನ್ನಲ್ಲೇ ಅವರಿಬ್ಬರು ಮದುವೆಯಾಗಲಿದ್ದಾರೆ ಅನ್ನೋ ಗಾಸಿಪ್ ಕೂಡ ಹರಿದಾಡಿತ್ತು. ಇದೀಗ ಮತ್ತೆ ಅವರಿಬ್ಬರು ಸುದ್ದಿಯಲ್ಲಿದ್ದಾರೆ.

ಇದನ್ನೂ ಓದಿ: ಚಂದನವನಕ್ಕೆ ಕಾಲಿಡಲಿದ್ದಾರೆ ಚೆಂದನೆಯ ರಾಧೆ – ವಿನಯ್ ರಾಜ್‌ಕುಮಾರ್ ಜೊತೆ ಸ್ಯಾಂಡಲ್‌ವುಡ್‌ಗೆ ಮಲ್ಲಿಕಾ ಸಿಂಗ್

ಹೊಸ ವರ್ಷದಂದು ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಪರಸ್ಪರ ಕಿಸ್ ಮಾಡಿಕೊಳ್ಳುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದಾದ ಬಳಿಕ ಅವರಿಬ್ಬರು ಮದುವೆಯಾಗುತ್ತಿದ್ದಾರೆ ಅನ್ನೋ ಸುದ್ದಿಯೂ ಹರಿದಾಡಿತ್ತು. ಇದೀಗ ಅವರ ಸಂಬಂಧದ ಮೇಲೆ ನಿರ್ದೇಶಕ ಎಂ.ಆರ್.ರಾಜು ಸಿನಿಮಾ ಮಾಡಿದ್ದಾರಂತೆ. ಅಲ್ಲದೇ ಈ ಚಿತ್ರದಲ್ಲಿ ಸ್ವತಃ ಪವಿತ್ರಾ ಲೋಕೇಶ್ ಮತ್ತು ನರೇಶ್ ನಾಯಕ ಹಾಗೂ ನಾಯಕಿ ನಟಿಸುತ್ತಿದ್ದಾರಂತೆ. ಈಗಾಗಲೇ ಚಿತ್ರದ ಶೂಟಿಂಗ್ ಕೂಡ ಮುಗಿಸಲಾಗಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಮೂಲಗಳ ಪ್ರಕಾರ ಈ ಸಿನಿಮಾದ ಬಹುತೇಕ ಶೂಟಿಂಗ್ ಮುಗಿದು ಸಂಕಲನದ ಕೆಲಸದಲ್ಲಿ ಚಿತ್ರ ತಂಡ ಬ್ಯುಸಿಯಾಗಿದೆಯಂತೆ.  ಹೊಸ ವರ್ಷದ ದಿನದಂದು ಹಂಚಿಕೊಂಡಿದ್ದ ವಿಡಿಯೋ ಕೂಡ ಇದೇ ಸಿನಿಮಾದ್ದು ಎಂದು ಹೇಳಲಾಗುತ್ತಿದೆ.

ಈ ಸಿನಿಮಾದಲ್ಲಿ ನರೇಶ್ ಬದುಕು, ಎರಡನೇ ಪತ್ನಿ ರಮ್ಯಾ ಜೊತೆಗಿನ ಮದುವೆ. ಅದಕ್ಕೂ ಮೊದಲಿನ ಮದುವೆ ಹಾಗೂ ಪವಿತ್ರಾ ಲೋಕೇಶ್ ತಮ್ಮ ಬಾಳಿನಲ್ಲಿ ಬಂದದ್ದು ಹೇಗೆ? ಅನ್ನೋ ಎಲ್ಲ ಸಂಗತಿಗಳನ್ನು ಚಿತ್ರಕಥೆಯಲ್ಲಿ ಬೆರೆಸಿದ್ದಾರಂತೆ. ಸದ್ಯದಲ್ಲೇ ಈ ಸಿನಿಮಾವನ್ನು ರಿಲೀಸ್ ಮಾಡುವ ಪ್ಲ್ಯಾನ್ ಕೂಡ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸಿನಿಮಾ ಬಗ್ಗೆ ನಿರ್ದೇಶಕರಾಗಲಿ ಅಥವಾ ನರೇಶ್ ಮತ್ತು ಪವಿತ್ರಾ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಿನಿಮಾ ಸಿದ್ಧವಾಗಿದ್ದು ಸತ್ಯ ಎನ್ನುತ್ತಾರೆ ಅವರ ಆಪ್ತರು. ಆ ವಿಡಿಯೋ ತುಣುಕನ್ನೇ ಅವರು ಹೊಸ ವರ್ಷದ ದಿನದಂದು ಹಂಚಿಕೊಂಡಿದ್ದು ಎಂದೂ ಹೇಳುತ್ತಾರೆ. ತಮ್ಮ ಪ್ರೇಮವನ್ನು ನರೇಶ್ ಸಾಬೀತು ಪಡಿಸುತ್ತಾ ಬಂದರೂ  ಪವಿತ್ರಾ ಮಾತ್ರ ಅಧಿಕೃತವಾಗಿ ಈವರೆಗೂ ಎಲ್ಲಿಯೂ ಹೇಳಿಕೊಂಡಿಲ್ಲ. ಹಾಗಾಗಿ ಸಿನಿ ಪ್ರೇಕ್ಷಕರಲ್ಲಿ ಸಿನಿಮಾ ಬಗ್ಗೆ ಕುತೂಹಲವಂತೂ ಮೂಡಿದೆ.

suddiyaana